ರಾಜ್ಯದ ಇಲ್ಲೆಲ್ಲಾ ನ.03ರ ವರೆಗೆ ಭಾರೀ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

By Kannadaprabha NewsFirst Published Oct 31, 2021, 8:38 AM IST
Highlights
  • ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ನ.3 ರವರೆಗೆ ಸಿಡಿಲು ಮಿಂಚು ಗಾಳಿ ಸಹಿತ ಭಾರಿ ಮಳೆ
  • ಸಿಡಿಲು ಮಿಂಚು ಗಾಳಿ ಸಹಿತ ಭಾರಿ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ  ಹೇಳಿದೆ. 

ಬೆಂಗಳೂರು (ಅ.31): ರಾಜ್ಯದ ಕರಾವಳಿ (Coastal) ಮತ್ತು ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ನ.3 ರವರೆಗೆ ಸಿಡಿಲು ಮಿಂಚು ಗಾಳಿ ಸಹಿತ ಭಾರಿ ಮಳೆಯ (Heavy Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (weather Department)  ಹೇಳಿದೆ. 

ಬಂಗಾಳ ಕೊಲ್ಲಿಯಲ್ಲಿ  (Bea of Bengal) ವಾಯುಬಾರ ಕುಸಿತ ಮತ್ತು ಹಿಂಗಾರು ಮಾರುತಗಳಿಂದಾಗಿ ಮಳೆಯ ಅಬ್ಬರ ಹೆಚ್ಚಾಗಲಿದೆ. ನವೆಂಬರ್ 1 ರಂದು ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ (shivamogga) ಚಿಕ್ಕಮಗಳೂರು (Chikkamagaluru) ಹಾಸನ (Hassan) ಕೊಡಗು (kodagu) ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ (Yellow Alert) ನೀಡಲಾಗಿದೆ. 

ಚಿಕ್ಕಬಳ್ಳಾಪುರದಲ್ಲಿ ಪುಟಿದೇಳುತ್ತಿದೆ ಅಂರ್ತಜಲ ಮಟ್ಟ

ನ.2 ರಂದು ಈ ಜಿಲ್ಲೆಗಳ ಜೊತೆಗೆ ಚಾಮರಾಜನಗರ, ಮೈಸೂರು (Mysuru) ಮತ್ತು ಕರಾವಳಿಯ ಉತ್ತರ ಕನ್ನಡ, ಉಡುಪಿ (Udupi) ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 

ಯೆಲ್ಲೋ ಅಲರ್ಟ್ ನೀಡಲಾಗಿತ್ತು

 

ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಅಕ್ಟೋಬರ್‌ 29 ಮತ್ತು 30ರಂದು ಹಿಂಗಾರು ಮಾರುತಗಳು ಪ್ರಬಲವಾಗಲಿದ್ದು, ಗುಡುಗು ಸಹಿತ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಅ.29ಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ದಾವಣಗೆರೆ, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯಲ್ಲಿ ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿತ್ತು.

 ಅ.30ಕ್ಕೆ ಈ ಜಿಲ್ಲೆಗಳ ಜೊತೆಗೆ ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೂ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಅ.27 ಮತ್ತು ಅ.28ರಂದು ಮಳೆಯ ಅಬ್ಬರ ಇರುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಲಾಗಿತ್ತು.

ಉತ್ತರಾಖಂಡ ಮೇಘಸ್ಫೋಟ್ ಆರ್ಭಟ ಹೇಗಿತ್ತು?

ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಬೀದರ್‌ನಲ್ಲಿ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್‌ ಮತ್ತು ಶಿರಾಲಿಯಲ್ಲಿ ಗರಿಷ್ಠ 33.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಉಷ್ಣತೆ ವರದಿಯಾಗುತ್ತಿದ್ದು ಚಳಿಯ ವಾತಾವರಣ ಇದೆ.

ಬೆಳಗಾವಿಯ ಲೋಂಡಾ, ಶಿವಮೊಗ್ಗದ (Shivamogga) ಆಗುಂಬೆಯಲ್ಲಿ ತಲಾ 5 ಸೆಂ.ಮಿ. ಉತ್ತರ ಕನ್ನಡದ ಜಗಲ್‌ಬೆಟ್‌, ಮೈಸೂರಿನ (Mysuru) ಕೆಆರ್‌ ನಗರ ತಲಾ 4, ದಕ್ಷಿಣ ಕನ್ನಡದ ಪುತ್ತೂರು, ಮೈಸೂರಿನ ಬಿಳಿಕೆರೆ, ಕೊಡಗಿನ ನಾಪೊಕ್ಲು, ಚಿಕ್ಕಮಗಳೂರಿನ ಕಳಸದಲ್ಲಿ ತಲಾ 3 ಸೆಂಮೀ ಮಳೆಯಾಗಿದೆ.

  • ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ನ.3 ರವರೆಗೆ ಸಿಡಿಲು ಮಿಂಚು ಗಾಳಿ ಸಹಿತ ಭಾರಿ ಮಳೆ
  •  ಸಿಡಿಲು ಮಿಂಚು ಗಾಳಿ ಸಹಿತ ಭಾರಿ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ  ಹೇಳಿದೆ. 
  • ಬಂಗಾಳ ಕೊಲ್ಲಿಯಲ್ಲಿ  ವಾಯುಬಾರ ಕುಸಿತ ಮತ್ತು ಹಿಂಗಾರು ಮಾರುತಗಳಿಂದಾಗಿ ಮಳೆಯ ಅಬ್ಬರ ಹೆಚ್ಚಾಗಲಿದೆ
  • ನವೆಂಬರ್ 1 ರಂದು ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಚಿಕ್ಕಮಗಳೂರು ಗಹಾಸನ ಕೊಡಗು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್
  • ನ.2 ರಂದು ಈ ಜಿಲ್ಲೆಗಳ ಜೊತೆಗೆ ಚಾಮರಾಜನಗರ, ಮೈಸೂರು ಮತ್ತು ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್ 

 

click me!