ಈ ಬಾರಿ ಆನ್‌ಲೈನ್‌ನಲ್ಲಿ ಏರ್‌ ಶೋ ವೀಕ್ಷಿಸಿ

By Kannadaprabha NewsFirst Published Jan 18, 2021, 7:10 AM IST
Highlights

ಫೆ.3ರಿಂದ 5ರ ವರೆಗೆ ಯಲಹಂಕದ ವಾಯುನೆಲೆಯಲ್ಲಿ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ| 24 ಗಂಟೆಯೂ ಎಲ್ಲ ಚಟುವಟಿಕೆಗಳನ್ನು ವೀಕ್ಷಿಸಬಹುದಾಗಿದೆ| ಆನ್‌ಲೈನ್‌ ಮೂಲಕವೇ ಪ್ರದರ್ಶಕರ ಜತೆ ಚರ್ಚೆಗಳನ್ನು ನಡೆಸಬಹುದಾಗಿದೆ| 

ಬೆಂಗಳೂರು(ಜ.18): ಕೋವಿಡ್‌ ಹಿನ್ನೆಲೆಯಲ್ಲಿ 13ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ವರ್ಚುವಲ್‌ ಮೂಲಕ ಉಚಿತವಾಗಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಇದೇ ಫೆ.3ರಿಂದ 5ರ ವರೆಗೆ ಯಲಹಂಕದ ವಾಯುನೆಲೆಯಲ್ಲಿ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಪ್ರತಿ ಬಾರಿ ವೈಮಾನಿಕ ಪ್ರದರ್ಶನವನ್ನು ವೀಕ್ಷಣೆ ಮಾಡುವುದಕ್ಕೆ ನೂರಾರು ರುಪಾಯಿ ಟಿಕೆಟ್‌ ಖರೀದಿ ಮಾಡಿಕೊಂಡು ಹೋಗಬೇಕಾಗಿತ್ತು. ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಅವಧಿಯನ್ನು 5 ದಿನಗಳ ಬದಲಿಗೆ 3 ದಿನಗಳಿಗೆ ಇಳಿಸಿ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಇದಕ್ಕೆ ಬದಲಾಗಿ ಸಾರ್ವಜನಿಕರು ಆನ್‌ಲೈನ್‌ ಮೂಲಕ ವೈಮಾನಿಕ ಪ್ರದರ್ಶವನ್ನು ಉಚಿತವಾಗಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಏರ್ ಶೋ: ಹೈಕೋರ್ಟ್‌ನಿಂದ ಸರ್ಕರಕ್ಕೆ ಮಹತ್ವದ ನಿರ್ದೇಶಕ

ವರ್ಚುವಲ್‌ ಮೂಲಕ ವೀಕ್ಷಣೆ ಮಾಡುವವರು www.aeroindiavirtual.in ವೆಬ್‌ಸೈಟ್‌ನಲ್ಲಿ ಇ-ಮೇಲ್‌ ಐಡಿ ನೋಂದಣಿ ಮಾಡಿಕೊಳ್ಳಬೇಕಿದೆ. ಈ ಮೂಲಕ ದಿನ 24 ಗಂಟೆಯೂ ಎಲ್ಲ ಚಟುವಟಿಕೆಗಳನ್ನು ವೀಕ್ಷಿಸಬಹುದಾಗಿದೆ. ಜತೆಗೆ ಬ್ಯುಸಿನೆಸ್‌ ಟು ಬ್ಯುಸಿನೆಟ್‌ ಸಭೆ, ಸಮಾವೇಶಗಳು, ಮಳಿಗೆಗಳನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ ಆನ್‌ಲೈನ್‌ ಮೂಲಕವೇ ಪ್ರದರ್ಶಕರ ಜತೆ ಚರ್ಚೆಗಳನ್ನು ನಡೆಸಬಹುದಾಗಿದೆ. ಹಾಗೆಯೇ, ಮೂರು ದಿನ ನಡೆಯಲಿರುವ ವೈಮಾನಿಕ ಪ್ರದರ್ಶನವನ್ನು ನೋಡಬಹುದಾಗಿದೆ.
 

click me!