
ನವದೆಹಲಿ(ಸೆ.01): ಜಿ ರಾಷ್ಟ್ರಪತಿ ಹಾಗೂ ಭಾರತ ಕಂಡ ಓರ್ವ ಅದ್ಭುತ ರಾಜಕೀಯ ನೇತಾರ ಭಾರತ ರತ್ನ ಪ್ರಣಬ್ ಮುಖರ್ಜಿ ಅಸ್ತಂಗತರಾಗಿದ್ದಾರೆ. ರಾಷ್ಟ್ರಪತಿ ಕೋವಿಂದ್, ಪಿಎಂ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಗಣ್ಯರೆಲ್ಲಾ ಮುಖರ್ಜಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಹೀಗಿರುವಾಗ ಕರ್ನಾಟಕ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಣಬ್ ಮುಖರ್ಜಿ ಕುರಿತು ಮಾತನಾಡುತ್ತಾ ಮಹಾತ್ಮ ಗಾಂಧೀಜಿಯವರನ್ನು ಕೊಂದ ಆರೆಸ್ಸೆಸ್ ಶಿಬಿರಕ್ಕೆ ಹೋಗಿ ಮುಖರ್ಜಿ ಭಾಷಣ ಮಾಡಿದ್ದು ನನಗೆ ಯಕ್ಷ ಪ್ರಶ್ನೆ ಎಂಬ ಹೇಳಿಕೆ ನೀಡಿರುವುದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
42 ವರ್ಷ ನಮ್ಮಿಬ್ಬರ ಒಡನಾಟ: ಹೈ-ಕ ಸ್ಥಾನಮಾನ ಸಹಿ ಅವರದೇ: ಖರ್ಗೆ
ಪ್ರಣಬ್ ಮುಖರ್ಜಿಯವರ ಕುರಿತು ಮಾತನಾಡುತ್ತಾ 'ರಾಜೀವ್ ಪ್ರಧಾನಿಯಾಗಿದ್ದಾಗ ಪಕ್ಷ ತೊರೆದು ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಾರ್ಟಿ ಕಟ್ಟಿದ್ದರು. ಮುಂದೆ ಪ್ರಣಬ್ ಮುಖರ್ಜಿ ಹಣಕಾಸು ಸಚಿವರಾಗಿದ್ದರು, ಆಗ ಮನಮೋಹನ್ ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿದ್ದರು. ಇನ್ನು ಮನಮೋಹನ್ ಪ್ರಧಾನಿಯಾಗಿದ್ದಾಗ, ಪ್ರಣಬ್ ಹಣಕಾಸು ಸಚಿವರಾಗಿದ್ದರು. ಹೀಗಿರುವಾಗ ಅವರು RSSಗೆ ಹೋಗಿದ್ದೇ ಯಕ್ಷಪ್ರಶ್ನೆ' ಎಂದಿದ್ದಾರೆ.
ಪ್ರಣಬ್ ದಾ ನಿಧನ ಹಿನ್ನೆಲೆ, ಬಾಂಗ್ಲಾದಲ್ಲಿ 1 ದಿನ ರಾಷ್ಟ್ರೀಯ ಶೋಕಾಚರಣೆ!
ಆರ್ ಎಸ್ ಎಸ್ ಒಂದು ಕೋಮುವಾದಿ ಸಂಘಟನೆ. 50 ವರ್ಷ ರಾಜಕಾರಣ ಮಾಡಿದವರು ಅಲ್ಲಿಗೆ ಹೋಗಿ ಭಾಷಣ ಮಾಡ್ತಾರೆ ಅಂದ್ರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಆರೆಸ್ಸೆಸ್ ಶಿಬಿರಕ್ಕೆ ಹೋಗಿ ಪ್ರಣಬ್ ಮುಖರ್ಜಿ ಭಾಷಣ ಮಾಡಿದ್ದು ನನಗೆ ಇಂದಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ ಎಂದಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ