ಮತದಾನ ಮಾಡದವರಿಗೆ ಸೌಲಭ್ಯ ಕಡಿತದ ಎಚ್ಚರಿಕೆ ಸೂಕ್ತ: ನ್ಯಾ.ವೇಣುಗೋಪಾಲ ಗೌಡ

Published : May 10, 2023, 09:39 AM IST
ಮತದಾನ ಮಾಡದವರಿಗೆ ಸೌಲಭ್ಯ ಕಡಿತದ ಎಚ್ಚರಿಕೆ ಸೂಕ್ತ: ನ್ಯಾ.ವೇಣುಗೋಪಾಲ ಗೌಡ

ಸಾರಾಂಶ

ಯಾರು ಮತದಾನ ಮಾಡುವುದಿಲ್ಲವೋ, ಅವರು ತಮ್ಮ ಜೀವನ ಗುಣಮಟ್ಟವನ್ನು ವೃದ್ಧಿಸಿಕೊಳ್ಳಲು ಸಾಧ್ಯವಿಲ್ಲ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರೆ ಜನರ ಜೀವನವೂ ಸುಧಾರಣೆಯಾಗಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಮತದಾನದ ಹಕ್ಕು ಬಹಳ ಪ್ರಮುಖವಾಗುತ್ತದೆ: ನ್ಯಾ.ಎ.ಎನ್‌.ವೇಣುಗೋಪಾಲ ಗೌಡ

ಬೆಂಗಳೂರು(ಮೇ.10): ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳಬೇಕಾದರೆ ಪ್ರತಿಯೊಬ್ಬರು ಮತ ಚಲಾಯಿಸಬೇಕು. ದೇಶ ಸದೃಢವಾಗಿರಬೇಕಾದರೆ, ಜನರ ಸ್ಥಿತಿಗತಿ ಹಾಗೂ ಪರಿಸರ ಉತ್ತಮವಾಗಿರಬೇಕಾದರೆ ಮತದಾನದಲ್ಲಿ ಭಾಗಿಯಾಗಿ ನಮ್ಮ ಹಕ್ಕು ಚಲಾಯಿಸಬೇಕು ಹಾಗೂ ಜನಪರ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾರು ಮತದಾನ ಮಾಡುವುದಿಲ್ಲವೋ, ಅವರು ತಮ್ಮ ಜೀವನ ಗುಣಮಟ್ಟವನ್ನು ವೃದ್ಧಿಸಿಕೊಳ್ಳಲು ಸಾಧ್ಯವಿಲ್ಲ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರೆ ಜನರ ಜೀವನವೂ ಸುಧಾರಣೆಯಾಗಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಮತದಾನದ ಹಕ್ಕು ಬಹಳ ಪ್ರಮುಖವಾಗುತ್ತದೆ.

ಸರ್ಕಾರದ ಧ್ಯೇಯೋದ್ದೇಶಗಳು ಈಡೇರಬೇಕಾದರೆ ಜನ ಮತದಾನದಲ್ಲಿ ಭಾಗಿಯಾಗುವುದು ಬಹಳ ಮುಖ್ಯ. ಮತದಾನದ ಹಕ್ಕು ಎಷ್ಟುಮುಖ್ಯವೋ; ಅಷ್ಟೇ ಮುಖ್ಯ ಮತ ಚಲಾಯಿಸುವುದು. ಉತ್ತಮ ಅಭ್ಯರ್ಥಿಗಳಿಗೆ, ತಮ್ಮ ಹಕ್ಕುಗಳನ್ನು ರಕ್ಷಣೆ ಮಾಡುವಂತ, ಹಿತಾಸಕ್ತಿ ಕಾಪಾಡುವಂತಹ ಅಭ್ಯರ್ಥಿಗಳಿಗೆ ಜನರು ಮುುಕ್ತ ಮತ್ತು ನಿರ್ಭೀತಿಯಿಂದ ಮತ ನೀಡಿ ಆಯ್ಕೆ ಮಾಡಿಕೊಳ್ಳಬಹುದು.

ಪ್ರವಾಸೋದ್ಯಮ ಇಲಾಖೆ ಭರ್ಜರಿ ಆಫರ್: ಮತ ಚಲಾಯಿಸಿದವರಿಗೆ ಶೇ.50 ರಿಯಾಯಿತಿ

ಅರಿವು:

ಪ್ರತಿ ಬಾರಿಯೂ ಚುನಾವಣೆ ಎದುರಾದಾಗಲೂ ಸರ್ಕಾರಿ ಪ್ರಾಧಿಕಾರಗಳು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಮೂಲಕ ಜನರಿಗೆ ಮತದಾನ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇಷ್ಟಾದರೂ ಮತದಾನದ ಪ್ರಮಾಣ ತೃಪ್ತಿದಾಯಕವಾಗಿ ಹೆಚ್ಚುತ್ತಿಲ್ಲ. ಹಳ್ಳಿ ಭಾಗದಲ್ಲಿ ಮತದಾನದ ಪ್ರಮಾಣ ಹೆಚ್ಚಿದೆ. ಆದರೆ, ನಗರ ಭಾಗದ ಜನ ಮತದಾನದ ಬಗ್ಗೆ ರ್ನಿಲಕ್ಷ್ಯ ತೋರುತ್ತಾರೆ. ಶ್ರೀಮಂತ ವರ್ಗದಲ್ಲಿ ಮತ ಚಲಾವಣೆಯ ಬಗ್ಗೆ ಕೊಂಚ ಅಸಡ್ಡೆಯಿದೆ. ಇದು ಮತದಾನದ ಪ್ರಮಾಣ ಕಡಿಮೆಯಾಗಲು ಕಾರಣ.

ಎಚ್ಚರಿಕೆ:

ಹೆಚ್ಚು ಜನ ಮತದಾನದಲ್ಲಿ ಭಾಗಿಯಾಗಬೇಕಾದರೆ, ಮತದಾನದ ಹಕ್ಕು, ಅದರ ಮೌಲ್ಯ ಮತ್ತು ಅದರಿಂದ ದೇಶ-ರಾಜ್ಯ ಮತ್ತು ಜನರಿಗೆ ಆಗುವ ಪ್ರಯೋಜನಗಳ ಬಗ್ಗೆ ಶಾಲಾ/ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಬೇಕು. ಆಗ ಮಕ್ಕಳು ತಮ್ಮ ಪೋಷಕರಲ್ಲಿ ಮತದಾನದ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ. ಇನ್ನೂ ಸರ್ಕಾರಗಳು ಅಕ್ಕಿ-ಸಿಲಿಂಡರ್‌ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಪೂರೈಕೆ ಯೋಜನೆಗಳನ್ನು ಪ್ರಕಟಿಸುತ್ತವೆ. ಆ ಸೌಲಭ್ಯ ಪಡೆಯಬೇಕಾದರೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಸರ್ಕಾರಗಳು ಜನರಿಗೆ ಸೂಚಿಸಬೇಕು. ಒಂದೆರಡು ಬಾರಿ ಹೊರತುಪಡಿಸಿ ನಿರಂತರವಾಗಿ ಮತದಾನದಿಂದ ದೂರು ಉಳಿದ ಜನರಿಗೆ ಸರ್ಕಾರಿ ಯೋಜನೆ/ಸೌಲಭ್ಯ-ಸವಲತ್ತಿನ ಲಾಭ ಕಡಿತಗೊಳಿಸುವ ಎಚ್ಚರಿಕೆ ನೀಡಬೇಕಾಗುತ್ತದೆ. ಅದರಿಂದ ಖಂಡಿತವಾಗಿಯೂ ಜನ ಮತದಾನ ಮಾಡುತ್ತಾರೆ. ಚುನಾವಣೆಯಲ್ಲಿ ನಿಂತ ಯಾವೊಬ್ಬ ಅಭ್ಯರ್ಥಿಯೂ ಆಯ್ಕೆಯಾಗಲು ಸೂಕ್ತವಾಗಿಲ್ಲ ಎಂಬ ಅಭಿಪ್ರಾಯ ಹೊಂದಿದ್ದರೆ, ‘ನೋಟಾ’ಗಾದರೂ ಮತ ನೀಡಬಹುದು. ಮತದಾನ ಮಾಡದೆ ಮನೆಯಲ್ಲಿ ಕುಳಿತರೆ, ದೇಶ ಮತ್ತು ರಾಜ್ಯದ ಸುಭಿಕ್ಷೆ ಬಗ್ಗೆ ಜನರಿಗೆ ಕಾಳಜಿ ಇಲ್ಲ ಎಂದಾಗುತ್ತದೆ. ಇದು ಆಗಬಾರದು.

ಚುನಾವಣಾ ಭ್ರಷ್ಟಾಚಾರ ನಿಲ್ಲಬೇಕಾದರೆ ಮತದಾರರಿಂದಲೇ ಬದಲಾವಣೆ ಆಗಬೇಕು. ಚುನಾವಣಾ ಭ್ರಷ್ಟಾಚಾರದಲ್ಲಿ ರಾಜಕೀಯ ಪಕ್ಷಗಳ, ಮುಖಂಡರು, ಅಭ್ಯರ್ಥಿಗಳು, ಕಾರ್ಯಕರ್ತರ ಮತ್ತು ಮತದಾರರ ಪಾತ್ರವಿದೆ. ಖಂಡಿತವಾಗಿಯೂ ಚುನಾವಣಾ ಭ್ರಷ್ಟಾಚಾರ ತೊಲಗಲೇಬೇಕು. ಮತದಾರವನ್ನು ಓಲೈಸುವುದೇ ಒಂದು ಭ್ರಷ್ಟಾಚಾರ. ಮತದಾನ ಮಾಡುವುದು ತಮ್ಮ ಕರ್ತವ್ಯ. ಮತ ಚಲಾಯಿಸಲೇಬೇಕು. ಮತವನ್ನು ಮಾರಾಟ ಮಾಡಿಕೊಳ್ಳಬಾರದು ಎಂಬ ಪ್ರಜ್ಞೆ ಮತದಾರರಲ್ಲಿ ಮೂಡಿದರೆ ಭ್ರಷ್ಟಾಚಾರ ತಡೆಯಲು ಸ್ವಲ್ಪಮಟ್ಟಿಗಾದರೂ ಸಾಧ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ