ಶ್ಚಿಯನ್ ಧರ್ಮ ಪ್ರಚಾರಕ್ಕೆ ಬಂದಿದ್ದ ಇಬ್ಬರು ಮಹಿಳೆಯರನ್ನ ಸ್ಥಳೀಯರು ಅಟ್ಟಾಡಿಸಿಕೊಂಡು ಹೋದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆಯಲ್ಲಿ ನಡೆದಿದೆ.
ಉಡುಪಿ (ಫೆ.22): ಕ್ರಿಶ್ಚಿಯನ್ ಧರ್ಮ ಪ್ರಚಾರಕ್ಕೆ ಬಂದಿದ್ದ ಇಬ್ಬರು ಮಹಿಳೆಯರನ್ನ ಸ್ಥಳೀಯರು ಅಟ್ಟಾಡಿಸಿಕೊಂಡು ಹೋದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆಯಲ್ಲಿ ನಡೆದಿದೆ.
ಧರ್ಮ ಪ್ರಚಾರ ಮಾಡಲು ಉಪ್ಪಿನಕೋಟೆಗೆ ಬಂದಿದ್ದ ಇಬ್ಬರು ಮಹಿಳೆಯರು. ಸ್ಥಳೀಯರಿಗೆ ಕ್ರಿಶ್ಚಿಯನ್ ಮತದ ಬಗ್ಗೆ ಪ್ರಚಾರ ಮಾಡಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬ, ಮತಾಂತರ ಮಾಡಲು ಬಂದಿದ್ದೀರ ಎಂದು ಪ್ರಶ್ನಿಸಿದ್ದಾನೆ. ಮಹಿಳೆಯರ ಕೈಯಲ್ಲಿ ಪ್ರಚಾರದ ಪುಸ್ತಕಗಳಿರುವುದು ಕಂಡು ಆಕ್ರೋಶವ್ಯಕ್ತಪಡಿಸಿರುವ ಸ್ಥಳೀಯ ವ್ಯಕ್ತಿ, ದೊಣ್ಣೆ ಹಿಡಿದು ಇಲ್ಲಿಂದ ಹೊರ ನಡೆತಿರೋ ದೊಣ್ಣೆಯಿಂದ ಬಾರಿಸಲೋ ಎಂದು ಅವಾಜ್ ಹಾಕಿದ್ದಾನೆ. ಇನ್ನೊಮ್ಮೆ ಈ ಭಾಗಕ್ಕೆ ಬಾರದಂತೆ ಗದರಿಸಿ ಓಡಿಸಿದ್ದಾನೆ.
undefined
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.
ಅಂಗನವಾಡಿ ಕಾರ್ಯಕರ್ತೆಯಿಂದಲೇ ಮತಾಂತರ: 'ಮತಾಂತರ ನನ್ನಿಷ್ಟ' ಎಂದ ಮಹಿಳೆ ಅಧಿಕಾರಿಗಳ ಮುಂದೆ ಹೈಡ್ರಾಮಾ!