ಇಡೀ ದೇಶದಲ್ಲಿ ವಕ್ಫ್ ಬೋರ್ಡ್ ರದ್ದು ಮಾಡಬೇಕು ಇದರಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ ಸರ್ಕಾರಕ್ಕೆ ಉಳಿತಾಯವಾಗುತ್ತದೆ ಎಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬೆಂಗಳೂರು (ಸೆ.1) : ಇಡೀ ದೇಶದಲ್ಲಿ ವಕ್ಫ್ ಬೋರ್ಡ್ ರದ್ದು ಮಾಡಬೇಕು ಇದರಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ ಸರ್ಕಾರಕ್ಕೆ ಉಳಿತಾಯವಾಗುತ್ತದೆ ಎಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಮಂಡಳಿಯನ್ನು ಯಾರೂ ಪ್ರಶ್ನೆ ಮಾಡದಂತಾಗಿದೆ. ದೇಶದ್ಯಾಂತ ಕೋಟ್ಯಂತರ ಬೆಲೆಬಾಳುವ ಸರ್ಕಾರದ ಆಸ್ತಿಪಾಸ್ತಿ ವಕ್ಫ್ ಬೋರ್ಡ್ ಪಾಲಾಗಿದೆ ಹೀಗಾಗಿ ಮೊದಲು ವಕ್ಫ್ ಕಾಯ್ದೆ ರದ್ದು ಮಾಡಬೇಕು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುತ್ತೇನೆ ಎಂದರು.
ಟೀಂ ಇಂಡಿಯಾ ಗೆಲುವು ಖಚಿತ
ಇದೇ ವೇಳೆ ಇಂಡಿಯಾ-ಪಾಕಿಸ್ತಾನ(India-pakistan match) ನಡುವೆ ನಡೆಯಲಿರುವ ಏಷ್ಯಾಕಪ್ ಪಂದ್ಯ(Asiacup match india pakistan)ದ ಬಗ್ಗೆ ಪ್ರಸ್ತಾಪಿಸಿದ ಶಾಸಕ ಯತ್ನಾಳ್, ನಾನು ಕ್ರಿಕೆಟ್ ನೋಡುವುದಿಲ್ಲ. ಅಭಿಮಾನಿಯಲ್ಲ. ಆದರೆ ಒಬ್ಬ ದೇಶಭಕ್ತನಾಗಿ ಟೀಂ ಇಂಡಿಯಾ ಪ್ರತಿಯೊಂದು ಮ್ಯಾಚ್ ಗೆಲ್ಲಬೇಕು ಎಂದು ಪ್ರಾರ್ಥಿಸುತ್ತೇನೆ ಎಂದರು. ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಗೆಲುವು ಖಚಿತ. ಸೂರ್ಯ ಚಂದ್ರ ಇರೋವರೆಗೆ ಇಂಡಿಯಾ ಪಂದ್ಯ ಗೆಲ್ಲುತ್ತಲೇ ಇರುತ್ತದೆ ಅನುಮಾನ ಎಂದರು.