ಕರ್ನಾಟಕದ ಜಾತಿ ಗಣತಿ ವರದಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತಾಂತರ ಮಾಡುವ ಖಾಸಗಿ ಸಂಸ್ಥೆಗಳಿಗೆ ಲಭ್ಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ಆರೋಪಿಸಿದ್ದಾರೆ.
ಬೆಂಗಳೂರು (ಸೆ.01): ಸಂವಿಧಾನದಲ್ಲಿ ರಾಜ್ಯಗಳಿಗೆ ಯಾವುದೇ ಗಣತಿ ಮಾಡಲು ಅಧಿಕಾರ ಇಲ್ಲದಿದ್ದರೂ 150 ಕೋಟಿ ರೂ. ವೆಚ್ಚಮಾಡಿ ಜಾತಿ ಗಣತಿ ಮಾಡಿಸಿದ ಕಾಂಗ್ರೆಸ್ ಸರ್ಕಾರ, ಅದನ್ನು ಬಹಿರಂಗಗೊಳಿಸುವ ಮುನ್ನವೇ ಅಂತಾರಾಷ್ಟ್ರೀಯ ಸಂಸ್ಥೆಗೆ ಮಾಹಿತಿ ಸೋರಿಕೆ ಮಾಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ಆರೋಪ ಮಾಡಿದ್ದಾರೆ.
ಈ ಕುರಿತು ಸುದ್ದೊಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 2015ರಲ್ಲಿ ಕಾಂಗ್ರೆಸ್ ಸರ್ಕಾರ ಜಾತಿ ಗಣತಿಯನ್ನ ಮಾಡ್ತಾರೆ. ಸುಮಾರು 150 ಕೋಟಿ ರೂಪಾಯಿ ಹಣವನ್ನ ಖರ್ಚು ಮಾಡ್ತಾರೆ. ರಾಜ್ಯ ಸರ್ಕಾರಕ್ಕೆ ಗಣತಿ ಮಾಡುವ ಅಧಿಕಾರವಿಲ್ಲ ಅಂತ ಗೊತ್ತಿದೆ. ಗೊತ್ತಿದ್ದರೂ ಕೂಡ ಜಾತಿವಾರು ಸಮೀಕ್ಷೆ ಮಾಡಲಾಗುತ್ತದೆ. ರಾಜ್ಯದ ಸಮೀಕ್ಷೆ ಮಾಹಿತಿ ಇಲ್ಲಿ ಸಿಕ್ಕಿಲ್ಲ. ಆದರೆ ಅಂತರಾಷ್ಟ್ರೀಯ ಸಂಸ್ಥೆಗೆ ಸೋರಿಕೆ ಆಗಿದೆ. ಅದರ ಹಿಂದಿರುವ ಷಡ್ಯಂತ್ರವೇನು..? ಸರ್ಕಾರದಿಂದ ಹೇಗೆ ಸೋರಿಕೆ ಆಗಿದೆ ಎಂದು ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಗು ಪಡೆಯಲು 11 ವರ್ಷ ತಪಸ್ಸು ಮಾಡಿದ ತಾಯಿ : ಆಸ್ತಿಗಾಗಿ ಐದೇ ತಿಂಗಳಿಗೆ ಬಲಿ ಪಡೆದಳು ಮಲತಾಯಿ
ಜಾತಿ ಗಣತಿ ವರದಿ ಖಾಸಗಿ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಲಭ್ಯ: ಸುಮಾರು ಒಂದೂವರೆ ವರ್ಷ ಸಾವಿರಾರು ಸರ್ಕಾರಿ ನೌಕರರನ್ನ ಬಳಸಿಕೊಂಡು ಜಾತಿ ಗಣತಿ ಮಾಡಲಾಗಿದೆ. ಆದರೆ, ಜಾತಿ ಗಣತಿಯ ಮಾಹಿತಿ ಸೋರಿಕೆ ಆಗಿದ್ಯಾ ಅಂತ ಸರ್ಕಾರ ತನಿಖೆ ಮಾಡಬೇಕು. ಈ ಬಗ್ಗೆ ಅಂತರಾಷ್ಟ್ರಿಯ ಮಾಧ್ಯಮದಲ್ಲಿ ಮಾಹಿತಿ ಸೋರಿಕೆ ಆಗಿದೆ. ವೆಬ್ ಸೈಟ್ ನಲ್ಲಿ ಈ ಮಾಹಿತಿ ನಮಗೆ ಸಿಗ್ತಾ ಇದೆ. ಸರ್ಕಾರ ಯಾವ ಉದ್ದೇಶಕ್ಕಾಗಿ ಈ ಸಮೀಕ್ಷೆ ನಡೆಸಿದೆ. ಈ ಬಗ್ಗೆ ನಾನು ಗೃಹ ಸಚಿವರಿಗೆ, ಚುನಾವಣಾ ಆಯೋಗಕ್ಕೆ, ಸೈಬರ್ ಪೊಲೀಸರಿಗೆ ದೂರು ನೀಡಿದ್ದೇವೆ. ಕರ್ನಾಟಕದ ಮಾಹಿತಿ ಅಂತರಾಷ್ಟ್ರೀಯ ಮಿಷನರಿ ಸಂಸ್ಥೆ ಕೈಗೆ ಹೇಗೆ ಸಿಗ್ತು? ಇದರ ಹಿಂದೆ ಇರುವ ಷಡ್ಯಂತ್ರದಲ್ಲಿ ಯಾವ ರಾಜಕೀಯ ಪಕ್ಷದ ಕೈವಾಡವಿದೆ. ಭಾರತದಲ್ಲಿ ಕೊಲೆ ಆದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಳಂಕ ತರುವ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ ಹಲವು ಪ್ರಕರಣದಲ್ಲಿ ಖಾಸಗಿ ಸಂಸ್ಥೆ ಭಾಗಿ: 2018ರ ಮೀಟೋ ಕೇಸ್ ನಲ್ಲಿ ಅಂತರಾಷ್ಟ್ರೀಯ ಸಂಸ್ಥೆ ಕೆಲಸ ಮಾಡಿದೆ. ಈಗ ಧರ್ಮಸ್ಥಳದ ಪ್ರಕರಣದಲ್ಲಿಯೂ ಅಂತರಾಷ್ಟ್ರೀಯ ಸಂಸ್ಥೆ ಕೈವಾಡವಿದೆ. ರಾಜ್ಯದ 32 ಜಿಲ್ಲೆಗಳ ಜಾತಿ ಗಣತಿಯ ಮಾಹಿತಿ ಅವರ ಕೈಯಲ್ಲಿದೆ. 1948 ಗಣತಿ ಆ್ಯಕ್ಟ್ ಪ್ರಕಾರ ರಾಜ್ಯ ಸರ್ಕಾರಕ್ಕೆ ಗಣತಿ ಮಾಡುವ ಅಧಿಕಾರವಿಲ್ಲ. 2015ರಲ್ಲಿ ಖರ್ಚು ಮಾಡಿದ ಹಣ ಸರ್ಕಾರ ಜನರಿಗೆ ವಾಪಸ್ ನೀಡುತ್ತಾ? ಜೋಶ್ವಾ ಪ್ರಾಜೆಕ್ಟ್ ಡೇಟಾ ಹೇಗೆ ಸೋರಿಕೆ ಆಯ್ತು? ಅಂತರಾಷ್ಟ್ರೀಯ ಸಂಸ್ಥೆ ಈ ಡೇಟಾ ತನ್ನ ವೆಬ್ ಸೈಟ್‌ನಲ್ಲಿ ಹಾಕಿಕೊಂಡಿದೆ ಎಂದು ಹೇಳಿದರು.
ಮಗನ ಅನರ್ಹ ಆದೇಶದ ಬೆನ್ನಲ್ಲೆ ತಂದೆ ಹೆಚ್.ಡಿ.ರೇವಣ್ಣಗೂ ಶಾಕ್ ಕೊಟ್ಟ ಹೈಕೋರ್ಟ್
ಮತಾಂತರ ಮಾಡಲು ಜಾತಿಗಣತಿ ವರದಿ ಅನುಕೂಲ: ಖಾಸಗಿ ಸಂಸ್ಥೆಯು ಜಾತಿಗಣತಿ ಆಧರಿಸಿ ಮತಾಂತರ ಮಾಡಲು ಉಪಯೋಗವಾಗುತ್ತೆ ಅಂತ ಬರೆದುಕೊಂಡಿದೆ. ತಾಂತರ ಮಾಡುವರರ ಬಳಿ ರಾಜ್ಯದ ಜಾತಿ ಸಮೀಕ್ಷೆಯ ಮಾಹಿತಿಯಿದೆ. ರಾಜ್ಯ ಸರ್ಕಾರ ಮಾಡಿದ ಸಮೀಕ್ಷೆ ಎಲ್ಲಿದೆ ಈಗ, ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತಾ..? ಲಿಂಗಾಯತ ಧರ್ಮದ ಒಡಿಯುವುದ ಹಿಂದೆ ಷಡ್ಯಂತ್ರದ ಅನುಮಾನವಿದೆ. ಈ ಡೇಟಾ ಪ್ರತಿ ಐದು ನಿಮಿಷಕ್ಕೆ ಅಪಡೇಟ್ ಆಗ್ತಾ ಇದೆ.ಮಾಹಿತಿ ಸೋರಿಕೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಲಾಗಿದೆ ಎಂದರು.