Karnataka Assembly Elections 2023: ವೃದ್ಧರು, ಅಂಗವಿಕಲರ ಮತದಾನ ಇಂದಿನಿಂದಲೇ ಶುರು

By Kannadaprabha News  |  First Published Apr 29, 2023, 7:29 AM IST

ಬ್ಯಾಲೆಟ್‌ ಪೇಪರ್‌ನಲ್ಲಿ ಮತದಾನ, ಪತ್ರಕರ್ತರಿಗೂ ಅವಕಾಶ, ಕರ್ನಾಟಕದ ಚುನಾವಣೆಯಿಂದ ಆರಂಭವಾದ ಹೊಸ ಸೌಕರ್ಯ. 


ಬೆಂಗಳೂರು(ಏ.29):  ವಿಧಾನಸಭಾ ಚುನಾವಣೆಗೆ ಬ್ಯಾಲೆಟ್‌ ಪೇಪರ್‌ ಮತದಾನ ಶನಿವಾರದಿಂದ ಆರಂಭವಾಗಲಿದ್ದು, 80 ವರ್ಷಕ್ಕಿಂತ ಮೇಲ್ಪಟ್ಟವರು, ಅಂಗವಿಕಲರು, ಪತ್ರಕರ್ತರು ಸೇರಿದಂತೆ ಇತರರು ಮತದಾನದ ದಿನಕ್ಕಿಂತ ಮೊದಲೇ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಶನಿವಾರದಿಂದ ಏ.6ರವರೆಗೆ ಬ್ಯಾಲೆಟ್‌ ಪೇಪರ್‌ ಮತದಾನ ನಡೆಯಲಿದೆ. ನೋಂದಾಯಿತ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರು ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪತ್ರಕರ್ತರು ಸೇರಿದಂತೆ ಇತರು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ಮತ ಚಲಾಯಿಸಲಿದ್ದಾರೆ.

Tap to resize

Latest Videos

ಕೊಡಗು: ಅಂಚೆ ಮತಪತ್ರದ ಮೂಲಕ 2,474 ಮಂದಿ ಮತದಾನಕ್ಕೆ ಹೆಸರು ನೋಂದಣಿ

ಇನ್ನು, ಅಗತ್ಯ ಸೇವೆಗಳ ಇಲಾಖೆ ಎಂದು ಗುರುತಿಸಲಾದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇ 2ರಿಂದ ಮೇ 4ರವರೆಗೆ ಮತದಾನ ಮಾಡಲಿದ್ದಾರೆ. ಬೆಳಗ್ಗೆ 9ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಹೀಗಾಗಿ ಅಧಿಕಾರಿ ಮತ್ತು ಸಿಬ್ಬಂದಿಯ ಅನುಕೂಲಕ್ಕೆ ತಕ್ಕಂತೆ ವೇತನ ಸಹಿತ ರಜೆಯನ್ನು ಸರ್ಕಾರ ಘೋಷಣೆ ಮಾಡಿದೆ.

ಮನೆಯಿಂದಲೇ ಮತದಾನ ಮಾಡಲು 99,529 ಮತದಾರರು ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ 80 ವರ್ಷಕ್ಕೂ ಅಧಿಕ ಮೇಲ್ಪಟ್ಟಹಿರಿಯ ಮತದಾರರು 12.15 ಲಕ್ಷ ಮತದಾರರಿದ್ದಾರೆ. ಈ ಪೈಕಿ 5.46 ಪುರುಷರು, 6.69 ಮಹಿಳೆಯರು ಮತ್ತು ಇತರೆ 16 ಮಂದಿ ಇದ್ದಾರೆ. ಈ ಮತದಾರರ ಪೈಕಿ 80,250 ಮತದಾರರು ಮನೆಯಿಂದ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ. 5.71 ಲಕ್ಷ ಅಂಗವಿಕಲ ಮತದಾರರಿದ್ದು, 3.35 ಲಕ್ಷ ಪುರುಷರು, 2.35 ಲಕ್ಷ ಮಹಿಳೆಯರು, 61 ಇತರೆ ಮತದಾರದಿದ್ದಾರೆ. ಇವರಲ್ಲಿ 19,279 ಮತದಾರರು ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ

ಮನೆಯಿಂದ ಮತದಾನ ಪಡೆದುಕೊಳ್ಳಲು ಚುನಾವಣಾ ಸಿಬ್ಬಂದಿ ನೊಂದಾಯಿತ ವ್ಯಕ್ತಿಗಳಿಗೆ ಯಾವಾಗ, ಯಾವ ಸಮಯಕ್ಕೆ ಬರಲಾಗುತ್ತದೆ ಎಂಬುದರ ಬಗ್ಗೆ ಮೊದಲೇ ಮಾಹಿತಿ ನೀಡಲಾಗುತ್ತದೆ. ಇಲ್ಲಿಯೂ ಗೌಪ್ಯ ಮತದಾನವಾಗಲಿದೆ. ಇಬ್ಬರು ಚುನಾವಣಾಧಿಕಾರಿ, ಒಬ್ಬರು ವಿಡಿಯೋಗ್ರಾಫರ್‌, ಒಬ್ಬರು ಪೊಲೀಸ್‌ ಸಿಬ್ಬಂದಿ ಮತ್ತು ರಾಜಕೀಯ ಪಕ್ಷಗಳ ಏಜೆಂಟ್‌ಗಳ ಉಪಸ್ಥಿತ ಇರುವರು. ಇವರ ಸಮ್ಮುಖದಲ್ಲಿ ಮತದಾನ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಮನೆಯಿಂದ ಮತದಾನ ಮಾಡಿದ ಬಳಿಕ ಯಾರಿಂದ, ಎಲ್ಲಿ, ಯಾವ ಕ್ಷೇತ್ರದಲ್ಲಿ ಮತದಾನವಾಗಿದೆ ಎಂಬುದನ್ನು ಗುರುತಿಸಿಕೊಳ್ಳಲಾಗುತ್ತದೆ.

click me!