ಯೋಗೀಶ್ವರ್‌ಗೆ ಸಪೋರ್ಟ್ : ವಿಶ್ವನಾಥ್ ವಿರುದ್ಧ ಗರಂ

Suvarna News   | Asianet News
Published : Jan 17, 2021, 02:09 PM IST
ಯೋಗೀಶ್ವರ್‌ಗೆ ಸಪೋರ್ಟ್ : ವಿಶ್ವನಾಥ್ ವಿರುದ್ಧ ಗರಂ

ಸಾರಾಂಶ

ಸಿ ಪಿ ಯೋಗೇಶ್ವರ್ ಬಗ್ಗೆ ಮಾತನಾಡುವ ವಿಶ್ವನಾಥ್ ಮಾತುಗಳು ಸರಿಯಲ್ಲ. ಅವರು ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ  ಎಂದು ಮುಖಂಡರು ಹೇಳಿದ್ದಾರೆ. 

ಬೆಂಗಳೂರು (ಡಿ.17):   ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ವಿಶ್ವನಾಥ್ ಆರೋಪ ವಿಚಾರ‌ವಾಗಿ ಯೋಗೀಶ್ವರ್ ಪರ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಬ್ಯಾಟಿಂಗ್ ಮಾಡಿದೆ. 

ಯೋಗೀಶ್ವರ್ ವಿರುದ್ದ ವಿಶ್ವನಾಥ್ ಹೇಳಿಕೆ ಸರಿಯಲ್ಲ. ಹುಣಸೂರು ಬೈ ಎಲೆಕ್ಷನ್ ನಲ್ಲಿ ಯೋಗೀಶ್ವರ್ ಅತೀ ಹೆಚ್ಚು ಶ್ರಮ ಹಾಕಿದ್ದಾರೆ. ಐದು ಬಾರಿ ಶಾಸಕರಾಗಿ ಜನಾನುರಾಗಿ ಆಗಿದ್ದಾರೆ ಎಂದು ಒಕ್ಕಲಿಗ ಮುಖಂಡರು ಹೇಳಿದರು. 

ಈಗ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರೋದು ಅವರ ಸಾಮರ್ಥ್ಯ ದ ಆಧಾರದಲ್ಲಿ.  ಪಕ್ಷಕ್ಕೆ‌ ಬೆಳವಣಿಗೆಗೆ ಕೆಲಸ ಮಾಡಿರೋದನ್ನು ಗಮನಿಸಿಯೇ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಬೈ ಎಲೆಕ್ಷನ್ ನಲ್ಲಿ ಹಗಲಿರುಳು ಶ್ರಮಿಸಿದವರ ವಿರುದ್ದ ಅವಹೇಳನಕಾರಿ ಹೇಳಿಕೆ ಶೋಭೆ ತರುವುದಿಲ್ಲ. ವಿಶ್ವನಾಥ್ ಅವರಿಗೂ ಮಂತ್ರಿ ಸ್ಥಾನ ಸಿಗಬೇಕೆಂದು ಬಯಸಿದ್ಧೇವೆ. ಮುಂದೆ ಅವರಿಗೂ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ಒಕ್ಕಲಿಗ ಮುಖಂಡ ನಾಗರಾಜ್ ಹೇಳಿದರು.

ಏಪ್ರಿಲ್ ಬಳಿಕ ಯಡಿಯೂರಪ್ಪನ್ನು ತೆಗೆಯುತ್ತಾರೆ : ಉನ್ನತ ಮೂಲದಿಂದ ಮಾಹಿತಿ ...

ಯೋಗೀಶ್ವರ್ ಕುರಿತು ವಿಶ್ವನಾಥ್ ಅವರು ತಮ್ಮ‌ ನಿಲುವು ಬದಲಾಯಿಸಿಕೊಳ್ಳಬೇಕು. ವಿಶ್ವನಾಥ್ ಒಕ್ಕಲಿಗರ ಋಣದಲ್ಲಿದ್ದಾರೆ. ಒಕ್ಕಲಿಗರು ಯಾವತ್ತು ವಿಶ್ವನಾಥ್ ಅವರನ್ನು ಕೈಬಿಟ್ಟಿಲ್ಲ. ಪ್ರತೀ ಚುನಾವಣೆಯಲ್ಲೂ ಅವರು ಗೆಲ್ಲಲು ಸಹಕಾರ ನೀಡುತ್ತಾ ಬಂದಿದ್ದಾರೆ.  ಕೆ.ಆರ್. ನಗರದಲ್ಲಿ ಗೆದ್ದು ಬಂದು ಮಂತ್ರಿಯಾಗಲು ಒಕ್ಕಲಿಗರು ಕಾರಣರು ಎಂದರು. 

ಇದನ್ನೆಲ್ಲಾ ವಿಶ್ವನಾಥ್ ಮರೆತು ಒಕ್ಕಲಿಗ ಮುಖಂಡರ ವಿರುದ್ದ ಹೇಳಿಕೆ ಕೊಡೋದು ಎಷ್ಟು ಸರಿ.  ತಮಗೆ ಸಹಾಯ ಮಾಡಿದ ಒಕ್ಕಲಿಗ ಮುಖಂಡರ ವಿರುದ್ದವೇ ಹೇಳಿಕೆ‌ ಕೊಡೋದು ವಿಶ್ವನಾಥ್ ಜಾಯಮಾನ ಆಗಿದೆ.  ಈ ರೀತಿ ಹೇಳಿಕೆ ಮುಂದುವರಿದರೆ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಸುಮ್ಮನಿರುವುದಿಲ್ಲ ಎಂದು ವಿಶ್ವನಾಥ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ