ಕಾಳಿ ದೇವಿಗೆ ಅಪಮಾನ ಮಾಡಿ ವಿಕೃತಿ ಮೆರೆದವರು ಈ ಕೂಡಲೇ ಕ್ಷಮೆಯಾಚಿಸಬೇಕು. ಹಾಗೇನಾದರೂ ಅವರು ಕ್ಷಮೆ ಕೇಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ರಾಜ್ಯದ ವಿಶ್ವಕರ್ಮ ಮಠಾಧೀಶರು ಹಾಗೂ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ (ಜು 11): ದೇಶದ ಸನಾತನ ಪರಂಪರೆಯಲ್ಲಿ ಆದಿಶಕ್ತಿಯಾದ ಕಾಳಿಕಾದೇವಿಗೆ ಹಿರಿದಾದ ಮಹತ್ವವಿದೆ ಗುರು ಹಿರಿಯರು ಋಷಿಮುನಿಗಳು ಸಾಧು ಸಂತರು ದೇವಿಗೆ ಅಪಾರ ಮಹತ್ವ ನೀಡಿದ್ದಾರೆ. ಅಂತಹ ದೇವಿಯನ್ನು ಇಂದು ಪ್ರತ್ಯೇಕವಾಗಿ ವಿಕೃತ ರೂಪದಲ್ಲಿ ಪ್ರದರ್ಶನ ನೀಡಿರುವುದು ಖಂಡನೀಯ ಎಂದು ವಿಶ್ವಕರ್ಮ ಸಮಾಜದ ಮಠಾಧೀಶರು ಆಕ್ರೋಶ ವ್ಯಕ್ತಪಡಿಸಿದರು. ವಿಶ್ವ ಕರ್ಮ ಸಮಾಜದ ಸಮಾವೇಶದ ಪ್ರಯುಕ್ತ ಸುಮಾರು 40ಕ್ಕೂ ಹೆಚ್ಚು ಸ್ವಾಮೀಜಿಗಳು ಇಂದು ಬೆಳಗ್ಗೆ ಜಯದೇವ ವೃತ್ತದಿಂದ ಪಾದಯಾತ್ರೆ ನಡೆಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಹಾಸನ ಜಿಲ್ಲೆ ಅರೆಮಾದನಹಳ್ಳಿ ಈ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ ವಿಶ್ವಕರ್ಮ ಸಮಾಜದ ಆರಾಧ್ಯ ದೈವ ಕಾಳಿಕಾದೇವಿ ಇಂದು ದೇವಿಗೆ ಅಪಚಾರ ಮಾಡಲಾಗಿದೆ. ಈ ಕೃತ್ಯದಿಂದ ಜಗತ್ತಿನಾದ್ಯಂತ ಕಾಳಿಕಾದೇವಿ ಆರಾಧಕರಿಗೆ ನೋವಾಗಿದೆ. ಈ ನಿಟ್ಟಿನಲ್ಲಿ ಇಂದು ಕಾಳಿಕಾದೇವಿ ವಿಕೃತ ರೂಪ ನೀಡಿದವರಿಗೆ ಧಿಕ್ಕಾರ ಹಾಕುತ್ತೇವೆ. ವಿಶ್ವಕರ್ಮ ಮಠಾಧೀಶರಷ್ಟೇ ಅಲ್ಲ ಸನಾತನ ಧರ್ಮದ ಮಠಾಧಿಪತಿಗಳು ಹಾಗೂ ಗುರುಹಿರಿಯರು ಖಂಡಿಸುತ್ತೇವೆ ಹಾಗೂ ಮುಂದಿನ ಹೋರಾಟದ ಬಗ್ಗೆ ಯೋಜನೆ ರೂಪಿಸಿದ್ದೇವೆ. ದಾವಣಗೆರೆಯಲ್ಲಿ ನಡೆಯುವ ಸಮಾವೇಶದಲ್ಲಿ ವಿಶ್ವಕರ್ಮ ಸಮಜದ ಮಠಾಧಿಪತಿಗಳ ಒಕ್ಕೂಟದಿಂದ ಖಂಡಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು.
ಪ್ರತ್ಯೇಕತೆ ಪ್ರಶ್ನೆಯೇ ಇಲ್ಲ: ಹಿಂದು ದೇವರುಗಳಿಗೆ (Hindu God) ಅಪಚಾರ ಮಾಡದರೆ ಖಂಡಿಸಲಾಗುವುದು.ಕಾಳಿಕಾ ದೇವಿಗೆ ಅಪಮಾನ ಮಾಡಿದವರು ಈ ಕೂಡಲೇ ಕ್ಷಮಾಪಣೆ ಕೇಳಬೇಕು ಎಂದು ಒತ್ತಾಯಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ಸಂಘಟನೆಯ ಶಕ್ತಿ ನಮ್ಮಲ್ಲಿದೆ ಎಂದರು. ನಮ್ಮ ಸಮಾಜದ ಎಲ್ಲಾ ಮಠಾಧೀಶರು ಒಟ್ಟಾಗಿದ್ದೇವೆ.ಪ್ರತ್ಯೇಕ ಮಠದ ಅವಶ್ಯಕತೆ ಇಲ್ಲ.ಪರಂಪರೆಯಿಂದ ಬಂದ ಮಠ ನಮ್ಮದು ಆದ್ದರಿಂದ ಪ್ರತ್ಯೇಕತೆಯ ಪ್ರಶ್ನೆಯೇ ಇಲ್ಲ ಎಂದರು.
ಹಿಂದೂ ದೇವರಿಗೆ ಅಪಮಾನ ಖಂಡನೀಯ: ವಿಶ್ವಕರ್ಮ ಅಭಿವೃದ್ಧಿ ನಿಗಮದ (Vishwakarma Development Corporation) ಅಧ್ಯಕ್ಷ ಬಾಬುಪತ್ತಾರ್ (Babupattar) ಮಾತನಾಡಿ ದಾವಣಗೆರೆಯ ಸಮಾವೇಶದಲ್ಲಿ ಸುಮಾರು 67 ಮಠಾಧೀಶರು ಜನರು ಸೇರಿದ್ದೇವೆ. ಸಾಧುಸಂತರ ಸಮಾವೇಶ ಹಮ್ಮಿಕೊಂಡಿದ್ದೇವೆ.ಜಗತ್ತಿನಲ್ಲೇ ಕಾಳಿಕಾದೇವಿ ಆರಾಧಕರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಳಿಕಾದೇವಿಗೆ ಅಪಮಾನ ಮಾಡಲಾಗಿದೆ ಇದು ಖಂಡನೀಯ.ಕೊರೊನಾ ಹೊಗಿಸಲು ಕಾಳಿಕಾದೇವಿಯ (KalikaDevi) ಆರಾಧನೆ ಮಾಡಿದ ಸಮಾಜ ನಮ್ಮದು. ಅಂತಹ ಮಾತೆಗೆ ಅಪಮಾನ ಮಾಡಿರುವುದು ಸರಿಯಲ್ಲ. ಹಿಂದೂ ದೇವಿಗಳಿಗೆ ಅಪಮಾನ ಮಾಡುವುದು ಖಂಡನೀಯ.ನಿರ್ದೇಶಕಿ ಲೀನಾ ಅವರ ಚಿತ್ರ ತಡೆಯುವಂತೆ ಸಂಬಂಧಪಟ್ಟವರಿಗೆ ಒತ್ತಾಯಿಸಿದ್ದೇವೆ. ಈ ಬಗ್ಗೆ ದೇಶಾದ್ಯಂತ ಸಮಾಜ ಬಾಂಧವರು ಕಾರ್ಯಪ್ರವೃತ್ತರಾಗಿದ್ದಾರೆ.ಕ್ರಮಕ್ಕೆ ಒತ್ತಾಯಿಸಿ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ.ಬೆಂಗಳೂರಿನಲ್ಲಿಯೂ (Bengaluru) ಹೋರಾಟ ಮಾಡಲಾಗುವುದು ಎಂದರು.
ಇದನ್ನೂ ಓದಿ: ಕಾಳಿ ದೇವಿಯ ಅವಹೇಳನ ಮಾಡಿದ ಭೂಪ, ಟ್ವಿಟರ್ ವಿರುದ್ಧ ದೂರು
ನಮ್ಮ ಆರಾಧ್ಯದೈವ ಕಾಳಿಕಾದೇವಿ: ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಆರ್ .ಪ್ರಸನ್ನಕುಮಾರ್ ಮಾತನಾಡಿ ನಮ್ಮ ಭೂಮಂಡಲದಲ್ಲಿ ದೇವಿಯ ಆರಾಧನೆ ಮಾಡುವ ಏಕೈಕ ಸಮಾಜ ವಿಶ್ವಕರ್ಮ ಸಮಾಜ.ವಿಶೇಷವಾಗಿ ದೇಶದಲ್ಲಿ ಕಾಳಿಕಾದೇವಿ ದೇವಾಲಯ ನಿರ್ಮಿಸಿ ಆರಾಧಿಸಿ ಬಂದ ಸಮಾಜ ವಿಶ್ವಕರ್ಮ ಸಮಾಜ.ನಮ್ಮ ಆರಾಧ್ಯ ದೈವ ಕಾಳಿಕಾದೇವಿ. ಕಟ್ಟುನಿಟ್ಟಿನಿಂದ ದೇವಿಯ ಆರಾಧನೆ ಮಾಡುತ್ತಾ ಬಂದಿದ್ದೇವೆ ಆದರೆ ಇಂದು ಕಾಳಿಕಾದೇವಿಗೆ ಅಪಮಾನ ಮಾಡಲಾಗಿದೆ.ಹಿಂದೂ ಸಂಸ್ಕೃತಿಗೆ ಮಾರಕವಾಗುವಂತೆ ಮಾಡಲಾಗಿದೆ. ಸನಾತನ ಧರ್ಮ ಕಾಪಾಡಿಕೊಂಡು ಬಂದ ಕಾಳಿಕಾದೇವಿಯ ಮೂಲ ಸ್ವರೂಪ ಹಾಳುಮಾಡಿದ ವಿಕೃತ ಮನಸ್ಸುಗಳಿಗೆ ವಿಶ್ವದಾದ್ಯಂತ ಹಿಂದೂ ಆರಾಧಕರು ಖಂಡಿಸುತ್ತೇವೆ ಮುಂದಿನ ದಿನಗಳಲ್ಲಿ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ಹಾಗೂ ಮುಖಂಡರ ಜೊತೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಇದನ್ನೂ ಓದಿ: ನನ್ನ ಕಾಳಿ ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ: ಲೀನಾ ಮಣಿಮೇಕಲೈ
ಈ ವೇಳೆ ರಾಷ್ಟ್ರೀಯ ಅಧ್ಯಕ್ಷ ಎಚ್.ವಿ.ಸತೀಶಕುಮಾರ, ಚನ್ನಗಿರಿ ತಾಲೂಕಿನ ವಡ್ನಾಳು ಮಠದ ಶ್ರೀಅಷ್ಟೋತ್ತರ ಶತಶ್ರೀ ಶಂಕರಾತ್ಮನಂದ ಸರಸ್ವತಿ ಮಹಾಸ್ವಾಮೀಜಿ, ಸಿಂಧಗಿ ಶ್ರೀರಾಮಚಂದ್ರ ಸ್ವಾಮೀಜಿ, ಮರವಾಳಮಠದ ಶ್ರೀ ಮಹೇಂದ್ರ ಸ್ವಾಮೀಜಿ ಸೇರಿದಂತೆ ಸಮಾಜದ ವಿವಿಧ ಗುರುಗಳ ಸಾನಿಧ್ಯದಲ್ಲಿ ಸಮಾಜ ಬಾಂಧವರು ಹಾಗೂ ಮುಖಂಡರುಗಳು ಇದ್ದರು.