ನಿಯಮ ಉಲ್ಲಂಘನೆ ಆರೋಪ; ಸಿದ್ಧಶ್ರೀ ಸಕ್ಕರೆ ಕಾರ್ಖಾನೆ ಮಾಲೀಕ ಶಾಸಕ ಯತ್ನಾಳ್‌ಗೆ ನೋಟಿಸ್ ಜಾರಿ!

By Ravi JanekalFirst Published Feb 16, 2024, 6:08 PM IST
Highlights

ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆ ಸಿದ್ಧಶ್ರೀ ಸಕ್ಕರೆ ಕಾರ್ಖಾನೆ ಮಾಲೀಕರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಆಯುಕ್ತರು ಹಾಗೂ ನಿರ್ದೇಶಕರು ನೋಟಿಸ್ ಜಾರಿ ಮಾಡಿದ್ದಾರೆ.

ಕಲಬುರಗಿ (ಫೆ.16): ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆ ಸಿದ್ಧಶ್ರೀ ಸಕ್ಕರೆ ಕಾರ್ಖಾನೆ ಮಾಲೀಕರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಆಯುಕ್ತರು ಹಾಗೂ ನಿರ್ದೇಶಕರು ನೋಟಿಸ್ ಜಾರಿ ಮಾಡಿದ್ದಾರೆ.

ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದ ಹೊರವಲಯದಲ್ಲಿರುವ ಶಾಸಕ ಯತ್ನಾಳ್ ಮಾಲೀಕತ್ವದ ಸಿದ್ಧಶ್ರೀ ಸಕ್ಕರೆ ಕಾರ್ಖಾನೆ. ಕಬ್ಬು ಅರೆಯುವ ಪರವಾನಿಗೆ ಇದುವರೆಗೆ ಪಡೆದಿಲ್ಲ ಹಾಗೂ ಮಾಲೀನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ. ಕಬ್ಬು (ನಿಯಂತ್ರಣ) ಆದೇಶ 1966 ರ ಸ್ಪಷ್ಟ ಉಲ್ಲಂಘನೆ ಮಾಡಲಾಗಿದೆ. ಕಬ್ಬು ಅರಿಯುವ ಪರವಾನಿಗೆ ನವೀಕರಿಸಿಕೊಳ್ಳದೇ ಮತ್ತು ಕಬ್ಬು,ರಸ ಮತ್ತು ಸಕ್ಕರೆ ರಸದಿಂದ ಎಥೆನಾಲ್ ಉತ್ಪಾದನೆ ಮಾಡುತ್ತಿರುವುದರಿಂದ ನಿಮ್ಮ ವಿರುದ್ಧ ಯಾಕೆ ಮೊಕ್ಕದ್ದಮೆ ದಾಖಲಿಸಬಾರದೆಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ನಾನು ಸ್ವತಂತ್ರ ಹಕ್ಕಿ, ಯೋಗ್ಯತೆ ಇದ್ರೂ ಯಾವುದೇ ಸ್ಥಾನವಿಲ್ಲ: ಯತ್ನಾಳ್

click me!