ಆತ್ಮಹತ್ಯೆ ಮಾಡಿಕೊಂಡ ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಪಂಚಭೂತಗಳಲ್ಲಿ ಲೀನವಾಗಿ ಹೋಗಿದ್ದಾರೆ. ಅವರ ಸಾವಿನ ವಿಚಾರ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿದ್ದರೆ ಸಾವಿಗೂ ಮುನ್ನ ಅವರು ತಮ್ಮ ಪತ್ನಿಗೆ ಬರೆದಿರುವ ಪತ್ರ ಮಾತ್ರ ಎಂತಹ ಕಲ್ಲು ಹೃದಯವನ್ನು ಕರಗುವಂತೆ ಮಾಡಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.06): ಆತ್ಮಹತ್ಯೆ ಮಾಡಿಕೊಂಡ ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಪಂಚಭೂತಗಳಲ್ಲಿ ಲೀನವಾಗಿ ಹೋಗಿದ್ದಾರೆ. ಅವರ ಸಾವಿನ ವಿಚಾರ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿದ್ದರೆ ಸಾವಿಗೂ ಮುನ್ನ ಅವರು ತಮ್ಮ ಪತ್ನಿಗೆ ಬರೆದಿರುವ ಪತ್ರ ಮಾತ್ರ ಎಂತಹ ಕಲ್ಲು ಹೃದಯವನ್ನು ಕರಗುವಂತೆ ಮಾಡಿದೆ. ಹಾಯ್ ಶೋಭಿ, ಈ ಲೆಟರ್ನ ನಾನು ನಿನಗೆ ಕಳುಹಿಸದೆ ಸುಶಾಂತ್ಗೆ ಕಳುಹಿಸಿದ್ದು ಯಾಕೆ ಎಂದರೆ, ನಿನಗೆ ಕಳುಹಿಸಿದರೆ ನಿನ್ನನ್ನು ಸಂಭಾಳಿಸುವವರು ಯಾರು ಇರುವುದಿಲ್ಲ ಅಂತ. ಸಾರಿ, ಇದು ಕ್ಷಮಿಸುವ ತಪ್ಪಲ್ಲ. ಹೀಗೆ ಪತ್ರ ಬರೆಯುವ ಆರಂಭದಲ್ಲಿಯೇ ಕ್ಷಮೆ ಕೇಳಿರುವುದು ಬೇರೆ ಯಾರೂ ಅಲ್ಲ.
ರಾಜಕೀಯ ಒತ್ತಡಕ್ಕೋ, ಮತ್ತ್ಯಾವ ಕಿರುಳಕ್ಕೋ ಆತ್ಮಹತ್ಯೆಗೆ ಒಳಗಾದ ಕೊಡಗಿನ ವಿನಯ್ ಸೋಮಯ್ಯ ತನ್ನ ಪ್ರೀತಿಯ ಮಡದಿ ಶೋಬಿತಾಗೆ ಬರೆದಿರುವ ಪತ್ರ. ಈ ಆರಂಭದ ಸಾಲುಗಳೇ ಎಂತಹವರ ಮನಸ್ಸನ್ನಾದರೂ ಕರಗಿಸಿಬಿಡುತ್ತವೆ. ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿನಯ್ ಸೋಮಯ್ಯ ತಾನು ಉಸಿರು ಚೆಲ್ಲುವ ಮೊದಲು ತನ್ನ ಪ್ರೀತಿಯ ಮಡದಿ, ಅಕ್ಕರೆಯ ಮಗಳನ್ನು ಕುರಿತು ಬರೆದ ಪತ್ರವಿದು. ಎಸ್ ನಾನಿನ್ನೂ ಇರುವುದಿಲ್ಲ, ಈ ಲೋಕವನ್ನೇ ಬಿಟ್ಟು ದೂರ... ಬಹುದೂರ ಹೋಗುತ್ತಿದ್ದೇನೆ ಎನ್ನುವ ನೋವಿನಲ್ಲೇ ವಿನಯ್ ಬರೆದಿರುವ ಪತ್ರ ಎಲ್ಲರ ಕಣ್ಣಾಲಿಗಳು ಒದ್ದೆಯಾಗಿಸುತ್ತಿದೆ. ಇಷ್ಟು ನೋವಿನಿಂದ ಪತ್ರ ಬರೆದಿರುವ ವಿನಯ್ ಈ ಪತ್ರವನ್ನು ತನ್ನ ಮಡದಿಯ ಮೊಬೈಲ್ಗೆ ನೇರವಾಗಿ ಕಳುಹಿಸುವ ಧೈರ್ಯ ಮಾಡಿಲ್ಲ.
ಬಿಜೆಪಿ ವಿರುದ್ಧ ತಿರುಗಿಬಿದ್ದ ಕೊಡಗು ಕಾಂಗ್ರೆಸ್: ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕೃತಿ ದಹಿಸಿ ಆಕ್ರೋಶ
ಬದಲಾಗಿ ಅವರ ಭಾವ ಮೈದುನಾ ಸುಶಾಂತ್ ಅವರ ಮೊಬೈಲ್ಗೆ ಈ ಸಂದೇಶ ರವಾನಿಸಿದ್ದಾರೆ. ಅಲ್ಲಿಯೂ ಕೂಡ ಈ ಮೆಸೇಜ್‌ನ ಶೋಬಿತಾಗೆ ಫಾರ್ವಡ್ ಮಾಡಬೇಡ, ನೀನೇ ಹೋಗಿ ತೋರಿಸು. ಅವಳು ಈ ಮೆಸೇಜ್ ಓದುವಾಗ ನಾನು ಈ ಲೋಕದಲ್ಲಿ ಇರಲ್ಲ. ನನ್ನ ಮಗಳು ಸಾಧ್ವಿಯನ್ನು ಚೆನ್ನಾಗಿ ನೋಡಿಕೋ. ನೀನು ಇನ್ನು ಮುಂದೆ ಶೋಭಿತಾ ಜೊತೆಗೆ ಇರು, ಬೇರೆ ರೂಮಲ್ಲಿ ಇರಬೇಡ. ಸಾಧ್ವಿ ಬಟ್ಟೆ ನೀನೇ ಪ್ಯಾಕ್ ಮಾಡು, ಕಾರು ದಾಖಲೆ ನಿನ್ನ ಅಥವಾ ಶೋಭಿತಾ ಹೆಸರಿಗೆ ವರ್ಗಾಯಿಸಿಕೋ ಎಂದು ಪತ್ರವನ್ನು ಟೈಪ್ ಮಾಡಿ ವಾಟ್ಸಾಪ್ ನಲ್ಲೇ ವಿನಯ್ ಕಳುಹಿಸಿದ್ದಾರೆ. ಪತ್ರ ಮುಂದುವರಿಸಿರುವ ವಿನಯ್ ಎಫ್‌ಐಆರ್ ಹಾಗೂ ರೌಡಿ ಶೀಟರ್ ವಿಚಾರದಲ್ಲಿ ಪೊಲೀಸರ ಹಿಂಸೆ ತಡೆಯಲು ನನಗೆ ಆಗುತ್ತಿಲ್ಲ.
ನಿನ್ನ ಪಡೆಯಲು ನಾನು ಪುಣ್ಯ ಮಾಡಿದ್ದೆ, ನೀನು ನನ್ನ ಎಲ್ಲಾ ಕಷ್ಟದಲ್ಲಿ ಸಪೋರ್ಟ್ ಮಾಡಿದ್ದೆ. ಅದಕ್ಕೆ ನಿನಗೆ ಥ್ಯಾಂಕ್ಯೂ ಎಂದು ವಿನಯ್ ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ. ಸಾಧ್ವಿ ಒಂದು ವಾರ ಕೇಳಬಹುದು ಆಮೇಲೆ ಸರಿ ಹೋಗ್ತಾಳೆ. ಕೇಳಿದರೆ ಅಪ್ಪ ದೂರ ಹೋಗಿದಾರೆ ಅಂತ ಅವಳಿಗೆ ಹೇಳು. ಅಪ್ಪ ನಿನ್ನ ತುಂಬಾ ಇಷ್ಟ ಪಡುತ್ತಿದ್ದರು ಅಂತ ದೊಡ್ಡವಳಾದ ಮೇಲೆ ಹೇಳು. ಏನೇನೋ ಆಸೆ ಇತ್ತು, ಒಳ್ಳೆಯ ಕೆಲಸ, ಫ್ಲಾಟ್ ತೆಗೆದುಕೊಳ್ಳಬೇಕು ಅಂತ ಆಸೆ ಇತ್ತು. ಆದರೆ ಎಫ್‌ಐಆರ್ ವಿಚಾರ ನನ್ನ ಮನಸಿಂದ ಹೋಗುತ್ತಾನೆ ಇಲ್ಲ. ನನ್ನಿಂದ ನಮ್ಮ ಹಾಗೂ ನಿಮ್ಮ ಕುಟುಂಬದ ಮರ್ಯಾದೆ ಹೋಯ್ತು.
ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್
ನಾನಿಲ್ಲ ಅಂತ ನಮ್ಮ ಮನೆ ಬಿಟ್ಟು ಹೋಗಬೇಡ, ನೀನಂದ್ರೆ ನಮ್ಮನೆಯ ಎಲ್ಲರಿಗೂ ಇಷ್ಟ. ನೀನು ಅವಾಗ ಅವಾಗ ಮನೆಗೆ ಹೋಗ್ತಾ ಇರು. ನಿಂಗೆ ಏನೇ ಕಷ್ಟ ಇದ್ದರೂ ನನ್ನ ಅಣ್ಣನನ್ನು ಕೇಳು. ಅವರು ನನ್ನ ಡ್ಯಾಡಿ ಇದ್ದ ಹಾಗೆ, ಅಮ್ಮ ಮಂಜು, ಕಂದ ಎಲ್ಲರೂ ನಿನ್ನ ಇಷ್ಟ ಪಡುತ್ತಾರೆ. ನನ್ನ ಜಾಸ್ತಿ ನೆನಪಿಟ್ಟುಕೊಳ್ಳಬೇಡ.. ಲವ್ ಯು ಶೋಭಿ & ಸಚ್ಚಿ ಹೀಗೆ ಭಾವಪೂರ್ಣವಾಗಿ ಅಷ್ಟೇ ನೋವಿನಿಂದ ಪತ್ರ ಬರೆದಿದ್ದಾರೆ. ಈ ಪತ್ರ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು ಎಂತಹವರ ಕಣ್ಣುಗಳು ನೀರಾಗುತ್ತವೆ. ಏನೇ ಆಗಲಿ ತನ್ನ ಪತ್ನಿ, ಮಗಳೊಂದಿಗೆ ಹೇಗೆಲ್ಲಾ ಬದುಕಬೇಕೆಂದು ಕನಸ್ಸು ಕಂಡಿದ್ದ ವಿನಯ್ ತನ್ನ ಆಸೆಗಳನ್ನೆಲ್ಲಾ ಸಾವಿನ ಕುಣಿಕೆಯಲ್ಲೇ ಕಮರಿಸಿ ಹೋಗಿದ್ದು ಮಾತ್ರ ವಿಪರ್ಯಾಸ.