ಒಂದು ಕಡೆ ಜೆಸಿಬಿಗಳ ಭರ್ಜರಿ ಕಾರ್ಯಾಚರಣೆ.ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಭದ್ರತೆಯೊಂದಿಗೆ ತೆರವೂ ಕಾರ್ಯಾಚರಣೆ.ಇದು ನಮ್ಮದೇ ಜಾಗ ನ್ಯಾಯ ಕೊಡಿಸಿ ಎಂದು ದಾಖಲಾತಿ ತೋರಿಸುತ್ತಿರುವ ಜನ.ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ಗ್ರಾಮದ ಸುತ್ತಮುತ್ತ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ : ಅದು ಸಾವಿರಾರು ಕೋಟಿ ಬೆಲೆ ಬಾಳುವ ಅರಣ್ಯ ಇಲಾಖೆಯ ಜಮೀನು.ಕಳೆದು ಇಪತ್ತು ವಷ೯ಗಳಿಂದ ಕೆಲವರು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆದು ಲಾಭ ಮಾಡಿಕೊಂಡಿದ್ದಾರೆ.ವಿಚಾರ ತಿಳಿದ ಅರಣ್ಯ ಇಲಾಖೆ ಇದು ನಮ್ಮದೇ ಜಾಗ ಎಂದು ತೆರವು ಮಾಡುವ ಮೂಲಕ ಚಳಿ ಬಿಡಿಸಿದ್ದಾರೆ.ಇದೀಗ ಅರಣ್ಯ ಇಲಾಖೆಗೆ ಮತ್ತೊಂದು ಸಮಸ್ಯೆ ಎದುರಾಗಿದ್ದು ಭೂಮಿ ಕಳೆದುಕೊಂಡ ಕೆಲವರು ಕೋರ್ಟ್ ಮೆಟ್ಟಿಲೇರಲು ತೀಮಾ೯ನ ಮಾಡಿದ್ಧಾರೆ.
undefined
ಒಂದು ಕಡೆ ಜೆಸಿಬಿಗಳ ಭರ್ಜರಿ ಕಾರ್ಯಾಚರಣೆ.ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಭದ್ರತೆಯೊಂದಿಗೆ ತೆರವೂ ಕಾರ್ಯಾಚರಣೆ.ಇದು ನಮ್ಮದೇ ಜಾಗ ನ್ಯಾಯ ಕೊಡಿಸಿ ಎಂದು ದಾಖಲಾತಿ ತೋರಿಸುತ್ತಿರುವ ಜನ.ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ಗ್ರಾಮದ ಸುತ್ತಮುತ್ತ.
ಆದಾನಿ ಕಂಪೆನಿಯಿಂದ ಅಕ್ರಮ ಜಮೀನು ಪ್ರವೇಶ ಆರೋಪ, ಆತ್ಮಹತ್ಯೆ ಮಾಡಿಕೊಳ್ಳುದಾಗಿ ಹೇಳಿದ ಕುಟುಂಬ
ಇಪತ್ತು ವರ್ಷದ ಮಾವಿನ ಮರ,ತರಕಾರಿ ಹಾಗೂ ಹಣ್ಣಿನ ಬೆಳೆಗಳು ಹಾಗೂ ಕೋಳಿ ಫಾರಂ ಗಳನ್ನು ನೆಲಸಮ ಮಾಡಿ ತಮ್ಮ ಜಾಗವನ್ನು ಹದ್ದುಬಸ್ತು ಮಾಡಿಕೊಳ್ತಿರುವ ಇವರೆಲ್ಲಾ ಅರಣ್ಯ ಇಲಾಖೆ(forest department of karnataka) ಸಿಬ್ಬಂದಿಗಳು.2002 – 2004 ರ ಸಮಯದಲ್ಲಿ ಅರಣ್ಯ ಇಲಾಖೆಗೆ ಸೇರಿದ್ದಸುಮಾರು 3800 ಎಕರೆ ಜಮೀನನ್ನು ಅಂದಾಜು 400 ಕ್ಕೂ ಹೆಚ್ಚು ಜನರು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಸಿಕೊಂಡು ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದರು.ಈ ವಿಚಾರ ತಿಳಿದ ಅರಣ್ಯ ಇಲಾಖೆಯವರು ಇದೇ ಆಗಸ್ಟ್ 23 ರ ಬುದುವಾರದ ಮಧ್ಯರಾತ್ರಿ ವೇಳೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲ ಅವರ ನೇತೃತ್ವದಲ್ಲಿ 20 ಕ್ಕೂ ಹೆಚ್ಚು ಜೆಸಿಬಿಗಳನ್ನು ಬಳಸಿ ತೆರವೂ ಕಾರ್ಯಾಚರಣೆಗೆ ಮುಂದಾಗುತ್ತಾರೆ.ಅವತ್ತು ಒಂದೇ ದಿನದಲ್ಲಿ ಬರೋಬರಿ 120 ಎಕರೆಯಷ್ಟೂ ತೆರವೂ ಕಾರ್ಯಾಚರಣೆ ಮುಗಿಸಿದ್ದು,ಇಂದಿಗೂ ಸಹ ತೆರವೂ ಕಾರ್ಯಾಚರಣೆ ಮುಂದುವರೆದಿದ್ದು ಈಗಾಗಲೇ 500 ಕ್ಕೂ ಹೆಚ್ಚು ಎಕರೆಯನ್ನು ಅರಣ್ಯ ಇಲಾಖೆ ತಮ್ಮ ವಶಕ್ಕೆ ಪಡೆದುಕೊಳ್ತಿದೆ.ಇನ್ನು ತೆರವೂ ಕಾರ್ಯಾಚರಣೆಯಲ್ಲಿ ಜಮೀನಿನಲ್ಲಿ ಬೆಳೆದಿರುವ ಮಾವು,ಹಣ್ಣಿನ ಗಿಡಗಳು,ತರಕಾರಿ ಬೆಳೆ,ಕೋಳಿ ಫಾರಂ ಸೇರಿದಂತೆ ಎಲ್ಲವನ್ನೂ ಮುಲಾಜಿಲ್ಲದೆ ತೆರವೂ ಮಾಡಲಾಗ್ತಿದೆ.
ಇನ್ನು ಒಂದೂ ಕಡೆ ಪೋಲೀಸ್ ಭದ್ರತೆಯಲ್ಲಿ ಅರಣ್ಯ ಇಲಾಖೆಯವರು ತಮ್ಮ ಕಾರ್ಯಾಚರಣೆಯನ್ನೂ ಮುಂದುವರೆಸುತ್ತಿದ್ರೆ,ಮತ್ತೊಂದು ಕಡೆ ಭೂಮಿ ಕಳೆದುಕೊಂಡಿರುವ ಕೆಲ ರೈತರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.ನಿಜವಾಗಲೂ ನಮ್ಮದೂ ಅರಣ್ಯ ಇಲಾಖೆಗೆ ಸೇರಿರುವ ಜಮೀನು ಆಗಿದ್ದರೆ ಅವರು ವಶಕ್ಕೆ ಪಡೆದುಕೊಳ್ಳಲಿ, ನಾವೂ ಸುಮಾರು 50 ವಷ೯ಗಳಿಂದ ಇಲ್ಲೇ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ.ನಮ್ಮ ಹೆಸರಿಗೆ ಜಮೀನು ಮಂಜೂರು ಆಗಿರುವ ಕಂದಾಯ ಇಲಾಖೆಯ ದಾಖಲಾತಿ ಸಹ ಇದೆ.ಈಗಲೂ ಪಹಣಿಯಲ್ಲಿ ಇದೂ ಅರಣ್ಯ ಇಲಾಖೆಗೆ ಸೇರಿರುವ ಜಮೀನಲ್ಲ ನಮ್ಮದೇ ಜಮೀನು ಎಂದು ಬರ್ತಿದೆ.ಇದೇ ವಿಚಾರವಾಗಿ ನಾವು ಕೋರ್ಟ್ ಮೆಟ್ಟಿಲೇರಿ ತೆರವೂ ಮಾಡಬಾರದು ಎಂದು ತಡೆಯಾಜ್ಞೆ ಸಹ ತಂದಿದ್ದೇವೆ. ಆದ್ರೂ ಸಹ ಅರಣ್ಯ ಇಲಾಖೆಯ ಸಿಬ್ಬಂದಿಗಳು ಏಕಾಏಕಿ ನಮ್ಮ ಜಮೀನಿಗೆ ಬಂದು ತೆರವೂ ಮಾಡಿದ್ದಾರೆ.
ಬೆಲೆ ಬಾಳುವ ಮಾವು,ಪಾಲಿ ಹೌಸ್,ಕ್ಯಾಪ್ಸಿಕಂ,ಕೋಳಿ ಫಾರಂ ನೆಲಸಮವಾಗಿದ್ದು ತುಂಬಲಾರದ ನಷ್ಟು ಉಂಟಾಗಿದೆ.ಜಂಟಿ ಸರ್ವೇ ಮಾಡಿ ಸಮಸ್ಯೆ ಬಗೆಹರಿಸಿ ಎಂದು ಕೋರ್ಟ್ ಆದೇಶವಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಸವೇ೯ ಮಾಡುತ್ತಿಲ್ಲ,ಇದನ್ನೂ ಪ್ರಶ್ನೆ ಮಾಡಿದಕ್ಕೆ ನನ್ನ ವಿರುದ್ದ ಕೇಸ್ ದಾಖಲಿಸಿದ್ದಾರೆ. ನಮಗೆ ಮಂಜೂರು ಆಗಿರುವ ದಾಖಲಾತಿ ,ಬೇಕಾಗಿರುವ ದಾಖಲಾತಿ ಇದ್ದರೂ ಸಹ ತೆರವೂ ಮಾಡಿದ್ದಾರೆ ಎಂದು ಶ್ರೀಧರ್ ರೆಡ್ಡಿ ಎಂಬುವವರು ಆರೋಪ ಮಾಡ್ತಿದ್ದಾರೆ.
ಏಷ್ಯಾನೆಟ್ ಸುವರ್ಣನ್ಯೂಸ್ ವರದಿ ಬೆನ್ನಲ್ಲೇ ಅರಣ್ಯ ಒತ್ತುವರಿದಾರರ ವಿರುದ್ಧ ಕ್ರಮ
ಅದೇನೆ ಇರಲಿ ಅರಣ್ಯ ಇಲಾಖೆಯ ಭೂಮಿ ಒತ್ತುವರಿ ಆಗಿರೋದಂತು ಸುಳ್ಳಲ್ಲಾ. ಆದ್ರೇ ಕೆಲ ರೈತರು ತಮ್ಮ ಹೆಸರಿಗೆ ಕಂದಾಯ ಇಲಾಖೆಗೆ ಮಂಜೂರು ಆಗಿರುವ ದಾಖಲಾತಿಗಳನ್ನು ತೋರಿಸುತ್ತಿದ್ದು ಸಾಕಷ್ಟೂ ಗೊಂದಲು ಉಂಟು ಮಾಡಿದೆ. ಒಂದು ಕಡೆ ಅರಣ್ಯ ಇಲಾಖೆಯವ್ರೂ ಇದು ನಮ್ಮದೇ ಜಾಗ ಅಂತ ಪಟ್ಟು ಹಿಡಿದಿದ್ದು, ಇಲ್ಲಾ ಇದು ನಮ್ಮ ಜಾಗ ಎಂದು ಕೆಲ ರೈತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಂದಾಯ ಇಲಾಖೆಯವರು ಮಾತ್ರ ಕೈಕಟ್ಟಿ ಕುಳಿತಿದ್ದಾರೆ.ಕೂಡಲೇ ಕಂದಾಯ ಹಾಗೂ ಅರಣ್ಯ ಇಲಾಖೆಯವರು ಜಂಟಿ ಸರ್ವೇ ನಡೆಸಿದರೇ ಮಾತ್ರ ರೈತರ ಎಲ್ಲಾ ಗೊಂದಲಕ್ಕೆ ತೆರೆ ಬೀಳಲಿದೆ.