ಮತ್ತೆ ಸೂಪರ್ ಸಿಎಂ ಆದ ಎಚ್ ಡಿ ರೇವಣ್ಣ!: ಸಿಎಂ ಮಾತಿಗಿಲ್ಲಿ ಬೆಲೆಯೇ ಇಲ್ವಾ?

By Web DeskFirst Published Jan 1, 2019, 5:20 PM IST
Highlights

ಸಚಿವ ಎಚ್. ಡಿ. ರೇವಣ್ಣ ತಾನೇ ಸಿಎಂ ಎಂಬಂತೆ ವರ್ತಿಸುವುದು ಹೊಸದಲ್ಲ. ಆದರೀಗ ಮತ್ತದೇ ತಮ್ಮ ವರ್ತನೆಯನ್ನು ಮುಂದುವರೆಸಿದ್ದು, ಇದು ನೆಲಮಂಗಲದ ಗ್ರಾಮಸ್ಥರನ್ನು ಕೆರಳಿಸಿದೆ. ಅಷ್ಟಕ್ಕೂ ರೇವಣ್ಣ ಮಾಡಿದ್ದೇನು? ಇಲ್ಲಿದೆ ವಿವರ

ನೆಲಮಂಗಲ[ಜ.01]: ಲೋಕೋಪಯೋಗಿ ಸಚಿವ ಎಚ್. ಡಿ ರೇವಣ್ಣ ಮನ ಬಂದಂತೆ ವರ್ತಿಸುವುದು ಹೊಸದೇನಲ್ಲ. ಆದರೀಗ ತಮ್ಮ ಈ ವರ್ತನೆಯನ್ನು ಮತ್ತೆ ಮುಂದುವರೆಸಿದ್ದು, ಸಿಎಂ ಆದೇಶವನ್ನೂ ಕಡೆಗಣಿಸಿ, ಹೊರಡಿಸಿದ ಆದೇಶವನ್ನು ತಡೆ ಹಿಡಿದಿದ್ದಾರೆ.

ಹೌದು ಮತ್ತೆ ಎಚ್ ಡಿ ರೇವಣ್ಣ ಪಿಡಿಓ ವರ್ಗಾವಣೆಗೆ ಸಿಎಂ ಕುಮಾರಸ್ವಾಮಿ  ಆದೇಶಕ್ಕೆ ತಡೆ ತಂದು ಸೂಪರ್ ಸಿಎಂ ಎಂಬಂತೆ ವರ್ತಿಸಿದ್ದಾರೆ. ನೆಲಮಂಗಲದ ಯಂಟಗಾನಹಳ್ಳಿ ಗ್ರಾಮ ಪಂಚಾಯತಿ  ಪಿಡಿಓ ವಿರುದ್ದ ಕರ್ತವ್ಯಲೋಪ ಹಾಗೂ ಸರ್ವಾಧಿಕಾರಿ ದೋರಣೆ ಆರೋಪ ಹಿನ್ನೆಲೆ ವರ್ಗಾವಣೆ  ಮಾಡಿ ಎಂದು ಸಿಎಂ ಕುಮಾರಸ್ವಾಮಿ ಆದೇಶಿಸಿದ್ದರು. ಆದರೀಗ ಪಿಡಿಓ ಮೋಹನ್ ಕುಮಾರ್ ಗೆ ಸೂಪರ್ ಸಿಎಂ ಸಚಿವ ರೇವಣ್ಣ ಶ್ರೀ ರಕ್ಷೆ ನೀಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದ ಪಿಡಿಓ ವರ್ಗಾವಣೆ ಆದೇಶ ತಡೆ ಹಿಡಿದಿದ್ದಾರೆ.

ರೇವಣ್ಣರವರ ಈ ವರ್ತನೆಯಿಂದ ಆಕ್ರೋಶಿತರಾದ ಗ್ರಾಮಸ್ಥರು ಪಿಡಿಓ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. 

click me!