ಹೊಸ ವರ್ಷಾಚರಣೆಗೆ ಶಾಸಕರ ವಿದೇಶಿ ಪ್ರವಾಸ!

Published : Jan 01, 2019, 04:56 PM IST
ಹೊಸ ವರ್ಷಾಚರಣೆಗೆ ಶಾಸಕರ ವಿದೇಶಿ ಪ್ರವಾಸ!

ಸಾರಾಂಶ

ಇಡೀ ವಿಶ್ವವೇ 2019ನ್ನು ಅದ್ಧೂರಿಯಾಗಿ ಸ್ವಾಗತಿಸಿದೆ. ಹೊಸ ವರ್ಷದ ಸಂಭ್ರಮ ಕಳೆಗಟ್ಟಿದೆ. ಹೀಗಿರುವಾಗ ರಾಜ್ಯದ ರಾಜಕೀಯ ಮುಖಂಡರು ಹೊಸ ವರ್ಷದ ಆಚರಣೆಗೆ ವಿದೇಶಕ್ಕೆ ತೆರಳಿದ್ದಾರೆ.

ಬೆಂಗಳೂರು[ಜ.01]: ವಿಶ್ವದಾದ್ಯಂತ ಹೊಸ ವರ್ಷಾಚರಣೆಯ ಸಂಭ್ರಮ ಕಳೆಗಟ್ಟಿದೆ. ಆದರೆ ಈ ನಡುವೆ ನಮ್ಮ ರಾಜ್ಯದ ಶಾಸಕರು ನ್ಯೂ ಇಯರ್ ಸಲೆಬ್ರೇಟ್ ಮಾಡಲು ವಿದೇಶಕ್ಕೆ ಹಾರಿದ್ದಾರೆ. 

ಹೌದು ಶಾಸಕರು ಹೊಸ ವರ್ಷಾಚರಣೆಗೆ ಫ್ಯಾಮಿಲಿ ಜೊತೆ ದುಬೈ, ಸಿಂಗಪುರ್ ಎಂದು ವಿದೇಶಕ್ಕೆ ಹಾರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ದುಬೈ ಪ್ರವಾಸಕ್ಕೆ ತೆರಳಿದರೆ ಶಾಸಕ ಅಜಯ್ ಸಿಂಗ್ ಕೂಡಾ ಅವರೊಂದಿಗೆ ತೆರಳಿದ್ದಾರೆ.

ಇತ್ತ ಪರಿಷತ್ ಸದಸ್ಯ ರಿಜ್ವಾಬ್ ಹರ್ಷದ್, ಶ್ರೀನಿವಾಸ್ ಮಾಣೆ ಕೂಡಾ ದುಬೈನಲ್ಲಿ ನೂತನ ವರ್ಷದ ಸಂಭ್ರಮಾಚರಿಸಿದ್ದಾರೆ. ಉಳಿದಂತೆ ಶಾಸಕ ಎಸ್. ಟಿ. ಸೋಮಶೇಖರ್, ಶಾಸಕ ಮುನಿರತ್ನ, ಬೈರತಿ ಬಸವರಾಜ್ ಸಿಂಗಪುರ್ ವಿಮಾನವೇರಿದ್ದಾರೆ.

ಇತ್ತ ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಆಪರೇಷನ್ ಕಮಲದ ಭೀತಿ ಇದ್ದರೂ, ಹೊಸ ವರ್ಷದ ಆಚರಣೆಗೆ ರಾಜಕೀಯ ನಾಯಕರು ವಿದೆಶಕ್ಕೆ ತೆರಳಿರುವುದು ಅಚ್ಚರಿ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರಲ್ಲಿ ಪಾಸ್‌ಪೋರ್ಟ್ ಮಾಡಲು ಎಲ್ಲೂ ಹೋಗಬೇಕಿಲ್ಲ, ಮನೆ ಬಾಗಿಲಿಗೆ ಬರಲಿದೆ ವ್ಯಾನ್
ಬೆಂಗಳೂರಿನ 2ನೇ ಏರ್‌ಪೋರ್ಟ್‌, ಗುರುತಿಸಿರೋ ಈ 3 ಸ್ಥಳಗಳಲ್ಲಿ ಯಾವುದು ಬೆಸ್ಟ್? ಅಧ್ಯಯನಕ್ಕೆ ಟೆಂಡರ್ ಕರೆದ ಸರ್ಕಾರ!