
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಮೇ.11) : ಕರ್ತವ್ಯ ವೇಳೆಯೇ ಕಂಠಪೂರ್ತಿ ಕುಡಿದು ಸವದತ್ತಿ (Savadatti) ತಹಶಿಲ್ದಾರ್ ಕಚೇರಿ (tahasildar Office) ಎದುರು ಗ್ರಾಮಲೆಕ್ಕಾಧಿಕಾರಿ ಅಡ್ಡಲಾಗಿ ಮಲಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋಗೆ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅಭಿನಯದ ಯುದ್ಧಕಾಂಡ ಚಿತ್ರದ ಕುಡಿಯೋದೆ ನನ್ನ ವೀಕ್ನೆಸ್ಸು ಸಾಂಗ್ ಎಡಿಟ್ ಮಾಡಿದ ವಿಡಿಯೋ ವೈರಲ್ ಆಗಿದೆ.
ಮೊದಲು ಸವದತ್ತಿ ತಾಲೂಕಿನ ಗೊರವನಕೊಳ್ಳ ( Goravana Kolla) ಗ್ರಾಮದ ಗ್ರಾಮ ಲೆಕ್ಕಾಧಿಕಾರಿ (village accountant) ಆಗಿದ್ದ ಸಂಜು ಬೆಣ್ಣಿ (Sanju Benni) ಗೊರವನ್ನಕೊಳ್ಳ ಗ್ರಾಮದಲ್ಲಿಯೂ ಇದೇ ರೀತಿ ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದನಂತೆ. ಹೀಗಾಗಿ ಜಿಲ್ಲೆಯ ಸವದತ್ತಿ ತಹಶೀಲ್ದಾರ್ ಕಚೇರಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇಷ್ಟಾದರೂ ತಹಶಿಲ್ದಾರ್ ಕಚೇರಿಯಲ್ಲಿಯೂ ತನ್ನ ಹಳೆಯ ಚಾಳಿಯನ್ನು ಗ್ರಾಮಲೆಕ್ಕಾಧಿಕಾರಿ ಸಂಜು ಬೆಣ್ಣಿ ಮುಂದುವರಿಸಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿ ಸಂಜು ಬೆಣ್ಣಿ ಕರ್ತವ್ಯ ವೇಳೆ ಕಂಠಪೂರ್ತಿ ಕುಡಿದು ದುರ್ವತನೆ ಮಾಡ್ತಾನೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು ಗ್ರಾಮಲೆಕ್ಕಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ( Prashant Patil) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ