
ದಾವಣಗೆರೆ (ಜು.21): ಕೂಡಲಸಂಗಮ ಸ್ವಾಮೀಜಿಗೆ ವಿಷಪ್ರಾಷನ ಶಂಕೆ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿಜಯಾನಂದ ಕಾಶಪ್ಪನವರು, ಈ ಆರೋಪಗಳನ್ನು 'ಡ್ರಾಮಾ' ಎಂದು ಕರೆದಿದ್ದಾರೆ.
ಇಂದು ದಾವಣಗೆರೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಕಾಶಪ್ಪನವರು, 'ಅರವಿಂದ ಬೆಲ್ಲದ ಲಿಂಗಾಯತನೇ ಆಗಿದ್ದರೆ ಡಿಎನ್‌ಎ ಟೆಸ್ಟ್ ಮಾಡಿಸಲಿ. ಸುಮ್ಮನೆ ಗೂಬೆ ಕೂರಿಸೋದಲ್ಲ. ಯತ್ನಾಳನಂತಹ ಲೋಫರ್‌ಗಳು ವಿಭೂತಿ ಹಚ್ಚಿದ್ದನ್ನು ಪ್ರಶ್ನೆ ಮಾಡ್ತಾರೆ. ಇವರೆಲ್ಲಾ ಈಗ ಪಂಚಮಸಾಲಿ ಸಮಾಜದವರಂತೆ ಬಂದಿದ್ದಾರೆ' ಎಂದು ಕಿಡಿಕಾರಿದರು.
ತನು-ಮನ-ಧನದಿಂದ ಕೂಡಲಸಂಗಮ ಪೀಠಕ್ಕೆ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದ ಕಾಶೆಪ್ಪನವರ್, ಈ ಲೋಫರ್‌ಗಳು ಏನ್ ಹೇಳ್ತಾರೆ? ಬಿಜೆಪಿಯವರು ಬಿಟ್ಟು ಯಾರೂ ಅಲ್ಲಿ(ಸ್ವಾಮೀಜಿ ಬಳಿ) ಹೋಗಿಲ್ಲ. ಜೆಡಿಎಸ್ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಕೂಡ ಬಿಜೆಪಿ ಮೈತ್ರಿ ಪಕ್ಷದವರು ಎಂದರು. ಸ್ವಾಮೀಜಿಯ ಹೆಲ್ತ್ ರಿಪೋರ್ಟ್ ವೈದ್ಯರೊಂದಿಗೆ ಮಾತನಾಡಿ ಪಡೆದಿದ್ದೇನೆ. ಇವರ ಸುಳ್ಳು ಆರೋಪಗಳಿಗೆ ನಾನು ಜಗ್ಗೋದಿಲ್ಲ, ಬಗ್ಗೋದಿಲ್ಲ, ಕುಗ್ಗೋದಿಲ್ಲ ಎಂದು ಏಕವಚನದಲ್ಲಿ ಅರವಿಂದ ಬೆಲ್ಲದ, ಸಿಸಿ ಪಾಟೀಲ್, ಮತ್ತು ಯತ್ನಾಳರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಅರವಿಂದ್ ಬೆಲ್ಲದ್ ವಿಪಕ್ಷ ನಾಯಕರಿದ್ದಾರೆ. ಅವರೇ ತನಿಖೆ ಮಾಡಿಸಲಿ, ಸತ್ಯ ಬಯಲಾಗಲಿ ಎಂದು ಸವಾಲು ಹಾಕಿದ ಕಾಶಪ್ಪನವರು, ಈ ವಿವಾದಕ್ಕೆ ರಾಜಕೀಯ ಒತ್ತಡವೇ ಕಾರಣ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ