
ಬೆಂಗಳೂರು(ಡಿ.24): ವಿಧಾನಮಂಡಲದ ಅಧಿವೇಶನ ವರ್ಷಕ್ಕೆ ಕನಿಷ್ಠ 60 ದಿನಗಳಾದರೂ ನಡೆಸಬೇಕು ಎಂಬ ನಿಯಮವನ್ನು 10 ವರ್ಷಗಳಿಂದ ಯಾವುದೇ ಸರ್ಕಾರ ಪಾಲನೆ ಮಾಡದೆ ಗಾಳಿಗೆ ತೂರಿದ್ದು, ಪ್ರಸಕ್ತ ವರ್ಷದಲ್ಲಿ ಕೇವಲ 29 ದಿನಗಳು ಮಾತ್ರ ಅಧಿವೇಶನ ನಡೆಸಲಾಗಿದೆ.
2024ನೇ ಸಾಲಿನಲ್ಲಿ ರಾಜ್ಯಪಾಲರು 2 ಸದನವನ್ನು ದೇಶಿಸಿ ಭಾಷಣ ಮಾಡುವ ಜಂಟಿ ಅಧಿವೇಶನದಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನವು ಬಜೆಟ್ ಅಧಿವೇಶನ, ಚಳಿಗಾಲ ಮತ್ತು ಮಳೆಗಾಲ ಅಧಿವೇಶನ ಸೇರಿ 29 ದಿನಗಳಿಗೆ ಸೀಮೀತವಾಗಿದೆ.
ಬೆಳಗಾವಿ ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ನಾರಾಯಣಸ್ವಾಮಿ
10 ದಿನಗಳ ಕಾಲ ಚಳಿಗಾಲ ಅಧಿವೇಶನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಒಂದು ದಿನ ಮೊಟಕುಗೊಳಿಸಲಾಗಿತ್ತು. ಸದನ ನಡೆಯುವ ವೇಳೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನದ ಹಿನ್ನೆಲೆಯಲ್ಲಿ 1 ದಿನ ರಜೆ ಘೋಷಣೆ ಕಾರಣ ಅಧಿವೇಶನ 8 ದಿನಗಳ ಕಾಲ ನಡೆಯಿತು.
ವರ್ಷಕ್ಕೆ 60 ದಿನಗಳಿಗೂ ಹೆಚ್ಚು ದಿನ ಅಧಿವೇಶನ ನಡೆಸಬೇಕು ಎಂಬ ಒತ್ತಾಯಗಳು ಪದೇ ಪದೆ ಕೇಳಿಬಂದರೂ ಸರ್ಕಾರಗಳು ಮಾತ್ರ ಅದಕ್ಕೆ ಸೊಪ್ಪು ಹಾಕುತ್ತಿಲ್ಲ. 2015ರಲ್ಲಿ 58 ದಿನ ಕಾಲ ವಿಧಾನಮಂಡಲದ ಅಧಿವೇಶನ ನಡೆದ ಬಳಿಕ ಈವರೆಗೆ ಅಷ್ಟು ದಿನ ನಡೆದಿರುವ ಉದಾಹರಣೆಗಳೇ ಇಲ್ಲ. 2023ರಲ್ಲಿ ಚುನಾವಣೆ ನಡೆದ ವರ್ಷವಾಗಿದ್ದು ಬಿಜೆಪಿ ಸರ್ಕಾರ ಅವಧಿಯಲ್ಲಿ 11 ದಿನ ಮತ್ತು ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ 28 ದಿನಗಳ ಕಾಲ ಮಾತ್ರ ಉಭಯಮಂಡಲ ಅಧಿವೇಶನ ನಡೆದಿದೆ. 50ರಿಂದ 80ರ ದಶಕದವರೆಗೆ ನಡೆದ ಕಲಾ ಪಗಳು ಅತ್ಯುತ್ತಮವಾಗಿವೆ. ಸರ್ಕಾರವೇ ನಿಗದಿ ಮಾಡಿದ 60 ದಿನಗಳಿಗಿಂತಲೂ ಹೆಚ್ಚು ಕಾಲ ನಡೆದಿದೆ. 1961 ರಲ್ಲಿ 92 ದಿ, 1963 ರಲ್ಲಿ 98 ದಿನ ಮತ್ತು 1973ರಲ್ಲಿ 97 ದಿನ ಅಧಿವೇಶನ ನಡೆಯುವ ಮೂಲಕ ಇತಿಹಾಸ ಬರೆಯಲಾಗಿದೆ. ಇನ್ನುಳಿದ ವರ್ಷಗಳಲ್ಲಿ 60ಕ್ಕೂ ಹೆಚ್ಚು ದಿನ ನಡೆದಿರುವ ಉದಾಹರಣೆಗಳಿವೆ.
ಇತ್ತೀಚಿನ ಸರ್ಕಾರಗಳಿಗೆ ಬದ್ಧತೆ ಇಲ್ಲವಾಗಿದೆ. ಅಧಿವೇಶನ 60 ದಿನಗಳ ಕಾಲ ನಡೆಯುವುದರಿಂದ ಜನರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಬಹುದು. ಇತ್ತೀಚಿನ ದಿನದಲ್ಲಿ ಜನರ ಸಮಸ್ಯೆ.1 ರ ಸಮಸ್ಯೆಗಳಿಗಿಂತ ಹೆಚ್ಚಾಗಿ ರಾಜಕೀಯ ವಿಚಾರಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಕನಿಷ್ಠ 60 ದಿನ ಕಾಲ ಅಧಿವೇಶನ ನಡೆಸುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಮತ್ತೊಮ್ಮೆ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮುಂದಿನ ವರ್ಷಗಳಲ್ಲಾದರೂ 60 ದಿನಗಳ ಅಧಿವೇಶನ ನಡೆಸುವಂತೆ ಮನವಿ ಮಾಡಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ