ತರಕಾರಿ, ಹಣ್ಣುಗಳ ಪೂರೈಕೆಯಲ್ಲಿ ಕೊರತೆ ಹಿನ್ನೆಲೆ| ವರಮಹಾಲಕ್ಷ್ಮಿ ಹಬ್ಬಕ್ಕೆ ಏರಿದ ಬೆಲೆ ಇಳಿಯುತ್ತಲೇ ಇಲ್ಲ| ಕೋವಿಡ್‌ನಿಂದ ವ್ಯಾಪಾರವಿಲ್ಲದೆ ಕಂಗೆಟ್ಟು ಬೆಲೆ ಏರಿಸಿದ ವರ್ತಕರು| ವರಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ್ದ ತರಕಾರಿ-ಹಣ್ಣುಗಳ ಬೆಲೆ ಇಳಿಕೆಯಾಗಿಲ್ಲ| ಮಾರುಕಟ್ಟೆಗೆ ಕೆಲ ತರಕಾರಿಗಳ ಸರಬರಾಜು ಕೊರತೆಯೂ ಬೆಲೆ ಏರಿಕೆಗೆ ಕಾರಣ|
ಬೆಂಗಳೂರು(ಆ.06): ಶ್ರಾವಣ ಮಾಸದ ಹಬ್ಬಗಳು ಆರಂಭವಾಗುವುದರೊಂದಿಗೆ ತರಕಾರಿ-ಹಣ್ಣು ಮತ್ತು ಸೊಪ್ಪುಗಳ ಬೆಲೆಯಲ್ಲಿ ಶೇ.10ರಷ್ಟು ಏರಿಕೆಯಾಗಿದೆ. ಕೋವಿಡ್‌ನಿಂದ ವ್ಯಾಪಾರವಿಲ್ಲದೆ ಕಂಗೆಟ್ಟಿದ್ದ ವರ್ತಕರು, ಬೆಲೆ ಏರಿಸಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ್ದ ತರಕಾರಿ-ಹಣ್ಣುಗಳ ಬೆಲೆ ಇಳಿಕೆಯಾಗಿಲ್ಲ. ಅಲ್ಲದೆ ಮಾರುಕಟ್ಟೆಗೆ ಕೆಲ ತರಕಾರಿಗಳ ಸರಬರಾಜು ಕೊರತೆಯೂ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಕೆಲ ವ್ಯಾಪಾರಿಗಳು ತಿಳಿಸಿದ್ದಾರೆ.
ಬಜ್ಜಿ ಮೆಣಸಿನಕಾಯಿ ಮತ್ತು ಕ್ಯಾಪ್ಸಿಕಾಂ ಬೆಳೆ ಮಳೆಗೆ ಹಾಳಾಗಿದ್ದು, ಉತ್ಪಾದನೆ ಕುಂಠಿತಗೊಂಡಿದೆ. ಮಾರುಕಟ್ಟೆಯಲ್ಲಿ ಬಜ್ಜಿ ಮೆಣಸಿನಕಾಯಿ ಕೆ.ಜಿ. 100 ರು., ಕ್ಯಾಪ್ಸಿಕಾಂ ಕೆ.ಜಿ. 70- 85, ಕ್ಯಾರೆಟ್ 70 ರು. ತಲುಪಿದೆ. ಚಿಕ್ಕಬಳ್ಳಾಪುರ, ಕೋಲಾರ, ಆನೇಕಲ್, ತುಮಕೂರು ಸೇರಿದಂತೆ ವಿವಿಧ ಭಾಗಗಳಿಂದ ಬರುತ್ತಿದ್ದ ಮೆಣಸಿನಕಾಯಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಮಳೆಯ ಕಾಲದಲ್ಲಿ ಬಜ್ಜಿ, ಬೋಂಡಕ್ಕೆ ಬೇಡಿಕೆ ಇದೆ. ಈ ಕಾರಣದಿಂದಲೂ ಬಜ್ಜಿ ಮೆಣಸಿಕನಾಯಿ, ಕ್ಯಾಪ್ಸಿಕಾಂ ದರ ಹೆಚ್ಚಾಗಿದೆ. ಉಳಿದ ತರಕಾರಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮಾರುಕಟ್ಟೆಗೆ ಬರುವ ಗ್ರಾಹಕ ಸಂಖ್ಯೆ ಇಳಿಮುಖವಾಗಿದೆ. ಸೋಂಕು ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿದ್ದರೂ ಗ್ರಾಹಕರು ಹಿಂದಿನಂತೆ ಬರುತ್ತಿಲ್ಲ ಎಂದು ಮಾವಳ್ಳಿಯ ದೇವಸ್ಥಾನ ಮಾರುಕಟ್ಟೆಯ ವ್ಯಾಪಾರಿ ದೇವಿಗನ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು: ಹಸಿ ಕಸ ಸಂಗ್ರಹಕ್ಕೆ ಟೆಂಡರ್ ಅನಿವಾರ್ಯ
ತರಕಾರಿ ದರ (ಕೆ.ಜಿ.ಗಳಲ್ಲಿ)
ಬೀನ್ಸ್ 45 ರು.
ಕ್ಯಾರೆಟ್ 70 ರು.
ಕ್ಯಾಪ್ಸಿಕಾಂ 70 ರು.
ಬೆಂಡೆಕಾಯಿ 45 ರು.
ಆಲೂಗಡ್ಡೆ 35 ರು.
ಹಿರೇಕಾಯಿ 50 ರು.
ಮೂಲಂಗಿ 20 ರು.
ಬೀಟ್‌ರೂಟ್ ನಾಟಿ 30, ಊಟಿ 40ರು.
ಕೋಸು 20 ರು.
ಗುಂಡು ಬದನೆಕಾಯಿ 20-25 ರು.
ಮೆಣಸಿನಕಾಯಿ 40-50 ರು.
ಶುಂಠಿ 120 ರು.
ಈರುಳ್ಳಿ 14-16 ರು.
ಬೆಳ್ಳುಳ್ಳಿ 120-130 ರು.
ಹೂ ಕೋಸು ದೊಡ್ಡದು 25 ರು.
ಬಟಾಣಿ ಫಾರಂ 100 ರು., ನಾಟಿ 140 ರು.
ಸೀಮೆ ಬದನೆ 20 ರು.
ಹಾಗಲಕಾಯಿ 40 ರು.
ಟೊಮ್ಯಾಟೊ 14-15 ರು.
ಹಾಪ್‌ಕಾಮ್ಸ್ ತರಕಾರಿ ದರ (ಕೆ.ಜಿ.ಗಳಲ್ಲಿ)
ಬದನೆಕಾಯಿ 26 ರು.
ಬೀಟ್‌ರೂಟ್ 22 ರು.
ಸೋರೆಕಾಯಿ 34 ರು.
ಕ್ಯಾರೆಟ್ ನಾಟಿ 78 ರು. ಊಟಿ-87 ರು.
ಹಾರಿಕಾಟ ಬೀನ್ಸ್ 54 ರು.
ನಿಂಬೆಹಣ್ಣು 60 ರು.
ಬಟಾಣಿ 140 ರು.
ಆಲೂಗಡ್ಡೆ 47 ರು.
ಹೀರೇಕಾಯಿ 52 ರು.
ಟೊಮ್ಯಾಟೊ 19 ರು.
ಅವರೆಕಾಯಿ 37 ರು.
ನವಿಲುಕೋಸು 32 ರು.
ನುಗ್ಗೆಕಾಯಿ 76 ರು.
ಸೊಪ್ಪುಗಳ ಬೆಲೆ (ಕೆ.ಜಿ.ಗಳಲ್ಲಿ)
ಮೆಂತ್ಯ 87 ರು.
ಪುದೀನ 64 ರು.
ಪಾಲಕ್ ಸೊಪ್ಪು 52 ರು.
ಹಣ್ಣುಗಳು...
ಏಲಕ್ಕಿ ಬಾಳೆ 64 ರು.
ಪಚ್ಚಬಾಳೆ 20-25 ರು.
ದಾಳಿಂಬೆ 120 ರು.
ಅಡುಗೆ ಬಾಳೆ 54 ರು.
ಮೂಸಂಬಿ 50-60 ರು.