ಮತ್ತೊಂದು ಹೋರಾಟಕ್ಕೆ ಮುಂದಾದ ವಾಟಾಳ್; ಇಂದು ಪುರುಷರ ಪರವಾಗಿ ಪ್ರತಿಭಟನೆ

By Ravi Janekal  |  First Published Oct 22, 2023, 8:49 AM IST

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಯೋಜನೆ ಜಾರಿಗೆ ತಂದಂತೆ ಪುರುಷರಿಗೂ ಉಚಿತ ಪ್ರಯಾಣದ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿ ಇಂದು ಕನ್ನಡ ಒಕ್ಕೂಟ ನಾಯಕ ಮಾಜಿ ಶಾಸಕ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಪುರುಷರ ಪರವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.


ಬೆಂಗಳೂರು (ಅ.22): ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಯೋಜನೆ ಜಾರಿಗೆ ತಂದಂತೆ ಪುರುಷರಿಗೂ ಉಚಿತ ಪ್ರಯಾಣದ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿ ಇಂದು ಕನ್ನಡ ಒಕ್ಕೂಟ ನಾಯಕ ಮಾಜಿ ಶಾಸಕ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಪುರುಷರ ಪರವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಇಂದು 12 ಗಂಟೆಗೆ ಮೆಜೆಸ್ಟಿಕ್‌ನಲ್ಲಿ ಪುರುಷರ ಪರವಾಗಿ ಪ್ರತಿಭಟನೆ ನಡೆಸಲಿರುವ ವಾಟಾಳ್ ನಾಗರಾಜ್. ಬೆಂಗಳೂರಿನ ಬಿಎಂಟಿಸಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡುವ ಮೂಲಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪುರುಷರಿಗೂ ಮೀಸಲಿಡುವಂತೆ ಸರ್ಕಾರಕ್ಕೆ ಒತ್ತಾಯ. ಮಹಿಳೆಯರಿಗಾಗಿ ಈಗಾಗಲೇ ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ ನೀಡಿರುವ ಸರ್ಕಾರ. ಆದರೆ ಪುರುಷರಿಗೆ ಯಾವುದೇ ಉಚಿತ ಯೋಜನೆ ನೀಡಿಲ್ಲ. ಕೇವಲ ಮಹಿಳೆಯರಿಗೆ ಉಚಿತ ಯೋಜನೆ ನೀಡುತ್ತಿರುವ ಸರ್ಕಾರ. ಸರ್ಕಾರದ ನಡೆ ಖಂಡಿಸಿದ ವಾಟಾಳ್ ನಾಗರಾಜ್. ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ನೀಡಿದಂತೆ ಪುರುಷರಿಗೆ "ನಾರಾಯಣ' ಯೋಜನೆ ನೀಡುವಂತೆ ವಾಟಾಳ್ ನಾಗರಾಜ್ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

Tap to resize

Latest Videos

News Hour: ಬುರ್ಖಾ ಧರಿಸಿ ಪ್ರತಿಭಟಿಸಿದ ವಾಟಾಳ್‌, ಇದು ಹೆಂಗಸರ ಸರ್ಕಾರ ಎಂದ ಹೋರಾಟಗಾರರು!

click me!