ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಫೇಸ್‌ಬುಕ್‌ನಲ್ಲಿ ಪರಿಚಯವಾದ ಶ್ವೇತಾಗೌಡ ಎಂಬುವವರ ಜೊತೆ ವ್ಯವಹಾರ ಮಾಡಿ ವಂಚನೆಗೆ ಒಳಗಾಗಿದ್ದು, ಆಕೆ ಕೊಟ್ಟ 14 ಲಕ್ಷ ರೂ. ಹಣ ಹಾಗೂ ಚಿನ್ನಾಭರಣಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು (ಡಿ.24): ಕರ್ನಾಟಕದ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಫೆಸ್‌ಬುಕ್‌ನಲ್ಲಿ ಸುಂದರಿಯ ಶ್ವೇತಾಗೌಡ ಅಂದ ನೋಡಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೇ ದೊಡ್ಡ ಮಿಸ್ಟೇಕ್ ಆಗೋಯ್ತು. ಇದಾದ ನಂತರ ಕೋಟಿ ಕೋಟಿ ಹಣದ ಮಾತನಾಡಿ ಚಿನ್ನಾಭರಣದ ಸುಂದರಿ ಮಾತು ನಂಬಿ ಚಿನ್ನದ ಅಂಗಡಿಗೆ ಕರೆದುಕೊಂಡು ಹೋದ ವರ್ತೂರು ಪ್ರಕಾಶ್‌ಗೆ ಗೋಲ್ಡ್ ಬಿಸಿನೆಸ್ ಐಡಿಯಾ ಕೊಟ್ಟು ಯಾಮಾರಿಸಿದ್ದಾರೆ. ತಮ್ಮಿಬ್ಬರ ಗೋಲ್ಡ್ ಬಿಸಿನೆಸ್‌ನಲ್ಲಿ ವರ್ತೂರು ಪ್ರಕಾಶ್‌ಗೆ ಕೊಡಲಾಗಿದ್ದ ಹಣ ಹಾಗೂ ಚಿನ್ನಾಭರಣವನ್ನು ಇದೀಗ ಪೊಲೀಸರಿಗೆ ವಾಪಸ್ ಕೊಟ್ಟಿದ್ದಾರೆ.
ಶ್ವೇತಾಗೌಡ ಮೇಲಿನ ಗೋಲ್ಡ್ ಬಿಜಿನೆಸ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವರ್ತೂರು ಪ್ರಕಾಶ್‌ಗೆ ನೋಟೀಸ್ ಕೊಟ್ಟು ಸ್ಟೇಷನ್‌ಗೆ ಕರೆಸಿಕೊಂಡು ಪುಲಿಕೇಶಿನಗರ ಎಸಿಪಿ ಗೀತಾ ಅವರು ವಿಚಾರಣೆ ಮಾಡಿದ್ದಾರೆ. ಈ ವೇಳೆ ಮಾಜಿ ಸಚಿವ ವರ್ತೂರು ಪ್ರಕಾಶ ಪೋಲೀಸರ ಮುಂದೆ ಮೌನಕ್ಕೆ ಶರಣಾಗಿದ್ದಾರೆ. ಜೊತೆಗೆ, ಬಂಧನದ ಭೀತಿಯಿಂದಾಗಿ ಹಣ ಹಾಗೂ ಒಡವೆ ವಾಪಸ್ ನೀಡಲು ಮುಂದಾಗಿದ್ದಾರೆ. ಪೊಲೀಸರಿಗೆ 14 ಲಕ್ಷ ರೂ. ಹಣ ಹಾಗೂ ಒಡವೆಗಳನ್ನ ವಾಪಸ್ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ.
undefined
ಇನ್ನು ಈ ಬಗ್ಗೆ ಪೊಲೀಸರು ವಿಚಾರಣೆ ಮಾಡುತ್ತಿದ್ದರೂ, ಪೊಲೀಸರ ಮುಂದೆ ವರ್ತೂರು ಪ್ರಕಾಶ್ ಮೌನದಲ್ಲೇ ಕುಳಿತಿದ್ದಾರೆ. ಇನ್ನು ವರ್ತೂರು ಪ್ರಕಾಶ್ ಅವರಿಗೆ ಗೋಲ್ಡ್ ಬಿಜಿನೆಸ್ ವಂಚನೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದಾರೆ. ಈ ಬಗ್ಗೆ ಎಸಿಪಿ ಗೀತಾ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ವರ್ತೂರು ಸಂತೋಷ್ ಬಳಿಯಿದ್ದ ಹಣ ಮತ್ತು ಒಡವೆಗಳನ್ನು ಪೊಲೀಸರು ಪಂಚರ ಸಮಕ್ಷಮ ಹಣ ಹಾಗೂ ಒಡವೆ ವಾಪಸ್ ಪಡೆಯಲಿದ್ದಾರೆ.
ಇದನ್ನೂ ಓದಿ: ಶ್ವೇತಾ ಗೌಡ ಬಂಧನ: ವರ್ತೂರು ಪ್ರಕಾಶ್ ಹೇಳಿದ್ದೇನು?
ಪೊಲೀಸರ ವಿಚಾರಣೆ ಬಳಿಕ ವರ್ತೂರ್ ಪ್ರಕಾಶ್ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನನಗೆ ಆಕೆ ಸ್ನೇಹಿತೆ ಅಲ್ಲ. ಐದಾರು ತಿಂಗಳ ಹಿಂದೆ ಪರಿಚಯ ಆಗಿದೆ. ನನ್ನ ಹೆಸರು ಬಳಸಿಕೊಂಡು ಚಿನ್ನಭಾರಣ ಖರೀದಿ ಮಾಡಿಕೊಂಡಿದ್ದಾಳೆ. ಈ ಒಡೆವೆಗಳನ್ನು ಖರೀದಿ ಮಾಡಿದ್ದಾಳೆ. ನನಗೂ ಮನಸ್ಸಿಗೆ ನೋವು ಆಗಿದೆ. 2 ಕೋಟಿ ರೂ. ಚಿನ್ನಭಾರಣ ಕೊಟ್ಟಿದ್ದಾರೆ. ಚಿನ್ನದ ಅಂಗಡಿಯವರು ಹೇಗೆ ಚಿನ್ನ ಕೊಟ್ಟಿದ್ದಾರೋ ಗೊತ್ತಿಲ್ಲ. ನನ್ನ ತರಹ ಕೆಲ ರಾಜಕಾರಣಿಗಳು ಹೆಸರು ,ಪೊಟೊ ತೆಗೆದುಕೊಂಡು ವಂಚನೆ ಮಾಡಿದ್ದಾಳೆ. ಕೆಲ ದೂರುಗಳು ಅಕೆಯ ವಿರುದ್ದ ಸಹ ಬಂದಿದೆ. ಪೊಲೀಸರ ವಿಚಾರಣೆ ವೇಳೆ ಎಲ್ಲಾ ಮಾಹಿತಿಯನ್ನ ಕೊಟ್ಟಿದ್ದೀನಿ ಎಂದು ಹೇಳಿದರು.
ಇದನ್ನೂ ಓದಿ:ಫೇಸ್ಬುಕ್ ಗೆಳತಿಯಿಂದ ವರ್ತೂರು ಪ್ರಕಾಶ್‌ಗೆ ಬಂಧನ ಭೀತಿ; ಕೋಲಾರ ಬಿಜೆಪಿ ನಾಯಕನಿಗೂ ತಲೆಬಿಸಿ!