ಪ್ರವರ್ಗ ಯಾವುದಾದರೂ ಇರಲಿ, ಮೀಸಲು ಬೇಕು: ವಚನಾನಂದ ಶ್ರೀ

By Kannadaprabha News  |  First Published Mar 24, 2023, 3:00 AM IST

ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾಗಿರುವ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎನ್ನುವುದರ ಹೋರಾಟದ ಹಿಂದೆ 3 ದಶಕಗಳ ಇತಿಹಾಸವಿದೆ. ಹರಿಹರ ಪೀಠವು ವಿವಿಧ ಹಂತಹಂತಗಳಲ್ಲಿ ಹೋರಾಟ ನಡೆಸಿಕೊಂಡು ಬಂದಿದೆ ಎಂದ ವಚನಾನಂದ ಸ್ವಾಮೀಜಿ. 


ಬೆಂಗಳೂರು(ಮಾ.24): ಹರಿಹರ ಪಂಚಮಸಾಲಿ ಪೀಠದ ಸತತ ಹೋರಾಟದ ಫಲವಾಗಿ ಶುಕ್ರವಾರ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಕೊಡುಗೆ ಘೋಷಣೆಯಾಗುವ ವಿಶ್ವಾಸವಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಎಂದು ಹೇಳಿದ್ದಾರೆ.

ನಗರದ ಶ್ವಾಸ ಯೋಗ ಕೇಂದ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾಗಿರುವ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎನ್ನುವುದರ ಹೋರಾಟದ ಹಿಂದೆ 3 ದಶಕಗಳ ಇತಿಹಾಸವಿದೆ. ಹರಿಹರ ಪೀಠವು ವಿವಿಧ ಹಂತಹಂತಗಳಲ್ಲಿ ಹೋರಾಟ ನಡೆಸಿಕೊಂಡು ಬಂದಿದೆ ಎಂದರು.

Latest Videos

undefined

ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಕಾಯ್ದೆ ಬೋಗಸ್‌: ಸುರ್ಜೇವಾಲಾ ಆರೋಪ

ಈ ಹೋರಾಟ ಈಗ ಅಂತಿಮ ಹಂತಕ್ಕೆ ಬಂದು ಸೇರಿದೆ. 2ಡಿ ಹಾಗೂ 2ಸಿ ಮೀಸಲಾತಿಯನ್ನು ಘೋಷಿಸುವುದನ್ನು ನಾವು ಸ್ವಾಗತಿಸುವುದಾಗಲಿ ಅಥವಾ ತಿರಸ್ಕರಿಸುವುದಾಗಲಿ ಮಾಡಿರಲಿಲ್ಲ. ಈ ಘೋಷಣೆಯಲ್ಲಿ ಸ್ಪಷ್ಟತೆಯ ಅಗತ್ಯತೆಯನ್ನು ಒತ್ತಿ ಹೇಳಿದ್ದೆವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿಂದುಳಿದ ಆಯೋಗದ ಮಧ್ಯಂತರ ವರದಿಯನ್ನು ಪಡೆದುಕೊಂಡಿದೆ. ಪ್ರವರ್ಗ ಯಾವುದಾದರೂ ಇರಲಿ ಆದರೆ ನಮ್ಮ ಸಮುದಾಯಕ್ಕೆ ಮೀಸಲಾತಿ ದೊರೆಯುವುದು ಬಹಳ ಅಗತ್ಯ. ಅದಕ್ಕೆ ಬೇಕಾದಂತಹ ಪೂರಕ ವಾತಾವರಣ ಈಗ ಸಿದ್ಧವಾಗಿದೆ ಎಂದರು

ಆಯೋಗದ ಮಧ್ಯಂತರ ವರದಿ ಹಾಗೂ ಹೈಕೋರ್ಚ್‌ನಲ್ಲಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ತೀರ್ಪು ಬಹುದೊಡ್ಡ ಬೆಳವಣಿಗೆಗಳಾಗಿವೆ ಎಂದರು.

ಪಂಚಮಸಾಲಿ ಮೀಸಲಾತಿ ಹೋರಾಟದ ಕಾನೂನಾತ್ಮಕ ಹೋರಾಟದ ಮುಂಚೂಣಿಯಲ್ಲಿರುವ ವಕೀಲ ಬಿ.ಎಸ್‌ ಪಾಟೀಲ್‌ ಅವರು ಮಾತನಾಡಿ, ಮಧ್ಯಂತರ ವರದಿಯ ನಂತರ ಆಯೋಗ ಮತ್ತೊಮ್ಮೆ ದಾಖಲೆಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಿತು. ಈ ಸಂದರ್ಭದಲ್ಲಿ ನಾವು 1871 ರಿಂದ ಇದುವರೆಗಿನ ಸುಮಾರು 900 ಪುಟಗಳಷ್ಟುದಾಖಲೆಯನ್ನು ಸಲ್ಲಿಸಿದ್ದೇವೆ. 1871ರ ವರದಿಯಲ್ಲಿ ಪಂಚಮಸಾಲಿ ಸಮುದಾಯವನ್ನು ಶೂದ್ರರ ಗುಂಪಿನಲ್ಲಿ ಸೇರಿಸಿದ್ದರ ದಾಖಲೆಯನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹರಿಹರ ಪಂಚಮಸಾಲಿ ಪೀಠದ ನೇತೃತ್ವದಲ್ಲಿ ನಡೆದಂತಹ ಕಾನೂನಾತ್ಮಕ ಹೋರಾಟಕ್ಕೆ ಜಯ ಸಿಗುವ ಸಂದರ್ಭ ಬಂದೊದಗಿದೆ ಎಂದರು.

click me!