ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಬಳಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು, ಅದರೊಳಗೆ ಸಿಲುಕಿದ್ದ 4 * 41 ಕಾರ್ಮಿಕರ ಕಾರ್ಮಿಕರನ್ನು ಸುದೀರ್ಘ 17 ದಿನಗಳ ಬಳಿಕ ಸುರಕ್ಷಿತವಾಗಿ ಹೊರತೆಗೆಯುವ ರಕ್ಷಣಾ ಕಾರ್ಯಾಚರಣೆಯಲ್ಲಿ ಬೆಳಗಾವಿಯ ಎಲ್ ಆ್ಯಂಡ್ ಟಿ ಕಂಪನಿಯ ಎಂಜಿನಿಯರಿಬ್ಬರು ಪ್ರಮುಖ ಪಾತ್ರವಹಿಸುವ ಮೂಲಕ ಸಾಧನೆ ಮೆರೆದಿದ್ದಾರೆ.
ಬೆಳಗಾವಿ (ಡಿ.3) :
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಬಳಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು, ಅದರೊಳಗೆ ಸಿಲುಕಿದ್ದ 41 ಕಾರ್ಮಿಕರ ಕಾರ್ಮಿಕರನ್ನು ಸುದೀರ್ಘ 17 ದಿನಗಳ ಬಳಿಕ ಸುರಕ್ಷಿತವಾಗಿ ಹೊರತೆಗೆಯುವ ರಕ್ಷಣಾ ಕಾರ್ಯಾಚರಣೆಯಲ್ಲಿ ಬೆಳಗಾವಿಯ ಎಲ್ ಆ್ಯಂಡ್ ಟಿ ಕಂಪನಿಯ ಎಂಜಿನಿಯರಿಬ್ಬರು ಪ್ರಮುಖ ಪಾತ್ರವಹಿಸುವ ಮೂಲಕ ಸಾಧನೆ ಮೆರೆದಿದ್ದಾರೆ.
ಚೆನ್ನೈ ಮೂಲದ ಎಲ್ ಆ್ಯಂಡ್ ಟಿ ಕಂಪನಿಯ ಎಂಜಿನಿಯರ್‌ರಾದ ಬಾಲಚಂದ್ರ ಕಿಲಾರಿ ಮತ್ತು ದೌದೀಪ್ ಖಂಡ್ರಾ ರಕ್ಷಣಾ ಕಾರ್ಯಾ ಚಣೆಯಲ್ಲಿ ತಮ್ಮನ್ನು ತೊಡಸಿಕೊಂಡರು. ಎಂಡಸ್ಕೋಪಿ ಕ್ಯಾಮೆರಾ ಮೂಲಕ ಕಾರ್ಮಿಕರು ಸುರಂಗದಲ್ಲಿ ಸುರಕ್ಷಿತವಾಗಿ ಬದುಕುಳಿದಿರುವುದನ್ನು ಪತ್ತೆ ಹಚ್ಚಿದ್ದೇ ಇದೇ ಬೆಳಗಾವಿ ಎಂಜಿನಿಯರ್‌ಗಳು. ನ.17ಕ್ಕೆ ಉತ್ತರಕಾಶಿಯ ಘಟನಾ ಸ್ಥಳಕ್ಕೆ ಈ ಇಬ್ಬರು ಎಂಜಿನಿಯರ್ ತೆರಳಿದ್ದರು. ಸಣ್ಣ ಪೈಪ್‌ನಲ್ಲಿ ನುಸುಳಿ 120 ಮೀಟರ್‌ವರೆಗೆ ಸಾಗುವ ಸಾಮರ್ಥದ ರೋಬಾಟಿಕ್ ಕ್ಯಾಮೆರಾದೊಂದಿಗೆ ಬಾಲಚಂದ್ರ ಮತ್ತು ದೌದೀಪ ನ.20 ರಂದು ರಾತ್ರಿ 7 ಗಂಟೆಗೆ ಉತ್ತರಕಾಶಿಗೆ ಮುಟ್ಟಿದ್ದರು. ನಂತರ 9 ದಿನಗಳ ಕಾಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಾಯುಪಡೆಗೆ ಲೇಡಿ ಅಗ್ನಿವೀರರ ಮೊದಲ ಬ್ಯಾಚ್ ರೆಡಿ!
ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಂದು ರಾತ್ರಿ 10 ಗಂಟೆಗೆ ಕಾರ್ಯಾಚರಣೆಗೆ ಇಳಿದಿದ್ದರು. ಮಾರ್ಗ ಮಧ್ಯೆ ಕಲ್ಲು ಮಣ್ಣು ಕುಸಿದಿರುವನ್ನು ಕ್ಯಾಮೆರಾ ಪತ್ತೆ ಹಚ್ಚಿತು. ಸುರಂಗದಲ್ಲಿ ಭೂಕುಸಿತ ಆಗಿರುವುದು ದೃಢಪಟ್ಟಿತು. ಬಳಿಕ 6 ಗಂಟೆಗಳ ಕಾರ್ಯಾಚರಣೆ ನಡೆಯಿತು. 21 ರ ಬೆಳಗ್ಗೆ 3.52ಕ್ಕೆ ಕಾರ್ಯಾಚರಣೆ ಸ್ಥಳದಿಂದ 60 ರಿಂದ 90 ಮೀಟರ್‌ದೂರದಲ್ಲಿ ಕಾರ್ಮಿಕರು ಜೀವಂತರಾಗಿ ರುವುದನ್ನು ಕ್ಯಾಮೆರಾ ಪತ್ತೆ ಹಚ್ಚಿತು. ಕಾರ್ಮಿಕರೆಲ್ಲರೂ ಜೀವಂತ ಇರುವುದು ಗೊತ್ತಾಗುತ್ತಿದ್ದಂತೆಯೇ ಕಾರ್ಯಾಚರಣೆಯ ಪಾಲ್ಗೊಂಡಿರುವವರ ಮೊಗದಲ್ಲಿ ಸಂತಸ ಮೂಡಿತ್ತು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ನಾವು ಕೂಡ ಪಾಲ್ಗೊಂಡಿರುವುದು ನಮ್ಮ ಜೀವನದಲ್ಲಿ ದೊಡ್ಡ ಸಾಧನೆಯಾಗಿದೆ ಎಂದು ದೌದೀಪ ಖಂಡ್ರಾ ಹೇಳಿದರು.
ಬ್ರೇಕಪ್‌ನಿಂದ ಖಿನ್ನತೆ, ನೇವಿ ಹಾಸ್ಟೆಲ್‌ನಲ್ಲಿ ಟ್ರೇನಿ ಅಗ್ನಿವೀರ್ ಆತ್ಮಹತ್ಯೆ
ಇಬ್ಬರಿಗೆ ಸನ್ಮಾನ:
ಉತ್ತರಕಾಶಿಯಲ್ಲಿ ಸುರಂಗ ಮಾರ್ಗದಲ್ಲಿ ಸಿಲುಕಿದ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ತರುವಲ್ಲಿ ಪ್ರಮುಖ ಪಾತ್ರವಹಿಸಿರುವ ಬೆಳಗಾವಿಯ ಎಲ್ ಆ್ಯಂಡ್ ಟಿ ಕಂಪನಿಯ ಎಂಜಿನಿಯರ್‌ರಾದ ಬಾಲಚಂದ್ರ ಕಿಲಾರಿ ಮತ್ತು ದೌದೀಪ್ ಖಂಡ್ರಾ ಅವರನ್ನು ಮಹಾನಗರ ಪಾಲಿಕೆ ಯಲ್ಲಿ ಶನಿವಾರ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಸನ್ಮಾನಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳ ಮಾತನಾಡಿದ ಅವರು, ಉತ್ತರಕಾಶಿಯ ಸುರಂಗ ಮಾರ್ಗಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಪತ್ತೆ ಹಚ್ಚಲು ರೊಬೊಟಿಕ್ ಕ್ಯಾಮೆರಾ ಉಪಕರಣ ಗಳೊಂದಿಗೆ ಬೆಳಗಾವಿಯ ಇಬ್ಬರು ತಜ್ಞರನ್ನು ನಿಯೋಜಿಸಲಾಗಿತ್ತು. ರಕ್ಷಣಾ ಕಾರ್ಯಾಚರಣೆಯ ನಿರಂತರ ದೃಶ್ಯಗಳನ್ನು ಪಡೆಯುವಲ್ಲಿ ಮತ್ತು ಸಿಕ್ಕಿ ಬಿದ್ದ ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ಬೆಳಗಾವಿಯ ಕೊಡುಗೆಯೂ ಇದೆ. ಕಾರ್ಮಿಕರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ಬೆಳಗಾವಿಯ ಯುವಕರು ಭಾಗಿಯಾಗಿರುವುದು ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.