ವಾಯುಪಡೆಗೆ ಲೇಡಿ ಅಗ್ನಿವೀರರ ಮೊದಲ ಬ್ಯಾಚ್‌ ರೆಡಿ!

By Kannadaprabha News  |  First Published Dec 3, 2023, 6:25 AM IST

ಬೆಳಗಾವಿಯ ಸಾಂಬ್ರಾ ಏರ್‌ಮೆನ್‌ ಟ್ರೈನಿಂಗ್ ಸೆಂಟರ್​ನಲ್ಲಿ ತರಬೇತಿ ಪಡೆದ 153 ಮಂದಿಯ ದೇಶದ ಮೊದಲ ಮಹಿಳಾ ಅಗ್ನಿವೀರರ ವಾಯುಪಡೆ ಬ್ಯಾಚ್‌ ನಿರ್ಗಮನ ಪಥಸಂಚಲನ ಶನಿವಾರ ನಡೆಯಿತು.


ಬೆಳಗಾವಿ (ಡಿ.3) ಬೆಳಗಾವಿಯ ಸಾಂಬ್ರಾ ಏರ್‌ಮೆನ್‌ ಟ್ರೈನಿಂಗ್ ಸೆಂಟರ್​ನಲ್ಲಿ ತರಬೇತಿ ಪಡೆದ 153 ಮಂದಿಯ ದೇಶದ ಮೊದಲ ಮಹಿಳಾ ಅಗ್ನಿವೀರರ ವಾಯುಪಡೆ ಬ್ಯಾಚ್‌ ನಿರ್ಗಮನ ಪಥಸಂಚಲನ ಶನಿವಾರ ನಡೆಯಿತು.

ಅಗ್ನಿವೀರ ಯೋಜನೆಯಡಿ 2280 ಯುವಕರು, 153 ಯುವತಿಯರು 22 ವಾರಗಳ ಬೆಳಗಾವಿಯಲ್ಲಿ ಕಾಲ ಕಠಿಣ ತರಬೇತಿ ಪಡೆದು, ನಿರ್ಗಮನ ಪಥಸಂಚಲನದ ಮೂಲಕ ವಾಯುಸೇನೆಗೆ ಸೇರ್ಪಡೆಯಾದರು. ಈ 153 ಮಂದಿ ಮಹಿಳಾ ಅಗ್ನಿವೀರರಲ್ಲಿ 10 ಮಂದಿ ಬೆಂಗಳೂರಿನ ಯಲಹಂಕದಲ್ಲಿರುವ ವಾಯುಪಡೆ ಕೇಂದ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆಯಲಿದ್ದಾರೆ.

Tap to resize

Latest Videos

ಆರು ತಿಂಗಳ ತರಬೇತಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಯಶಸ್ವಿ ತರಬೇತಿ ಮುಗಿಸಿ ಹೊರ ಬರುತ್ತಿದ್ದಂತೆ ಮಕ್ಕಳನ್ನು ಕಂಡ ಕುಟುಂಬಸ್ಥರು ತಬ್ಬಿಕೊಂಡು ಸಂಭ್ರಮಿಸಿದರು.

 

ಬ್ರೇಕಪ್‌ನಿಂದ ಖಿನ್ನತೆ, ನೇವಿ ಹಾಸ್ಟೆಲ್‌ನಲ್ಲಿ ಟ್ರೇನಿ ಅಗ್ನಿವೀರ್‌ ಆತ್ಮಹತ್ಯೆ

ಸೇವೆ ಮುಂದುವರಿಕೆಗೆ ಅವಕಾಶ:

ಅಗ್ನಿವೀರರ ಗೌರವ ವಂದನೆ ಸ್ವೀಕರಿಸಿದ ಏರ್‌ ಮಾರ್ಷಲ್‌ ರಾಧಾಕೃಷ್ಣನ್‌ ರದ್ದೀಶ ಮಾತನಾಡಿ, ಅಗ್ನಿವೀರರಿಗೆ ನಾಲ್ಕು ವರ್ಷಗಳ ನಂತರವೂ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶಗಳಿವೆ. ನಾಲ್ಕು ವರ್ಷಗಳ ಸೇವೆ ಮುಕ್ತಾಯವಾದ ಬಳಿಕ ಅಗ್ನಿವೀರರಿಗೆ ಸೇವೆ ಮುಂದುವರಿಸಲು ಮತ್ತೊಂದು ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಅಗ್ನಿವೀರ ವಾಯು ಯೋಜನೆ ಅಡಿ ಪ್ರತಿವರ್ಷ ಒಟ್ಟು 46 ಸಾವಿರ ಯೋಧರನ್ನು ಸೇನೆಗೆ ನೇಮಿಸಿಕೊಳ್ಳಲಾಗುತ್ತದೆ. ಇವರಲ್ಲಿ ಶೇ.25ರಷ್ಟು ಮಂದಿಯನ್ನು ಕಾಯಂ ಆಯೋಗಕ್ಕಾಗಿ 15 ವರ್ಷಗಳ ಹೆಚ್ಚುವರಿ ಅವಧಿಗೆ ಉಳಿಸಿಕೊಳ್ಳಲಾಗುವುದು. ಉಳಿದವರಿಗೆ ನಿವೃತ್ತಿಗೆ ಅವಕಾಶ ನೀಡಿ ಸೇವಾ ನಿಧಿಯಾಗಿ ₹11.71 ಲಕ್ಷ ನೀಡಲಾಗುತ್ತದೆ ಎಂದು ತಿಳಿಸಿದರು.

ತರಬೇತಿ ವೇಳೆ ಅರ್ಧದಲ್ಲೇ ಕೆಲವು ಅಗ್ನಿವೀರರ ನಿರ್ಗಮನ: ಶೇ.25ರ ಬದಲು ಶೇ.50 ಅಗ್ನಿವೀರರು ಕಾಯಂ?

click me!