ಕರಾವಳಿಯಲ್ಲಿ ಮತ್ತೆ ಧರ್ಮ‌ ದಂಗಲ್: ದಲಿತ ಮುಖಂಡನಿಂದ ಹಿಂದೂ ದೇವರ ವಿರುದ್ಧ ಸೊಂಟದ ಕೆಳಗಿನ ಭಾಷಾ ಪ್ರಯೋಗ!

By Govindaraj S  |  First Published Aug 31, 2023, 9:43 PM IST

ಧರ್ಮದ ವಿಷಯದಲ್ಲಿ ಸೂಕ್ಷ್ಮ ವಾಗಿರುವ ಕರಾವಳಿ ಜಿಲ್ಲೆಯಲ್ಲಿ ಇದೀಗ ಮತ್ತೆ ಹಿಂದೂ ಧರ್ಮದ ದೇವರು, ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಕೃತ್ಯ ನಡೆದಿದೆ.


ವರದಿ: ಭರತ್‌ ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಉತ್ತರ ಕನ್ನಡ

ಉತ್ತರ ಕನ್ನಡ (ಆ.31): ಧರ್ಮದ ವಿಷಯದಲ್ಲಿ ಸೂಕ್ಷ್ಮ ವಾಗಿರುವ ಕರಾವಳಿ ಜಿಲ್ಲೆಯಲ್ಲಿ ಇದೀಗ ಮತ್ತೆ ಹಿಂದೂ ಧರ್ಮದ ದೇವರು, ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಕೃತ್ಯ ನಡೆದಿದೆ. ತಾನು ಹಿಂದೂ, ದಲಿತ ಮುಖಂಡನೆಂದು ಹೇಳಿಕೊಂಡು ಬರುತ್ತಿದ್ದ ದಲಿತ ರಕ್ಷಣಾ ವೇದಿಕೆಯ ಈ ಅಧ್ಯಕ್ಷ, ಕ್ರೈಸ್ತರ ದೇವರು ಏಸುವನ್ನು ಹೊಗಳಿಕೊಂಡು ಶಿವ- ಪಾರ್ವತಿ, ಶ್ರೀರಾಮ- ಸೀತೆ, ಹನುಮಂತ, ಲವ-ಕುಶ ಸೇರಿದಂತೆ ವಾಲ್ಮೀಕಿಯ ಬಗ್ಗೆಯೂ ಅತೀ ಕೀಳುಮಟ್ಟದ ಭಾಷಾ ಪ್ರಯೋಗ ನಡೆಸಿದ್ದಾನೆ. ಅಷ್ಟಕ್ಕೂ ಆ ದಲಿತ ಮುಖಂಡ ಯಾರು ಅಂತೀರಾ...? ಈ ಸ್ಟೋರಿ ನೋಡಿ.

Tap to resize

Latest Videos

undefined

ಹೌದು, ಕರ್ನಾಟಕದ ಕರಾವಳಿ ಧರ್ಮದ ವಿಷಯದಲ್ಲಿ ಅತೀ ಸೂಕ್ಷ್ಮ ಪ್ರದೇಶಗಳಾಗಿ ಗುರುತಿಸಿಕೊಂಡಿವೆ. ಒಮ್ಮೆ ಈ ಪ್ರದೇಶಗಳಲ್ಲಿ ಧರ್ಮದ ಬೆಂಕಿ ಹತ್ತಿಕೊಂಡರೆ, ಶೀಘ್ರದಲ್ಲಂತೂ ಆರುವುದೇ ಇಲ್ಲ. ಅಂತದ್ರಲ್ಲಿ ತಾನು ಹಿಂದೂ ಎಂದು ಹೇಳಿಕೊಳ್ಳುತ್ತಿದ್ದ ದಲಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಎಲಿಷಾ ಎಲಕ‌ ಪಾಟಿ, ಹಿಂದೂ ದೇವರು, ದೇವತೆಗಳ ವಿರುದ್ಧ ಸೊಂಟದ ಕೆಳಗಿ‌ನ ಭಾಷಾ ಪ್ರಯೋಗ ಮಾಡಿದ್ದಾನೆ. ಇದರಿಂದ ಕೆರಳಿರುವ ದಲಿತ ಸಮುದಾಯದ ಜನರು ಹಾಗೂ ಹಿಂದೂ ಸಂಘಟನೆ ಸದಸ್ಯರು ಈತನನ್ನು ಕೂಡಲೇ ಬಂಧಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. 

ರಾಜೀವ್‌ಗಾಂಧಿ ಮೆಡಿಕಲ್‌ ಕಾಲೇಜು ಸ್ಥಳಾಂತರ ರಾಮನಗರಕ್ಕೆ ಅವಮಾನ: ಎಚ್‌ಡಿಕೆ ಆಕ್ರೋಶ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹರಿದೇವ ನಗರದ ನಿವಾಸಿಯಾಗಿರುವ ಎಲಿಷಾ ಎಲಕಪಾಟಿ ಹಿಂದೂ ದೇವತೆಗಳ ಬಗ್ಗೆ ನಾಲಿಗೆ ಹರಿಯಬಿಟ್ಟು ವಿಕೃತಿ ಮೆರೆದಿದ್ದು, ಏಸುವನ್ನು ಹೊಗಳಿ ಹಿಂದೂಗಳ ದೇವಾನುದೇವತೆಗಳ ಬಗ್ಗೆ ಅತ್ಯಂತ ನಿಕೃಷ್ಟ ಪದ ಪ್ರಯೋಗ ಮಾಡಿದ್ದಾನೆ. ಶಿವಲಿಂಗ ಅಂದ್ರೆ ಶಿವನದ್ದು ಲಿಂಗ, ಶಿವನ ಪ್ರೈವೇಟ್ ಪಾರ್ಟ್. ಶಿವ ಪಾರ್ವತಿಯ ಖಾಸಗಿ ಭಾಗ ಶಿವಲಿಂಗ. ಶಿವ ತಲೆ ಮೇಲೆ ಒಂದು ಹೆಂಡತಿ, ತೊಡೆ ಮೇಲೆ ಒಂದು ಹೆಂಡತಿ ಇಟ್ಟುಕೊಂಡಿದ್ದಾನೆ, ಆದ್ರೆ ಏಸು ಹಾಗಲ್ಲ‌. ತಾನು ಸೃಷ್ಠಿ ಮಾಡಿದ ಮಗಳನ್ನು ಬ್ರಹ್ಮ ತೊಡೆ ಮೇಲೆ ಕೂರಿಸಿದ್ದಾನೆ. 

ಶ್ರೀಕೃಷ್ಣ ಪರಮಾತ್ಮ ಸಾವಿರಾರು ಹೆಣ್ಣುಮಕ್ಕಳ ಜತೆ ಮಜಾ ಮಾಡಿದ, ಆದ್ರೆ ಏಸು ಹಾಗೆ ಮಾಡಿಲ್ಲ. ಪ್ರಪಂಚದ ಜನರ ಪಾಪವನ್ನು ರಕ್ತದಿಂದ ಪರಿಹಾರ ಮಾಡಲು ಏಸು ಸ್ವಾಮಿ ಭೂಮಿಯಲ್ಲಿ ಹುಟ್ಟಿದ ಎಂದು ಹೇಳಿರುವ ಈ ಅಸಾಮಿ, ಹಿಜಡಾಗಳಿಗೆ ಅಧ್ಯಕ್ಷನಾಗಿದ್ದ ಶ್ರೀರಾಮನ ಜತೆ ವನವಾಸದಲ್ಲಿದ್ದವರು ಹಿಜಡಾಗಳೇ. ಶ್ರೀರಾಮನ ಜತೆಯಲ್ಲಿದ್ದ ಕಾರಣ ಮುಂದೆ ನೀವೇ ದೇಶವನ್ನು ಆಳ್ತೀರಿ ಎಂದು ಶ್ರೀರಾಮ ಆಶೀರ್ವಾದ ಮಾಡಿದ್ದ. ಆ ಹಿಜಡಾಗಳೇ ಇಂದು ದೇಶವನ್ನು ಆಳ್ತಿದ್ದಾರೆ ಎಂದು ನಾಲಗೆ ಹರಿಯ ಬಿಟ್ಟಿದ್ದಾನೆ. ಇದರಿಂದ ಕೆರಳಿರುವ ದಲಿತ ಸಮುದಾಯದ ಜನರು ಈತನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ‌.

ನೆಹರೂ, ರಾಜೀವ ಗಾಂಧಿ, ರಾಹುಲ್ ಗಾಂಧಿ  ರಾಜರಾಗಿ ಬೆಳೆದವರು. ಆದ್ರೆ, ಯೋಗಿ, ಮೋದಿ, ವಾಜಪೇಯಿ ಎಲ್ಲಾ ಹಿಜಡಾಗಳು ಎಂದು ಎಲಿಷಾ ಎಲಕಪಾಟಿ ಕುಹಕವಾಡಿದ್ದಾನೆ. ಸೂರ್ಯ ಹಾಗೂ ಅಂಜನಿಯ ಅಕ್ರಮ ಸಂಬಂಧದಿಂದ ಹುಟ್ಟಿದವ ಹನುಮಂತ. ಹನುಮಂತನ ತಂದೆ ಮುಂಜಾನೆ ನೀರು ತರಲು ಹೋಗಿದ್ದಾಗ ಸೂರ್ಯ ಬಂದು ಹನುಮಂತನ ತಾಯಿಯ ಜತೆ ಸಂಬಂಧ ಬೆಳೆಸಿದ್ದ ಎಂದು ಹೇಳಿರುವ ಈ ನೀಚ, ಈಶ್ವರ ಪಾರ್ವತಿಯ ವೀರ್ಯದಿಂದ ಹುಟ್ಟಿದವಳು ನಾಗಿಣಿ ಎಂದು ಹೇಳಿದ್ದಲ್ಲದೇ, ವಾಲ್ಮೀಕಿ, ಸೀತೆ, ಲವ-ಕುಶರು ಹಾಗೂ ರಾಮಾಯಣ, ಮಹಾಭಾರತದ ಬಗ್ಗೆಯೂ ಆಶ್ಲೀಲ ಪದ ಪ್ರಯೋಗ ಮಾಡಿದ್ದಾನೆ‌. 

ಏಸು ಸ್ವಾಮಿ ಹೆಣ್ಣಿನೊಟ್ಟಿಗೆ ಮಜಾ ಮಾಡಿಲ್ಲ, ಪರಿಶುದ್ಧವಾಗಿ ಜೀವಿಸಿ, ಸತ್ತಿದ್ದಾನೆ. ಆದರೆ, ರಾಮನಿಗೆ ಅವನ ಹೆಂಡ್ತಿ ಎಲ್ಲಿ ಹೋದಳು ಎಂದು ಅವನಿಗೇ ಗೊತ್ತಿಲ್ಲ, ಅವನು ದೇವರು. ಸೀತೆಯ ಗರ್ಭದಲ್ಲಿದ್ದ ಮಕ್ಕಳನ್ನು ಸಾಯಿಸುವ ಅಂದವ ರಾಮ ಎಂದು ಅಸಂಬದ್ಧವಾಗಿ ಮಾತನಾಡಿದ್ದಾನೆ. ಇನ್ನು ಈತ ದಲಿತರನ್ನು ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ನಡೆಸುವ ಪ್ರಯತ್ನ ಕೂಡಾ ನಡೆಸುತ್ತಿದ್ದು, ಸಹಾಯದ ನೆಪದಲ್ಲಿ, ಅಧಿಕಾರಿಗಳ ಹೆಸರಿನಲ್ಲಿ ದಲಿತರಿಂದ ಹಣ ವಸೂಲಿ ಮಾಡುತ್ತಿರುವ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿ ಈತನ ವಿರುದ್ಧ ಕಠಿಣ ಕ್ರಮ ಕೈಗೊಂಡು ಗಡಿಪಾರು ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೆಂಗಲ್‌ ಹನು​ಮಂತಯ್ಯ ಮೆಡಿಕಲ್‌ ಕಾಲೇಜು ಸ್ಥಳಾಂತರ: ಸೆ.8ಕ್ಕೆ ರಾಮ​ನ​ಗರ ಬಂದ್‌

ಅಲ್ಲದೇ, ಆಂಧ್ರದಿಂದ ಬಂದಿರುವ ಈತ ನೈಜವಾಗಿಯೂ ದಲಿತನೇ ಎಂಬ ಬಗ್ಗೆ ತನಿಖೆಯಾಗಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಅಸಾಮಿಯ ವಿಡಿಯೋ ವೈರಲ್ ಆಗುತ್ತಿದ್ದಂತೇ, ಈತ ಮೊಸಳೆ ಕಣ್ಣೀರು ಹಾಕಿ ಹಿಂದೂಗಳಲ್ಲಿ ಕ್ಷಮೆ ಕೇಳಿದ್ದಾನೆ. ಈ ವಿಡಿಯೋ ದುರುದ್ದೇಶಪೂರಕವಾಗಿ ಮಾಡಿದ್ದಾರೆ. ನಾನು ತಮಾಷೆಗಾಗಿ ಹೇಳಿದ್ದೇ ಹೊರತು, ಉದ್ದೇಶ ಪೂರ್ವಕವಾಗಿ ಈ ಮಾತಗಳನ್ನು ಆಡಿಲ್ಲ. ನನ್ನ ಮಾತುಗಳಿಂದ ಹಿಂದೂ ಸಮಾಜಕ್ಕೆ ನೋವಾಗಿದೆ. ನನ್ನನ್ನು ಕ್ಷಮಿಸಿ ಎಂದಿದ್ದಾನೆ. ಒಟ್ಟಿನಲ್ಲಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಹಾಡಿ ಹೊಗಳಿ ಹಿಂದೂ ಧರ್ಮದ ಆರಾಧ್ಯ ದೇವಿ, ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿ ಈ ಸೋ ಕಾಲ್ಡ್ ದಲಿತ ಮುಖಂಡನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.‌ ಇಲ್ಲವಾದಲ್ಲಿ ಸಮಾಜದಲ್ಲಿ ಅಶಾಂತಿ ಮೂಡುವುದರಲ್ಲಿ ಎರಡು ಮಾತಿಲ್ಲ.

click me!