ಒಂದೇ ಲಿಂಕ್‌ನಲ್ಲಿ ಎಲ್ಲ ಕೆಲಸ| ಕರ್ನಾಟಕ ಹೈಕೋರ್ಟ್‌ನಲ್ಲಿ ಈ ರೀತಿಯ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ದೇಶದಲ್ಲೇ ಮೊದಲು|
ಬೆಂಗಳೂರು(ಸೆ.27): ಕೋವಿಡ್-19 ಹಿನ್ನೆಲೆಯಲ್ಲಿ ಅರ್ಜಿಗಳ ಫಿಸಿಕಲ್ ಫೈಲಿಂಗ್-ಆನ್‌ಲೈನ್ ಅಪಾಯಿಂಟ್‌ಮೆಂಟ್‌ಗಾಗಿ ಹೈಕೋರ್ಟ್ ಯುಆರ್‌ಎಲ್ ಲಿಂಕ್ ರೂಪಿಸಿದೆ
ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದಲ್ಲಿ ಹೊಸ ಅರ್ಜಿಗಳ ದಾಖಲು, ಮಧ್ಯಂತರ ಅರ್ಜಿಗಳ ಸಲ್ಲಿಕೆ, ಕೇವಿಯೇಟ್ಸ್, ಡಿಡಿ ಪಾವತಿ, ಪರಿಶೀಲನಾ ಶಾಖೆಯಲ್ಲಿ ಕಚೇರಿ ಆಕ್ಷೇಪಣೆಗಳ ಸಲ್ಲಿಕೆ, ಕೋರ್ಟ್ ಶುಲ್ಕ ಪಾವತಿಗೆ ಆನ್‌ಲೈನ್ ಮೂಲಕ ಸಮಯ ಕಾಯ್ದಿರಿಸಿಕೊಳ್ಳಲು http://recruitment.kar.nic.in/hcknewcounternew/login.php ಎಂಬ ಯುಆರ್‌ಎಲ್ ಲಿಂಕ್ ರೂಪಿಸಲಾಗಿದೆ. ವಕೀಲರು, ಕಕ್ಷಿದಾರರು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು.
undefined
ನಾಳೆಯಿಂದ ಕೋರ್ಟ್ ಕಲಾಪ ಆರಂಭ:ಬರುವವರಿಗೆ ಕೋವಿಡ್ ಟೆಸ್ಟ್ ರ‍್ಯಾಪಿಡ್
ಮೊದಲಿನಂತೆ hck-filing@hck.gov.in ಗೆ ಇ-ಮೇಲ್ ಕಳಿಸುವ ಅವಶ್ಯಕತೆಯಿಲ್ಲ ಎಂದು ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಕೆ.ಎಸ್ ಭರತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಈ ರೀತಿಯ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ದೇಶದಲ್ಲೇ ಮೊದಲು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕಚೇರಿ ಮೂಲಗಳು ತಿಳಿಸಿವೆ.