
ಮೈಸೂರು (ಸೆ.28): ಸ್ವಂತ ಮನೆ ಇದ್ದವರಿಗೆ ಬಿಪಿಎಲ್ ಕಾರ್ಡ್ ಬದಲು ಎಪಿಎಲ್ ಕಾರ್ಡ್ ನೀಡುವ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.
ಈ ಕುರಿತು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿಯವರೆಗೂ ನೀವೆಲ್ಲಾ ಕತ್ತೆ ಕಾಯುತ್ತಿದ್ರಾ? ಪ್ರಧಾನಿ ನರೇಂದ್ರ ಮೋದಿ ಅವರು 5 ವರ್ಷ ಪಿಡಿಎಸ್ ಮುಂದುವರಿಸುತ್ತೇನೆ ಅಂದಿದ್ದಾರೆ. ಬಡವರಿಗಾಗಿ ಮೋದಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮನೆ ಇರುವವರಿಗೆ ಅದು, ಇಲ್ಲದವರಿಗೆ ಇದು ಅಂತ ಯಾವುದನ್ನೂ ಹೇಳಿಲ್ಲ. ನಮ್ಮ ನಿಬಂಧನೆ ಈಗಾಗಲೇ ಕೊಟ್ಟಿದ್ದೇವೆ. ಈ ಕಾಂಗ್ರೆಸ್‌ನವರು ಚಂದ್ರಲೋಕ ಇಂದ್ರಲೋಕ ತರುತ್ತೀವಿ ಅಂದಿದ್ದರು. ಯಾವುದೂ ಆಗಿಲ್ಲ. ಅದಕ್ಕಾಗಿ ಕಾರ್ಡ್ ರದ್ದು ಮಾಡುವ ಪಾಪದ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್; ಮುಂದಿನ ತಿಂಗಳಿಂದಲೇ ಹೊಸ ಬಿಪಿಎಲ್ ಗೆ ಅರ್ಜಿ!
ಆಹಾರ ಸಚಿವ ಮುನಿಯಪ್ಪಗೆ ಏನೂ ಗೊತ್ತಿಲ್ಲ. ಏನು ಇಲ್ಲದೆ ಬರೀ ಬೆತ್ತಲೆ ಆಗಿದ್ದೀರಾ? ಕೇಂದ್ರದ ಮೇಲೆ ಅದನ್ನು ಹಾಕಬೇಡಿ. ನಿಮ್ಮ ಪಾಪದ ಕೃತ್ಯಕ್ಕೆ ನೀವೇ ಹೊಣೆ, ಕೇಂದ್ರ ಸರ್ಕಾರವಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ