ಕೇಂದ್ರ ಬಜೆಟ್ ಬಿಹಾರ ಚುನಾವಣಾ ಪ್ರಣಾಳಿಕೆಯಂತಿದೆ: ಎಚ್‌.ಕೆ. ಪಾಟೀಲ

Published : Feb 03, 2025, 04:53 AM IST
ಕೇಂದ್ರ ಬಜೆಟ್ ಬಿಹಾರ ಚುನಾವಣಾ ಪ್ರಣಾಳಿಕೆಯಂತಿದೆ: ಎಚ್‌.ಕೆ. ಪಾಟೀಲ

ಸಾರಾಂಶ

ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಬಿಹಾರ ಚುನಾವಣೆಯ ಪ್ರಣಾಳಿಕೆಯಂತಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಟೀಕಿಸಿದ್ದಾರೆ. ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಿದ ಬಜೆಟ್ ಇದಾಗಿದೆ, ಕರ್ನಾಟಕಕ್ಕೆ ಕರಾಳವಾಗಿದೆ ಎಂದು ಅವರು ಹೇಳಿದರು. ಸಿದ್ದರಾಮಯ್ಯ ಅವರ ಆರೋಗ್ಯ ಸಮಸ್ಯೆ, ಕಿರುಸಾಲ ವಸೂಲಿ ಕುರಿತು ಸುಗ್ರೀವಾಜ್ಞೆ ಮತ್ತು ಬಿ.ಆರ್‌. ಪಾಟೀಲ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ್ದಾರೆ.

ಗದಗ (ಫೆ.3): ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಕೇಂದ್ರದ ಬಜೆಟ್‌ ಬಿಹಾರ ಚುನಾವಣೆಯ ಪ್ರಣಾಳಿಕೆ ಆಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ವಿಶ್ವಾಸ ಕಮರುವ ರೀತಿಯಲ್ಲಿ ಬಜೆಟ್ ಬಂದಿದೆ. ರಾಜ್ಯಕ್ಕೆ ಪಾಲೆಷ್ಟು? ರಾಜ್ಯದಿಂದ ಟ್ಯಾಕ್ಸ್ ಎಷ್ಟು ಕೊಟ್ಟಿದ್ದೀವಿ? ವಿಧಾನಸಭೆ, ಪರಿಷತ್‌ನಲ್ಲಿ ಚರ್ಚೆ ಮಾಡಿದ್ದೇವೆ. ಪರಿಣಾಮವೇ ಆಗಿಲ್ಲ. ದಕ್ಷಿಣ ಭಾರತಕ್ಕೆ ಭಾರೀ ಅನ್ಯಾಯ ಮಾಡಿದ ಬಜೆಟ್ ಇದಾಗಿದೆ ಎಂದರು.

ಈ ಹಿಂದೆ ಭದ್ರಾ ಯೋಜನೆಗೆ ₹5000 ಕೋಟಿ ಕೊಟ್ಟಿದ್ದರು, ಮತ್ತಷ್ಟು ಕೊಡುವ ನಿರೀಕ್ಷೆ ಇತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವ ವಿಶ್ವಾಸವಿತ್ತು. ಚುನಾವಣೆಯಲ್ಲಿ ಮಾತಾಡಿದ್ದನ್ನು ಈಗ ಮಾತನಾಡಿಲ್ಲ. ಅತ್ಯಂತ ನಿರಾಶೆ ತಂದ ಬಜೆಟ್, ಕರ್ನಾಟಕಕ್ಕೆ ಕರಾಳವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:  Budget 2025: ಹಿಂದೂ ವಿರೋಧಿ ಬಾಂಗ್ಲಾದ ಯೂನಸ್ ಸರ್ಕಾರಕ್ಕೂ ಬಜೆಟ್‌ನಲ್ಲಿ 120 ಕೋಟಿ!

ಸಿದ್ದರಾಮಯ್ಯ ಕಾರ್ಯಕ್ರಮ ರದ್ದುಪಡಿಸಿದ್ದಾರೆ. ಅವರಿಗೆ ಮಂಡಿನೋವು ಕಾಣಿಸಿಕೊಂಡಿದೆ. ಮೂಳೆ ಸಮಸ್ಯೆ ಇತ್ತು ಹಿಂದೆ, ಆ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿರಬೇಕು. ಎರಡು ದಿನ ವಿಶ್ರಾಂತಿ ಹೇಳಿರುವ ಕಾರಣ ಕಾರ್ಯಕ್ರಮ ರದ್ದಾಗಿದೆ. ಬಹುಬೇಗ ತಮ್ಮ ಕರ್ತವ್ಯದ ಮೇಲೆ ಹಾಜರಾಗುತ್ತಾರೆ ಎಂದರು.

ಕಿರು ಸಾಲದ ವಸೂಲಿ ವೇಳೆ ಅಮಾನುಷವಾಗಿ ವಸೂಲಿ ಮಾಡುತ್ತಿದ್ದಾರೆ. ಸಾಲಗಾರರಿಗೆ ಭಾರಿ ಕಿರುಕುಳ ಕೊಡುತ್ತಿದ್ದಾರೆ. ವಸೂಲಾತಿಯಲ್ಲಿ ಆ ರೀತಿ ದೌರ್ಜನ್ಯ ಆಗಬಾರದು, ಸಾಲಗಾರರ ಗೌರವಕ್ಕೆ ಧಕ್ಕೆ ಆಗಬಾರದು ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಈಗಾಗಲೇ ಮಸೂದೆ ಸಿದ್ಧಪಡಿಸಿದೆ. ಕಾನೂನು ಮಾಡುವ ನಿರ್ಣಯಿಸಿದೆ. ಅದಕ್ಕಾಗಿ ಸುಗ್ರೀವಾಜ್ಞೆ ಮಾಡುವ ಸಲುವಾಗಿ ಸೂಕ್ತವಾಗುವ ಮಸೂದೆ ರಚಿಸಿ, ಮುಖ್ಯಮಂತ್ರಿ ಬಳಿ ಹೋಗಿದೆ, ಇನ್ನೇನು ರಾಜ್ಯಪಾಲರಿಗೆ ಬಹುಬೇಗ ತಲುಪಲಿದೆ ಎಂದರು.

ಇದನ್ನೂ ಓದಿ: ಇದನ್ನೂ ಓದಿ: Union Budget 2025: ಮಧ್ಯಮ ವರ್ಗದವರಿಗೆ ಮೋದಿ ಬಂಪರ್ ಕೊಡುಗೆ,ಆದಾಯ ತೆರಿಗೆಯಲ್ಲಿನ ಮಹತ್ವದ ಬದಲಾವಣೆ ಬಗ್ಗೆ ತಿಳಿಯಿರಿ!

ಬಿ.ಆರ್‌. ಪಾಟೀಲ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜೀನಾಮೆ ಕೊಟ್ಟಿರುವ ಕುರಿತು ಮಾಧ್ಯಮಗಳಲ್ಲಿ ನೋಡಿದೆ. ಮುಖ್ಯಮಂತ್ರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾನು ಅವರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಮಾತಾಡುತ್ತಾರೆ ಅವರು, ಅವರ ಸ್ನೇಹಿತರು ಅದು ಏನೇ ಸಮಸ್ಯೆ ಇದ್ದರೂ ಬಹುಬೇಗ ಬಗೆಹರಿಯುತ್ತದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌