ಉಮೇಶ್ ಕತ್ತಿ ನಿಧನಕ್ಕೆ ರಾಜ್ಯ ಸರಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ. ಈ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿ (ಸೆ.7): ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾದ ಉಮೇಶ್ ಕತ್ತಿ ನಿಧನಕ್ಕೆ ರಾಜ್ಯ ಸರಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ. ಸೆ.7 ರಿಂದ ಸೆ.9ರವರೆಗೆ ಯಾವುದೇ ಮನರಂಜನಾ ಕಾರ್ಯಕ್ರಮ ಇರುವುದಿಲ್ಲ. ನಿಯಮಿತವಾಗಿ ಸರಕಾರಿ ಕಟ್ಟಡಗಳಲ್ಲಿ ಹಾರಿಸುವ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸುವಂತೆ ಆದೇಶ ಹೊರಡಿಸಿದೆ. ಜೊತೆಗೆ ಬೆಳಗಾವಿಯ ಎಲ್ಲಾ ಶಾಲೆ ಕಾಲೇಜುಗಳು ಮತ್ತು ಸರ್ಕಾರಿ ಕಛೇರಿಗಳಿಗೆ ಇಂದು ರಜೆ ಘೋಷಿಸಿದೆ. ಜೊತೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ , ಕೋವಿಡ್ 19 ನಿಯಮಗಳನ್ನು ಪಾಲಿಸಿ ಮೃತರ ಅಂತ್ಯಕ್ರಿಯೆ ನಡೆಯಸಲು ಮಾರ್ಗಸೂಚಿಯನ್ನು ಕೂಡ ಬಿಡುಗಡೆ ಮಾಡಿದೆ.
ರಾಜ್ಯ ಸರಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿರುವ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕತ್ತಿ ನಿಧನ ಹಿನ್ನೆಲೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ನಾಳೆಗೆ ಅವರು ಜನೋತ್ಸವ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಉಮೇಶ ಕತ್ತಿ ಹಾಲಿ ಮಿನಿಸ್ಟರ್ ಇರುವುದರಿಂದ ಬಹುಶಃ ಮೂರು ದಿನ ಶೋಕಾಚರಣೆ ಮಾಡುತ್ತಿರುವ ತೀರ್ಮಾನ ಮಾಡಿರಬೇಕು.
ನಮ್ಮ ರಾಷ್ಟ್ರೀಯ ಧ್ವಜವನ್ನು ಅರ್ಧಕ್ಕೆ ಇಳಿಸುವ ತೀರ್ಮಾನ. ಅದಕ್ಕೆ ಜನೋತ್ಸವ ಕಾರ್ಯಕ್ರಮ ಮುಂದಕ್ಕೆ ಹಾಕಿರಬಹುದು. ಬೆಳಗ್ಗೆ ಈ ತೀರ್ಮಾನ ಮಾಡಿರಲಿಲ್ಲ ಇವಾಗ ಮಾಡಿರಬೇಕು. ಕತ್ತಿ ನನಗೆ ಎಂ ಎಲ್ ಎ ಆಗಿ ಗೆದ್ದಾಗಿನಿಂದ ಆತ್ಮೀಯ. ಉಮೇಶ ಕತ್ತಿ ಫ್ರೆಂಡ್ ಶೀಪ್‌ಗೆ ಬಹಳ ಬೆಲೆ ಕೊಡುವ ವ್ಯಕ್ತಿ. ಅವತ್ತಿನಿಂದ ನಾವು ಬೇರೆ ಬೇರೆ ಪಕ್ಷದಲ್ಲಿ ಇದ್ರೂ ಕೂಡ ಆತ್ಮೀಯತೆ, ಸ್ನೇಹ ಇತ್ತು. ಕಳೆದ ಡಿಸೆಂಬರ್ ನಲ್ಲಿ ಅಧಿವೇಶನ ನಡೆಯುವಾಗ ಅವರ ಮನೆಗೆ ಊಟಕ್ಕೆ ಕರೆದು ಊಟ ಹಾಕಿದ್ದ.
ಉತ್ತರ ಕರ್ನಾಟಕ ವಿಷಯವಾಗಿ ಇಂದೂ ಗಟ್ಟಿ ಇದ್ದೇನೆ ಎಂದಿದ್ದ ಕನಸುಗಾರ ಉಮೇಶ್ ಕತ್ತಿ
ನೇರ ನುಡಿ ಮಾತುಗಾರ, ಯಾವುದನ್ನು ಒಳಗೆ ಇಟ್ಟುಕೊಳ್ಳುತ್ತಿರಲಿಲ್ಲ ಅನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ. ಒಂತರ ಹುಂಬತನ ಕತ್ತಿ ಅವರದ್ದು, ಯಾರಿಗೂ ಕೆಟ್ಟದು ಬಯಸುತ್ತಿರಲಿಲ್ಲ. ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇರುವನು. ಆರೋಗ್ಯದ ಬಗ್ಗೆ ನೆಗ್ಲಿಜನ್ಸಿ ಮಾಡಿದ ಬೈಪಾಸ್ ಸರ್ಜರಿ ಬೇರೆ ಆಗಿತ್ತು. ಉಮೇಶ ಕತ್ತಿ ಉತ್ತರ ಕರ್ನಾಟಕದ ಬಗ್ಗೆ ಬಹಳಷ್ಟು ಮಾತನಾಡುತ್ತಿದ್ದರು. ಅದರ ಬಗ್ಗೆ ನಮ್ಮದು ತಕಾರಾರು ಇರಲಿಲ್ಲ, ಆದ್ರೆ ಬೇರೆ ರಾಜ್ಯದ ಬಗ್ಗೆ ತಕರಾರು ಇತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ಸಚಿವ ಉಮೇಶ್ ಕತ್ತಿಯವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/22eyoLAba1
ಬೆಳಗ್ಗೆ ರಾಜ್ಯ ಸರಕಾರ ಶೋಕಾಚರಣೆಯನ್ನು ಒಂದು ದಿನಕ್ಕೆ ಸೀಮಿತ ಗೊಳಿಸಿತ್ತು. ಇದಕ್ಕೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಮೂರು ದಿನದ ಶೋಕಾಚರಣೆ ಒಂದೇ ದಿನಕ್ಕ. ಸರ್ಕಾರ ಮೂರು ದಿನ ಶೋಕಾಚರಣೆ ಮಾಡಬೇಕು. ಆದ್ರೆ ಒಂದೇ ದಿನಕ್ಕೆ ಯಾಕೆ ಸೀಮಿತಗೊಳಿಸಿದ್ದಾರೆ ಅಂತಾ ಮಾಹಿತಿ ಇಲ್ಲ. ಬಿಜೆಪಿ ಜನೋತ್ಸವದ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದರು. ಈಗ ಸರಕಾರ ಮೂರು ದಿನದ ಶೋಕಾಚರಣೆ ಘೋಷಿಸಿದೆ.
RIP Umesh Katti ಉಮೇಶ್ ಕತ್ತಿ ನಿಧನದಿಂದ ಬಿಜೆಪಿ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆ!
ಸಚಿವ ಉಮೇಶ್ ಕತ್ತಿ ಮಂಗಳವಾರ ರಾತ್ರಿ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು, ತಕ್ಷಣ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದೆ ಕೊನೆಯುಸಿರೆಳೆದಿದ್ದಾರೆ.