ಎರಡು ಕಾಲಿನ ಕರು ಜನನ: ಪರಶಿವನ ಪುನರ್ಜನ್ಮವೆಂದು ಪೂಜಿಸಿದ ಜನ

By Sathish Kumar KH  |  First Published Oct 24, 2023, 2:04 PM IST

ವಿಜಯನಗರ ಜಿಲ್ಲೆಯಲ್ಲೊಂದು ಎರಡು ಕಾಲಿನ ಕರುವೊಂದು ಜನಿಸಿದ್ದು, ಇದು  ಪರಶಿವನ ಪುನರ್ಜನ್ಮವೆಂದು ಪೂಜಿಸಲು ಮುಂದಾಗಿದ್ದಾರೆ.


ವಿಜಯನಗರ (ಅ.24): ಇಡೀ ದೇಶವೇ ಇಂದು ವಿಜಯದಶಮಿ ಸಂಭ್ರಮದಲ್ಲಿದೆ. ಹೀಗಿರುವಾಗ ವಿಜಯನಗರ ಜಿಲ್ಲೆಯಲ್ಲೊಂದು ಎರಡು ಕಾಲಿನ ಕರುವೊಂದು ಜನಿಸಿದ್ದು, ಇದು  ಪರಶಿವನ ಪುನರ್ಜನ್ಮವೆಂದು ಪೂಜಿಸಲು ಮುಂದಾಗಿದ್ದಾರೆ.

ವಿಜಯ ದಶಮಿಯ ದಿನದಂದೇ ಅಪರೂಪದ ಕರು ಜನನವಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ವಿಚಿತ್ರ ಕರು ಜನನವಾಗಿದೆ. ಎರಡು ಕಾಲುಗಳು ಇರುವ ವಿಶೇಷ ಕರು ಇದಾಗಿದ್ದು, ಆರೋಗ್ಯವಾಗಿದೆ. ಹಡಪದ ಬಸವಣ್ಣನವರ ಮನೆಯಲ್ಲಿ ಜನಿಸಿದ ಕರುವನ್ನು ನೋಡಲು ಜನರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಇನ್ನು ಈ ಕರು ಪರಶಿವನ ಪುನರ್ಜನ್ಮ ಎಂದು ಜನರು ಭಾವಿಸಿ ಪೂಜಿಸುತ್ತಿದ್ದಾರೆ. ಈ ವಿಶೇಷ ಕರುವನ್ನು ನೋಡಲು ಮತ್ತು ಪೂಜೆ ಮಾಡಲು ತಂಡೋಪ ತಂಡವಾಗಿ ಬರಯತ್ತಿದ್ದಾರೆ.

Tap to resize

Latest Videos

click me!