ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆಗೆ ಗರ್ಭಿಣಿ ಸೇರಿ ಇಬ್ಬರು ಬಲಿ

By Kannadaprabha News  |  First Published May 28, 2024, 11:56 AM IST

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರ ಪಟ್ಟಣದಲ್ಲಿ ಬಿರುಗಾಳಿ ಮಳೆಗೆ ಮರ ಬಿದ್ದು ಗರ್ಭಿಣಿ ಶ್ವೇತಾ ರಾಠೋಡ ಎಂಬುವರು ಮೃತಪಟ್ಟಿದ್ದಾರೆ. ಕುಡಿಯಲು ನೀರು ತರಲು ಹೋದ ಸಂದರ್ಭದಲ್ಲಿ ಬಿರುಗಾಳಿಗೆ ಅವರ ಮೈಮೇಲೆ ಮರ ಬಿತ್ತು. ಇದೇ ವೇಳೆ, ಸುರಪುರ ತಾಲೂಕಿನ ಹಲವೆಡೆ ಸುರಿದ ಬಿರುಗಾಳಿ ಸಹಿತ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. 


ಬೆಂಗಳೂರು(ಮೇ.28):  ಕಲಬುರಗಿ, ಯಾದಗಿರಿ ಸೇರಿ ರಾಜ್ಯದ 5ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸೋಮವಾರವೂ ಮಳೆಯಾಗಿದ್ದು, ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರ ಪಟ್ಟಣದಲ್ಲಿ ಬಿರುಗಾಳಿ ಮಳೆಗೆ ಮರ ಬಿದ್ದು ಗರ್ಭಿಣಿ ಶ್ವೇತಾ ರಾಠೋಡ (22) ಎಂಬುವರು ಮೃತಪಟ್ಟಿದ್ದಾರೆ. ಕುಡಿಯಲು ನೀರು ತರಲು ಹೋದ ಸಂದರ್ಭದಲ್ಲಿ ಬಿರುಗಾಳಿಗೆ ಅವರ ಮೈಮೇಲೆ ಮರ ಬಿತ್ತು. ಇದೇ ವೇಳೆ, ಸುರಪುರ ತಾಲೂಕಿನ ಹಲವೆಡೆ ಸುರಿದ ಬಿರುಗಾಳಿ ಸಹಿತ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. 

Latest Videos

undefined

ಭೀಕರ ಬರದಿಂದ ಕಂಗೆಟ್ಟಿದ್ದ ಜನತೆಗೆ ಸಂತಸದ ಸುದ್ದಿ: ಈ ಸಲ ವಾಡಿಕೆಗಿಂತ ಹೆಚ್ಚು ಮಳೆ

ಈ ಮಧ್ಯೆ, ಕಲಬುರಗಿ ಜಿಲ್ಲೆ ಯಡ್ರಾಮಿ ತಾಂಡಾ ಹೊರವಲಯದಲ್ಲಿ ಬಿರುಗಾಳಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಪಕ್ಕದ ಸುಂಬಡ ಗ್ರಾಮದ ಚಂದ್ರಮಪ್ಪ ಮಾದರ (24) ಎಂಬುವರು ಮೃತಪಟ್ಟಿದ್ದಾರೆ.

click me!