ಹಾಡಹಗಲೇ ಮನೆಗೆ ನುಗ್ಗಿ ಹಲ್ಲೆ ನಡೆಸಿ ಐಫೋನ್, ಲ್ಯಾಪ್‌ಟಾಪ್, ಕಾರು ಕದ್ದು ಪರಾರಿ, ಇಬ್ಬರ ಬಂಧನ

Published : Jun 21, 2026, 09:37 AM IST
Bengaluru Robbery

ಸಾರಾಂಶ

ಹಾಡಹಾಗಲೇ ಮನೆಗೆ ಏಕಾಏಕಿ ನುಗ್ಗಿ ಕಬ್ಬಿಣ್ಣದ ರಾಡ್ ನಿಂದ ಹಲ್ಲೆ ನಡೆಸಿ ಮನೆಯಲ್ಲಿದ್ದ ವಸ್ತುಗಳ ದೋಚಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಕಾರು, ಸ್ಕೂಟರ್, ಐಫೋನ್ ಕಸಿದು ಪರಾರಿಯಾಗಿದ್ದಾರೆ. 8 ಮಂದಿ ವಿರುದ್ದ ಕೇಸ್ ದಾಖಲಾಗಿದೆ. 

ಬೆಂಗಳೂರು (ಜೂ.21) ರೌಂಡಿ ಗ್ಯಾಂಗ್ ಒಂದು ಮನೆಗೆ ನುಗ್ಗಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಮನೆಯಲ್ಲಿದ್ದ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ಬೆಂಗಳೂರಲ್ಲಿ ನಡೆದಿದೆ. ಇ-ಕಾಮರ್ಸ್ ಕಂಪೆನಿಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಡೀಲರ್ ಅಗಿರುವ ಯಾಸಿನ್ ಆಲಿ ಘಟನೆ ಕುರಿತು ದೂರು ನೀಡಿದ್ದಾರೆ. ಯಾಸಿನ್ ಅಲಿ ಮನೆಗೆ ನುಗ್ಗಿದ ರೌಡಿಗಳು ದುಬಾರಿ ಬೆಲೆಯ ಸ್ಕೋಡಾ ಕಾರು, ಸ್ಕೂಟರ್, ನಾಲ್ಕು ಐಫೋನ್ ಹಾಗೂ ನಗದು ಹಣ ದೋಚಿ ಪರಾರಿಯಾಗಿದ್ದಾರೆ. ಈ ರೌಂಡಿ ಗ್ಯಾಂಗ್‌ನಲ್ಲಿದ್ದ ಇಬ್ಬರನ್ನು ಬಂಧಿಸಲಾಗಿದೆ. 8 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.

ರೌಡಿ ಶೀಟರ್ ರುಬೆನ್ ಪ್ರಮುಖ ಆರೋಪಿ

ಹಲ್ಲೆಗೊಳಗಾದ ಯಾಸೀನ್ ಅಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಂಧಿತ ಇಬ್ರಾಹಿಂ ಹಾಗೂ ವಿಜಯ್ ವಿಚಾರಣೆ ತೀವ್ರಗೊಂಡಿಜೆ. ಕೃತ್ಯದಲ್ಲಿ ಕೆ.ಜಿ.ಹಳ್ಳಿ ರೌಡಿಶೀಟರ್ ರುಬೇನ್ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ರುಬೇನ್ ಈಗಾಗಲೇ ಬೇರೆ ಪ್ರಕರಣವೊಂದರಲ್ಲಿ ಭಾರತಿನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಸದ್ಯ ಬಾಡಿ ವಾರೆಂಟ್ ಅರ್ಜಿ ಸಲ್ಲಿಸಿ ರುಬೇನ್ ನನ್ನ ಕಸ್ಟಡಿಗೆ ಪಡೆಯಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ಇ-ಕಾಮರ್ಸ್ ಕಂಪೆನಿಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಡೀಲರ್ ಅಗಿರುವ ದೂರುದಾರ ಯಾಸಿನ್, ಪತ್ನಿಯಿಂದ ದೂರವಾಗಿ ಶಾಂಪುರ ಬಳಿ ಪ್ರತ್ಯೇಕವಾಗಿ ವಾಸವಿದ್ದಾರೆ. ದೂರುದಾರ ಯಾಸಿನ್ ಪತ್ನಿಯು ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ. ಪತ್ನಿಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೋಸಿನ್ ಹಾಗೂ ಪುಡಿ ರೌಡಿಗಳು ಯಾಸಿನ್ ಮನೆಗೆ ನುಗ್ಗಿ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ರೌಡಿಶೀಟರ್ ರುಬೆನ್ ನೊಂದಿಗೆ ಜೂ.5ರಂದು ಮನೆಗೆ ಬಂದಿದ್ದ ಮೋಸಿನ್, ಸಹಚರರಾದ ವಿಜಯ್, ಇಬ್ರಾಹಿಂ, ಆರ್ಷದ್ ನಿಂದ ಮನೆಗೆ ಬಂದು ಲಾಂಗ್ ನಿಂದ ಹಲ್ಲೆ ನಡೆಸಿದ್ದಾರೆ.

ಮನೆಯಲ್ಲಿದ್ದ ನಾಲ್ಕು ಮೊಬೈಲ್, ಲ್ಯಾಪ್ ಟಾಪ್, ಆ್ಯಪಲ್ ವಾಚ್, ಪಾರ್ಕ್ ಮಾಡಿದ್ದ ಸ್ಕೋಡಾ ಕಾರ್, ಎಲೆಕ್ಟ್ರಿಕಲ್ ಬೈಕ್ ಹಾಗೂ 80 ಸಾವಿರ ಕಸಿದು ಪರಾರಿಯಾಗಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಿರುವ ಸಿಸಿಬಿ ಪೊಲೀಸರಿಂದ ವಿಚಾರಣೆ ಆರೆಂಭಗೊಂಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾವೇರಿ ಕಿಚ್ಚು ಏರಿದ ನಡುವೆ, ನಳನಳಿಸಿದ ಕಬಿನಿ, ಹಾರಂಗಿ ಜಲಾಶಯ!
High court: ಆ ವಿಡಿಯೋ ನೋಡಿ ಚಾಮರಾಜನಗರ ಎಸ್‌ಪಿ ವಿರುದ್ಧ ಹೈಕೋರ್ಟ್ ಗರಂ ಆಗಿದ್ದೇಕೆ?