ಒಂದು ಕಡೆ ಕಾವೇರಿ ನೀರನ್ನು ಹೆಚ್ಚುವರಿಯಾಗಿ ತಮಿಳನಾಡಿಗೆ ಬಿಡುತ್ತಿರೋದನ್ನು ಖಂಡಿಸಿ ರಾಜ್ಯದ್ಯಾಂತ ಹೋರಾಟ ನಡೆಯುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ಮಳೆ ಇಲ್ಲದ ಕಾರಣ ಉತ್ತರ ಕರ್ನಾಟಕದಲ್ಲಿ ಭೂಮಿಗಳೆಲ್ಲವೂ ಬಿರುಕು ಬೀಳುತ್ತಿವೆ.
ವರದಿ ; ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಸೆ.29): ಒಂದು ಕಡೆ ಕಾವೇರಿ ನೀರನ್ನು ಹೆಚ್ಚುವರಿಯಾಗಿ ತಮಿಳನಾಡಿಗೆ ಬಿಡುತ್ತಿರೋದನ್ನು ಖಂಡಿಸಿ ರಾಜ್ಯದ್ಯಾಂತ ಹೋರಾಟ ನಡೆಯುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ಮಳೆ ಇಲ್ಲದ ಕಾರಣ ಉತ್ತರ ಕರ್ನಾಟಕದಲ್ಲಿ ಭೂಮಿಗಳೆಲ್ಲವೂ ಬಿರುಕು ಬೀಳುತ್ತಿವೆ.
undefined
ಈ ಮಧ್ಯೆ ಕೋಟಾದ ಪ್ರಕಾರ ತುಂಗಭದ್ರಾ ಜಲಾಶಯದ ನೀರು ಕಾಲುವೆ ಮೂಲಕ ಆಂಧ್ರಕ್ಕೆ ನೀರು ಹೋಗ್ತಿದೆ. ಆದ್ರೇ ಕೆಳಭಾಗಕ್ಕೆ ಮಾತ್ರ ನೀರು ತಲಯಪುತ್ತಿಲ್ಲ. ಬಳ್ಳಾರಿ ತಾಲೂಕಿನಲ್ಲಿ ಒಂದೇ ಹೊಲದಲ್ಲಿ ನಾಲ್ಕು ನಾಲ್ಕು ಕಡೆ ಬೋರ್ವೆಲ್ ಕೊರೆದ್ರು ಹನಿ ನೀರು ಕೂಡ ಬರುತ್ತಿಲ್ಲ. ಬರಗಾಲದಿಂದ ತತ್ತರಿಸಿದ ಬಳ್ಳಾರಿಯ ರೈತರು ಬೆಳೆ ಉಳಿಸಿಕೊಳ್ಳಲು ಮಾಡುತ್ತಿರೋ ಹರಸಾಹಸದ ವರದಿ ಇಲ್ಲಿದೆ ನೋಡಿ..
ಬಳ್ಳಾರಿಯ ವಿಎಸ್‌ಕೆ ವಿವಿಗೂ ತಟ್ಟಿದ ಕರ್ನಾಟಕ ಬಂದ್ ಎಫೆಕ್ಟ್: ಪರೀಕ್ಷೆ ಮುಂದೂಡಿಕೆ
ಒಂದಲ್ಲ ಎರಡಲ್ಲ ನಾಲ್ಕು ನಾಲ್ಕು ಬೋರ್ವೆಲ್ ಕೊರೆದ್ರೂ ನೀರು ಬರುತ್ತಿಲ್ಲ!
ಸದಾ ಮುಗಿಲಿನತ್ತ ನೋಡುತ್ತಿರೋ ಈ ರೈತರಿಗೆ ಯಾವಾಗ ಮಳೆ ಬರುತ್ತದೆಯೋ ಎಂದು ಕಾದು ಕುಳಿತಿದ್ದಾರೆ. ಬೆಳೆ ಉಳಿಸಿಕೊಳ್ಳಲು ಒಂದೆ ಹೊಲದಲ್ಲಿ ನಾಲ್ಕು ಬೋರ್ವೇಲ್ ಕೊರೆದ್ರೂ ನೀರು ಬರುತ್ತಿಲ್ಲ. ಬೋರ್‌ವೆಲ್ನಿಂದ ನೀರು ಬಂದ್ರೂ ಅದನ್ನು ಹೊಲಕ್ಕೆ ಹರಿಸಲು ಕರೆಂಟ್ ಇಲ್ಲವೆಂದು ರೈತರ ಆರೋಪ.
ಹೌದು, ಈ ಬಾರಿ ಜೂನ್ ಆರಂಭದಲ್ಲಿ ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕೈಕೊಟ್ಟಿದೆ. ಜುಲೈ ಅಂತ್ಯದಲ್ಲಿ ಮಲೆನಾಡಿನಲ್ಲಿ ಸುರಿದ ಮಳೆ ತುಂಗಭದ್ರ ಜಲಾಶಯವನ್ನು ಒಂದು ಹಂತದವರೆಗೂ ತುಂಬುವಲ್ಲಿ ಯಶಸ್ವಿಯಾಗಿದೆ. ಆದರೆ ಸದ್ಯ ಜಲಾಶಯದಲ್ಲಿರೋ ನೀರು, ಆಂಧ್ರ ಮತ್ತು ಕರ್ನಾಟಕದ ಆರಕ್ಕೂ ಹೆಚ್ಚು ಜಿಲ್ಲೆಗೆ ಕುಡಿಯೋದ್ರ ಜೊತೆ ಕೃಷಿಗೆ ನೀಡಲು ಸಾಧ್ಯವಾಗ್ತಿಲ್ಲ. ಮುಂಗಾರಿನಲ್ಲಿ ಒಂದಷ್ಟು ಮಳೆಯಾದ್ರೇ, ನಂತರ ಒಂದಷ್ಟು ಡ್ಯಾಂ ನೀರು ಬಳಸಿದ್ರೆ, ರೈತರ ಬೆಳೆ ಉಳಿಯುತ್ತಿತ್ತು. ಆದ್ರೇ, ಕಳೆದೆರಡು ವರ್ಷದಿಂದ ಸರಿಯಾಗಿ ಮಳೆ ಬಾರದ ಹಿನ್ನೆಲೆ ಸಂಪೂರ್ಣವಾಗಿ ಡ್ಯಾಂ ನೀರಿನ ಮೆಲೆ ಅವಲಂಬನೆ ಇರೋದ್ರಿಂದ ಕಷ್ಟವಾಗಿದೆ. ಅಲ್ಲದೇ ಇರೋ ಬರೋ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಹೀಗಾಗಿ ಹಾಕಿರೋ ಬೆಳೆ ಉಳಿಸಿಕೊಳ್ಳಲು ನಾಲ್ಕು ಬೋರ್ ವೆಲ್ ನಿಂದ ಬರೋ ಅಲ್ಪ ಸ್ವಲ್ಪ ನೀರನ್ನು ಕೃಷಿ ಹೊಂಡದಲ್ಲಿ ಹಿಡಿದಿಟ್ಟುಕೊಂಡು ಪೈಪ್ ಲೈನ್ ಮೂಲಕ ಹೊಲಗಳಿಗೆ ಹರಿಸಿಕೊಳ್ಳುತ್ತಿದ್ದಾರೆ.
ನಾಲ್ಕು ನೂರು ಅಡಿ ಕೊರೆದ ಮೇಲೆ ಬರೋ ನೀರನ್ನು ಹಿಡಿದಿಟ್ಟುಕೊಳ್ಳಲು ಪರದಾಟ!
ಇನ್ನೂ ಕೃಷಿ ಹೊಂಡದಲ್ಲಿ ಹಿಡಿದಿಟ್ಟುಕೊಂಡ ನೀರನ್ನು ಬೆಳೆಗೆ ಹರಿಸಿಕೊಳ್ಳು ಸರಿಯಾದ ಟೈಂಗೆ ವಿದ್ಯುತ್ ಇರೋದಿಲ್ಲ. ಹೀಗಾಗಿ ಟ್ರಾಕ್ಟರ್ ಇಂಜಿನ್‌ಗೆ ಡೀಸೆಲ್ ಜನರೇಟರ್ ಬಳಸಿ ಹೊಲಗಳಿಗೆ ನೀರನ್ನು ಹರಿಸುತ್ತಿದ್ದಾರೆ. ಇಷ್ಟ್ರಾದ್ರೂ ಬೆಳೆ ಉಳಿಯುತ್ತದೆ ಅನ್ನೋ ನಂಬಿಕೆ ಇಲ್ಲ ಎನ್ನುತ್ತಿದ್ಧಾರೆ.
ಇಲ್ಲಿಯ ರೈತರು ನಿಯಮದ ಪ್ರಕಾರ ಹೇಗೆ ಕಾವೇರಿ ನೀರನ್ನು ತಮಿಳುನಾಡಿಗೆ ಕಡ್ಡಾಯವಾಗಿ ಹರಿಸಬೇಕೋ. ಹಾಗೇ ಇಲ್ಲಿಯೂ ತುಂಗಭದ್ರ ಜಲಾಶಯದ ನೀರನ್ನು ಆಂಧ್ರ ಮತ್ತು ತೆಲಂಗಾಣಕ್ಕೆ ಇಂತಿಷ್ಟು ನೀರನ್ನು ಹರಿಸಬೇಕಿದೆ. ಹೀಗಾಗಿ ಬಳ್ಳಾರಿ ತಾಲೂಕಿನ ಕೆಳಭಾಗದ ರೈತರಿಗೆ ಇದೀಗ ನೀರು ಸಿಗದೇ ಕಂಗಾಲಾಗಿದ್ದಾರೆ.
ವಾರದಲ್ಲಿ ಎರಡು ಬಾರಿ ಒಡೆದ ಹೆಚ್ಎಲ್ಸಿ ಕಾಲುವೆ; ನೀರಿಲ್ಲದ ಸಮಯದಲ್ಲಿ ರೈತರಿಗೆ ಮತ್ತಷ್ಟು ಸಂಕಷ್ಟ
ಮಳೆ ಬಂದ್ರಷ್ಟೇ ಉಳಿಗಾಲ
ಜಲಾಶದಯಲ್ಲಿ ನೀರಿದ್ರೂ ಅದನ್ನು ಕುಡಿಯುವ ನೀರಿಗೆ ಮತ್ತು ಕೋಟಾದ ( ನಿಯಮ) ಪ್ರಕಾರ ಆಂಧ್ರಕ್ಕೆ ನೀರು ಹರಿಸಬೇಕಾದ ಹಿನ್ನೆಲೆ ರಾಜ್ಯದ ರೈತರಿಗೆ ಇದೀಗ ನೀರಿನ ಕೊರತೆ ಎದುರಾಗಿದೆ.