ತುಮಕೂರಿನಲ್ಲಿ ಎಂಎಲ್‌ಸಿ ರಾಜೇಂದ್ರ ರಾಜಣ್ಣ ಕೊಲೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಹನಿಟ್ರ್ಯಾಪ್ ನಂಟು, ಹಣಕಾಸಿನ ವ್ಯವಹಾರ ಹಾಗೂ ರೌಡಿಗಳ ಸ್ಕೆಚ್ ಬಗ್ಗೆ ತನಿಖೆ ನಡೆಯುತ್ತಿದೆ.
ತುಮಕೂರು (ಎ.1): ತಮ್ಮ ತಂದೆ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಬಳಿಕ ಹನಿಟ್ರ್ಯಾಪ್ ಪ್ರಕರಣ ಸಂಬಂಧ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಪ್ರಕರಣವೀಗ ಹೊಸ ತಿರುವು ಪಡೆದಿದೆ. ರಾಜೇಂದ್ರ ಅವರ ಕೊಲೆಗೆ ಸುಪಾರಿ ಪ್ರಕರಣ ಹಿನ್ನೆಲೆ ಕೆಲ ಆರೋಪಿಗಳನ್ನು ಬಂಧಿಸಲಾಗಿದೆ. A1 ಸೋಮ, A2 ಭರತ, A3 ಅಮಿತ್ , A4 ಗುಂಡಾ, A5 ಯತೀಶ್ ಮತ್ತು ಇತರೆ ಪುಷ್ಪ ಮತ್ತು ಯಶೋಧ ಪ್ರಮುಖ ಆರೋಪಿಗಳು.
ಪ್ರಕರಣ ಸಂಬಂಧ ಆಡಿಯೋವೊಂದು ಸ್ಫೋಟಗೊಂಡಿತ್ತು. ಆಡಿಯೋ ಸ್ಪೋಟ ಬೆನಲ್ಲೇ ಪುಷ್ಪಳನ್ನ ವಿಚಾರಣೆ ನಡೆಸಲು ಪೊಲೀಸರು ವಶಕ್ಕೆ ಪಡೆದರು. ಆಡಿಯೋ ರಾಣಿ ಪುಷ್ಪಾಳನ್ನು ಪೊಲೀಸರು ಮೊದಲ ದಿನ ತೀವ್ರ ವಿಚಾರಣೆ ನಡೆಸಿದ್ದಾರೆ. ಕೊಲೆ ಸುಪಾರಿಗೆ ಕೊಟ್ಟ ವಿಚಾರ ಬಹಿರಂಗ ಪಡಿಸಿದ ಪುಷ್ಪಾಗೆ ಎರಡನೇ ದಿನವೂ ವಿಚಾರಣೆ ನಡೆಸಿದ್ದು ಈಕೆ ಸೋಮು ಸ್ನೇಹಿತೆಯಾಗಿದ್ದಾಳೆ.
ಅಪ್ಪ ರಾಜಣ್ಣಗೆ ಹನಿಟ್ರ್ಯಾಪ್, ಮಗ ರಾಜೇಂದ್ರಗೆ ಮರ್ಡರ್ ಸುಪಾರಿ; ಈ ಕೇಸಿನ ಹಿಂದಿರೋ ಮಹಾನಾಯಕ ಯಾರು?
ಪುಷ್ಪಾಗೂ ಇದೆ ಹನಿಟ್ರ್ಯಾಪ್ ನಂಟು?
ಹಲವು ರಾಜಕೀಯ ಮುಖಂಡರ ಜೊತೆ ಸಲುಗೆಯಿಂದ ಇದ್ದು ಪುಷ್ಪಾ ನಗ್ನ ವೀಡಿಯೋ ಮಾಡಿಕೊಂಡು ಅದನ್ನು ತೋರಿಸಿ ಲಕ್ಷಾಂತರ ರೂ ಹಣ ಪೀಕಿದ್ದ ಆರೋಪವಿದೆ. ರಾಜೇಂದ್ರ ರಾಜಣ್ಣರನ್ನು ಹನಿಟ್ರ್ಯಾಪ್ ಮಾಡಲು ಎ1 ಸೋಮ ಪುಷ್ಪಾಳನ್ನು ಬಳಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಣಕಾಸಿನ ವಿಚಾರದಲ್ಲಿ ವ್ಯತ್ಯಾಸ ಬಂದಾಗ ಕೊಲೆಗೆ ಸಂಚು ಎಂದು ತಾನೇ ಬಾಯ್ಬಿಟ್ಟಳಾ ಪುಷ್ಪಾ? ಈ ಆಯಾಮದಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಕಳೆದ ನವೆಂಬರ್ ನಲ್ಲಿ ರೌಡಿ ಸೋಮ. 5 ಲಕ್ಷ ಅಡ್ವಾನ್ಸ್ ಪಡೆದಿದ್ದಾನೆ. ಆ ಬಳಿಕ ನವೆಂಬರ್ ನಲ್ಲಿ ಎಮ್ ಎಲ್ ಸಿ ರಾಜೇಂದ್ರ ಮನೆಗೆ ಇಬ್ಬರು ಹುಡುಗರು ಓರ್ವ ಮಹಿಳೆ ಭೇಟಿ ನೀಡಿದ್ದಾರೆ. ಆದರೆ ಅಂದು ಸ್ಕೇಚ್ ಮಿಸ್ ಆಗಿದೆ. ಇದಾದ ಬಳಿಕ ಜನವರಿಯಲ್ಲಿ ಎಮ್ ಎಲ್ ಸಿ ರಾಜೇಂದ್ರ ಅವರನ್ನ ಎತ್ತಲು ಮತ್ತೆ ಪ್ಲಾನ್ ನಡೆದಿದೆ. ಈ ಬಗ್ಗೆ ಗುಂಡಾ ಎಂಬ ಆರೋಪಿ ತನ್ನ ಲವರ್ ಯಶೋದ ಬಳಿ ಹೇಳಿಕೊಂಡಿದ್ದ. ಯಶೋದ ಲೇಡಿ ಪುಷ್ಪಗೆ ಈ ಬಗ್ಗೆ ಮಾಹಿತಿ ನೀಡಿದ್ದಳು. ಹೀಗೆ 70 ಲಕ್ಷಕ್ಕೆ ಡೀಲ್ ಅಂತೆ ಎಂದು ಯಶೋದ ಪುಷ್ಪಾ ಗೆ ಹೇಳಿದ್ದಳು. ಪುಷ್ಪ ಹೋಗಿ ರಾಕಿಗೆ ಮಾಹಿತಿ ನೀಡಿದ್ದಳು. ಪುಷ್ಪಾಳ ಬಳಿ 30 ಲಕ್ಷ ಹಣ ತಿಂದು ಸೋಮ ವಂಚಿಸಿದ್ದ. ಹೀಗಾಗಿ ಸೋಮನ ಮೇಲೆ ಪುಷ್ಪ ಮುನಿಸಿಕೊಂಡಿದ್ದಳು.
ಎ5 ಆರೋಪಿ ಯತೀಶ್ ನನ್ನು ತುಮಕೂರು ನಗರದ ಶಾಂತಿನಗರದಲ್ಲಿ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದರು. ಈತ ಎ1 ಆರೋಪಿ ಸೋಮನ ಪಕ್ಕಾ ಶಿಷ್ಯ. ಆದರೆ A1 ಆರೋಪಿ ಸೋಮ ಪರಾರಿಯಾಗಿದ್ದು, ಸೋಮನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪೋನ್ ಸ್ವೀಚ್ಡ್ ಆಫ್ ಮಾಡಿ ಸೋಮ ತಲೆ ಮರೆಸಿಕೊಂಡಿದ್ದು, ಸೋಮ ತುಮಕೂರು ನಗರ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಇದೀಗ ಎ1 ಆರೋಪಿ ಸೋಮನ ಬ್ಯಾಂಕ್ ಖಾತೆಯನ್ನು ಯಾವುದೇ ವ್ಯವಹಾರ ನಡೆಸದಂತೆ ಪೊಲೀಸರು ಫ್ರೀಜ್ ಮಾಡಿದ್ದಾರೆ. ಅತ್ತ ಸೋಮನ ಸ್ನೇಹಿತ ಕಾರ್ಪೆಂಟರ್ ಮನು ಬ್ಯಾಂಕ್ ಖಾತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಏಕೆಂದರೆ ಮನು ಖಾತೆ ಮೂಲಕ ಸೋಮ ಡೀಲ್ ವ್ಯವಹಾರ ಮಾಡುತಿದ್ದ.
ಹನಿಟ್ರ್ಯಾಪ್ ಯತ್ನ; ಇಂದು ರಾಜಣ್ಣ ವಿಚಾರಣೆ? ಹಬ್ಬದ ನಂತರ ಬರುವೆ ಎಂದಿದ್ದ ಸಚಿವ
ಅಕ್ಟೋಬರ್ ನಲ್ಲೇ ನಡೆದಿತ್ತು ಸ್ಕೆಚ್!
ಎಮ್ ಎಲ್ ಸಿ ರಾಜೇಂದ್ರ ಹತ್ಯೆಗೆ ಕಳೆದ 2024 ರ ಅಕ್ಟೋಬರ್ ನಲ್ಲಿ ಸ್ಕೇಚ್ ನಡೆದಿತ್ತು. ಒಬ್ಬರಲ್ಲ ಇಬ್ಬರನ್ನ ಎತ್ತಲು ಕುಖ್ಯಾತ ರೌಡಿ ತಂಡ ಒಂದಾಗಿತ್ತು. ಎಮ್ ಎಲ್ ಸಿ ರಾಜೇಂದ್ರ ಜೊತೆಗೆ ಮತ್ತೋರ್ವ ರೌಡಿಶೀಟರ್ ಪ್ರಸ್ಸಿಯನ್ನ ಎತ್ತಲು ತುಮಕೂರು ಕುಖ್ಯಾತ ರೌಡಿಗಳು ಒಂದಾಗಿದ್ದರು.
ಮೊದಲಿಗೆ ಎಮ್ ಎಲ್ ಸಿಯನ್ನ ಮುಗಿಸಿ ಆ ಬಳಿಕ ರೌಡಿಯನ್ನ ಮುಗಿಸಲು ಸ್ಕೇಚ್ ಹಾಕಲಾಗಿತ್ತು. ಮೊದಲಿಗೆ ಬೆಂಗಳೂರಿನಿಂದ ರೌಡಿ ಸೋಮನಿಗೆ ಡೀಲ್ ಬರುತ್ತೆ. ಈ ಡೀಲ್ ಅನ್ನು ಸೋಮ ಒಟ್ಟು 70 ಲಕ್ಷ ಒಪ್ಪಿಕೊಂಡಿದ್ದ. ಡೀಲ್ ವಿಚಾರವಾಗಿ ಬೇರೆ ಬೇರೆ ರೌಡಿಗಳನ್ನ ಸೋಮ ಭೇಟಿ ಮಾಡಿದ್ದ. ಇದರಲ್ಲಿ ಕುಖ್ಯಾತ ರೌಡಿಶೀಟರ್ ರೋಹಿತ್ ಹಾಗೂ ಮಧುಗಿರಿ ಮಲ್ಲೇಶ್ ನ್ನ ಕೂಡ ಸೋಮ ಭೇಟಿ ಮಾಡಿದ್ದ. ಜೊತೆಗೆ ಸಹಚರ ಗುಂಡಾ ಜೊತೆ ಭೇಟಿ ನೀಡಿ ಎಮ್ ಎಲ್ ಸಿ ರಾಜೇಂದ್ರ ಮುಗಿಸಲು ಎಲ್ಲರೂ ಒಂದಾಗಿದ್ರು.
ಇಬ್ಬರನ್ನ ಎತ್ತೋಣ ಎಂದು ತಂಡ ಸ್ಕೇಚ್ ಹಾಕಿಕೊಂಡಿತ್ತು. ರಾಜೇಂದ್ರ ಜೊತೆಗೆ ನಟೋರಿಯಸ್ ರೌಡಿಶೀಟರ್ ರೋಹಿತ್ , ಪ್ರಸ್ಸಿಯನ್ನ ಕೊಲೆ ಮಾಡಲು ಪ್ಲಾನ್ ಮಾಡಿದ್ದ. ಪ್ರಸ್ಸಿಯನ್ನ ಎತ್ತಲು ರೋಹಿತ್ ಸೋಮನ ಬೆಂಬಲ ಕೇಳಿದ್ದ. ಸೋಮನಿಗೆ ಪ್ರಸ್ಸಿ ಯನ್ನ ಎತ್ತಲು ಪ್ಲಾನ್. ಪ್ರಸ್ಸಿ ಹಾಗೂ ಸೋಮ ಇಬ್ಬರು ಒಂದೆ ಏರಿಯಾದವರು. ಈ ಹಿಂದೆ ರೌಡಿಶೀಟರ್ ಪೋಲಾರ್ಡ್ ಮರ್ಡರ್ ಕೇಸ್ ನಲ್ಲಿ ಜೈಲಿಗೆ ಹೋಗಿದ್ದ ಪ್ರಸ್ಸಿ. ರೌಡಿಶೀಟರ್ ರೋಹಿತ್ ಶಿಷ್ಯನಾಗಿದ್ದ ಪೋಲಾರ್ಡ್ ನನ್ನು ಪ್ರಸ್ಸಿ ಕೊಲೆ ಮಾಡಿದ್ದ. ಹೀಗಾಗಿ ಪ್ರಸ್ಸಿಯನ್ನ ಎತ್ತಲು ಪ್ಲಾನ್ ಮಾಡಿರುವ ಬಗ್ಗೆ ಮಾಹಿತಿ. ಇದರ ಜೊತೆಗೆ ಮತ್ತೋರ್ವ ಕುಖ್ಯಾತ ರೌಡಿ ಮಧುಗಿರಿ ಮಲ್ಲೇಶ್ ಕೂಡ ಸಾಥ್ ನೀಡಿದ್ದ.
ಹನಿಟ್ರ್ಯಾಪ್ ಅಲ್ಲ ಕೊಲೆ ಸುಪಾರಿ ಎಂದಿದ್ದ ಎಂಎಲ್‌ಸಿ ರಾಜೇಂದ್ರ
ತಮ್ಮ ಮೇಲೆ ಹನಿಟ್ರ್ಯಾಪ್ ಆಗಿಲ್ಲ. ನಾಲ್ಕು ತಿಂಗಳ ಹಿಂದೆ 5 ಲಕ್ಷ ರು.ಗೆ ಸುಪಾರಿ ಪಡೆದು ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದಾರೆ ಎಂದು ಆರೋಪಿಸಿ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರಾಜೇಂದ್ರ ದೂರು ಕೊಡಲು ಬಂದಿದ್ದರು. ಅವರು ತುಮಕೂರಿನಲ್ಲಿ ನಡೆದಿರುವುದರಿಂದ ಸ್ಥಳೀಯ ಠಾಣೆಗೆ ದೂರು ನೀಡಲು ಸಲಹೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ದೂರು ನೀಡಲಾಯ್ತು. ಇದರ ಬೆನ್ನಲ್ಲೇ ಪ್ರಕರಣದ ತನಿಖೆ ಚುರುಕುಕೊಂಡು ಶನಿವಾರ ಮಧುಗಿರಿ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಶಿರಾ ಗ್ರಾಮಾಂತರ ಸಿಪಿಐ ರಾಘವೇಂದ್ರ ಹಾಗೂ ಪಿಎಸ್ಐ ಚೇತನ್ ತನಿಖಾ ತಂಡ ರಚಿಸಲಾಯ್ತು.
ಸುಪಾರಿ ಪಡೆದಿದ್ದ ತಂಡ ಶಿರಾ ಗೇಟ್ ಬಳಿ ಫಾರಂ ಹೌಸ್ ನಲ್ಲಿ ಮೀಟಿಂಗ್ ಮಾಡಿದ್ದ ಮಾಹಿತಿ ಹಿನ್ನೆಲೆಯಲ್ಲಿ ತುಮಕೂರಿನ ಶಿರಾ ಗೇಟ್ ಭಾಗದ ಸಿಸಿಟಿವಿ ಪರಿಶೀಲನೆ ನಡೆಸಿ ಬಳಿಕ ಆರೋಪಿಗಳ ಜಾಡು ಹಿಡಿದು ಈಗ 7 ಮಂದಿ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.