ಇಂದಿನಿಂದ ನೆಹರು ತಾರಾಲಯ ಪ್ರವೇಶ ಶುಲ್ಕ ₹100ಗೆ ಏರಿಕೆ!

ಬೆಂಗಳೂರಿನ ಜವಹಾರ್‌ಲಾಲ್ ನೆಹರು ತಾರಾಲಯದ ಸ್ಕೈ ಥಿಯೇಟರ್‌ನ ಪ್ರವೇಶ ಶುಲ್ಕವನ್ನು ಶೇ.25ರಷ್ಟು ಹೆಚ್ಚಿಸಲಾಗಿದೆ. ವಯಸ್ಕರ ಟಿಕೆಟ್ ದರ ₹75 ರಿಂದ ₹100ಕ್ಕೆ ಏರಿಕೆಯಾಗಿದೆ. ನಿರ್ವಹಣಾ ವೆಚ್ಚ ಹೆಚ್ಚಳದಿಂದ ದರ ಪರಿಷ್ಕರಣೆ ಮಾಡಲಾಗಿದೆ.

Nehru Planetarium entry fee increased to Rs 100 from today rav

ಬೆಂಗಳೂರು (ಏ.1):  ಹಾಲು, ವಿದ್ಯುತ್ ದರ ಹೆಚ್ಚಳಗಳ ನಡುವೆ ನಗರದ ಜವಹಾರ್‌ಲಾಲ್ ನೆಹರು ತಾರಾಲಯದ ಸ್ಕೈ ಥಿಯೇಟರ್‌ ಪ್ರವೇಶ ಶುಲ್ಕವೂ ಶೇ.25ರಷ್ಟು ಹೆಚ್ಚಳವಾಗಿದೆ. ವಯಸ್ಕರ ಪ್ರವೇಶಕ್ಕೆ ಹಾಲಿ ದರ ₹75 ರಿಂದ ₹100ಕ್ಕೆ ಏರಿಕೆಯಾಗಿದ್ದು, ಪರಿಷ್ಕೃತ ದರ ಏ.1ರಿಂದಲೇ ಜಾರಿಗೆ ಬರಲಿದೆ. ಅದೇ ರೀತಿ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಗುಂಪು ಬುಕ್ಕಿಂಗ್ ಪ್ರವೇಶ ಶುಲ್ಕ ಕೂಡ ಏರಿಕೆಯಾಗಿದೆ.

ನಿರ್ವಹಣೆ ಶುಲ್ಕ ಹಾಗೂ ಸ್ಕೈ ಥಿಯೇಟರ್ ಶೋ ನಡೆಸುವ ವೆಚ್ಚ ಹೆಚ್ಚಳವಾಗಿವೆ. ಅದನ್ನು ಭರಿಸಲು ದರ ಪರಿಷ್ಕರಣೆ ಮಾಡಲಾಗಿದೆ. ಶೋ ದರ 2020ರಲ್ಲಿ ಪರಿಷ್ಕರಿಸಲಾಗಿದ್ದು, 5 ವರ್ಷಗಳ ಬಳಿಕ ಮತ್ತೊಮ್ಮೆ ಪರಿಷ್ಕರಣೆ ಮಾಡಲಾಗಿದೆ ಎಂದು ತಾರಾಲಯದ ನಿರ್ದೇಶಕ ಡಾ.ಬಿ.ಆರ್. ಗುರುಪ್ರಸಾದ್ ತಿಳಿಸಿದರು.

Latest Videos

ಬಾಹ್ಯಾಕಾಶದ ಕುರಿತು ಮಕ್ಕಳಲ್ಲಿ ಆಸಕ್ತಿ ಮೂಡಿಸುವುದು, ಹೊಸ ಹೊಸ ವಿಜ್ಞಾನ ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳನ್ನು ವಿಜ್ಞಾನದ ಕಡೆ ಸೆಳೆಯುವ ಉದ್ದೇಶದೊಂದಿಗೆ ತಾರಾ ಮಂಡಲ, ಆಕಾಶಕಾಯಗಳ ಚಲನೆ, ವಿಜ್ಞಾನ ಸೇರಿದಂತೆ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸಂಶೋಧನೆಯ ಕುರಿತು ಪ್ರದರ್ಶನಗಳನ್ನು ಸ್ಕೈ ಥಿಯೇಟರ್‌ನಲ್ಲಿ ಏರ್ಪಡಿಸಲಾಗುತ್ತದೆ ಎಂದು ಗುರುಪ್ರಸಾದ್ ಹೇಳಿದರು.

ಇದನ್ನೂ ಓದಿ: ಮೆಟ್ರೋ, ಹಾಲು ದರ ಹೆಚ್ಚಳ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆ ಬರೆ; ಇಂದಿನಿಂದ ಕಸ ವಿಲೇವಾರಿಗೂ ಬಿಬಿಎಂಪಿ ಶುಲ್ಕ ವಸೂಲಿ!

ಸ್ಕೈ ಥಿಯೇಟರ್ ಪ್ರವೇಶ ದರ

ಕೆಟಗರಿ ಪರಿಷ್ಕೃತ ದರ (₹) ಹಳೇ ದರ (₹)

ವಯಸ್ಕರು 100 75

16 ವರ್ಷದೊಳಗಿನ ಮಕ್ಕಳು 60 50

ಗುಂಪಾಗಿ ಬರುವ ಶಾಲಾ ವಿದ್ಯಾರ್ಥಿಗಳು 50 40

ವಿದ್ಯಾರ್ಥಿಗಳು ಬ್ಲಾಕ್ ಬುಕ್ಕಿಂಗ್ (210 ಸೀಟ್ಸ್‌) 10,000 8,000

ಇತರರಿಗೆ ಬ್ಲಾಕ್ ಬುಕ್ಕಿಂಗ್ (210 ಸೀಟ್ಸ್‌) 20,000 15,000

vuukle one pixel image
click me!