ಕೋವಿಡ್ ಗುಣಮುಖರಿಗೆಲ್ಲಾ ಕ್ಷಯ ರೋಗ ಪತ್ತೆ ಕಾರ್ಯ : ಸುಧಾಕರ್

By Suvarna News  |  First Published Aug 17, 2021, 12:12 PM IST
  • ದೇಶದಲ್ಲೇ ವಿನೂತನ ಪ್ರಯತ್ನವನ್ನು ಕರ್ನಾಟಕ ರಾಜ್ಯದಲ್ಲಿ ಮಾಡಲಾಗುತ್ತಿದೆ
  • ಕೋವಿಡ್ ಸೋಂಕಿನಿಂದ ಹೊರ ಬಂದ ವ್ಯಕ್ತಿ ಗಳಲ್ಲಿ ಕ್ಷಯ ರೋಗ ಪತ್ತೆ ಮಾಡುವ ಕಾರ್ಯ 
  • ಇದೇ ತಿಂಗಳ 31 ರಿಂದ ಕ್ಷಯ ರೋಗ ಪತ್ತೆ ಮಾಡಲಾಗುತ್ತಿದೆ

ಬೆಂಗಳೂರು (ಆ.17):  ದೇಶದಲ್ಲೇ ವಿನೂತನ ಪ್ರಯತ್ನವನ್ನು ಕರ್ನಾಟಕ ರಾಜ್ಯದಲ್ಲಿ ಮಾಡಲಾಗುತ್ತಿದೆ. ಕೋವಿಡ್ ಸೋಂಕಿನಿಂದ ಹೊರ ಬಂದ ವ್ಯಕ್ತಿ ಗಳಲ್ಲಿ ಕ್ಷಯ ರೋಗ ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಸಚಿವ ಡಾ. ಸುಧಾಕರ್ ಹೇಳಿದರು. 

ವಿಧಾನಸೌಧದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ ಸುಧಾಕರ್ ಇದೇ ತಿಂಗಳ 31 ರಿಂದ ಕ್ಷಯ ರೋಗ ಪತ್ತೆ ಮಾಡಲಾಗುತ್ತಿದೆ ಎಂದರು.

Latest Videos

undefined

ರಾಜ್ಯದಲ್ಲಿ 28 ಲಕ್ಷಕ್ಕೂ ಹೆಚ್ಚು ಜನ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಸಾಮಾನ್ಯವಾಗಿ ಕ್ಷಯರೋಗ ಶ್ವಾಸಕೋಶದ ಸೋಂಕಿನಿಂದ ಬರುತ್ತದೆ. ಕೋವಿಡ್ ಕೂಡಾ ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಕೋವಿಡ್ ನಿಂದ ಗುಣಮುಖ ಆದವರಿಗೆ ಕ್ಷಯರೋಗ ಭಾದಿಸುವ ಸಾಧ್ಯತೆ ಇರುವುದರಿಂದ ಈ ಆಂದೋಲನ ಮಾಡಲಾಗುತ್ತಿದೆ ಎಂದರು. 

ಕೋವಿಡ್‌ ಹೆಚ್ಚಿರುವ 7 ಜಿಲ್ಲೆಗಳಲ್ಲಿ ಸಂಪರ್ಕಿತರ ಪತ್ತೆ ತೀವ್ರಕ್ಕೆ ಆದೇಶ

ಸಾಮಾನ್ಯವಾಗಿ ರೋಗನಿರೋಧಕ ಶಕ್ತಿ ಕುಂದಿದ ನಂತರ ಕ್ಷಯ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೋವಿಡ್ ಸೋಂಕಿನಿಂದ ಗುಣಮುಖ ರಾದವರು ಸ್ವಯಂ ಪ್ರೇರಣೆಯಿಂದ ಕ್ಷಯರೋಗ ಪರೀಕ್ಷೆ ಮಾಡಿಸಿಕೊಳ್ಳಿ. ಪ್ರಾರಂಭದಲ್ಲಿ ಯೇ ಅದನ್ನು ಗುರುತಿಸಿದರೆ ಬೇಗ ಚಿಕಿತ್ಸೆ ಮಾಡಬಹುದು. ಯಾರೆಲ್ಲಾ ಸೋಂಕಿತರಾಗಿದ್ದು ಗುಣಮುಖರಾಗಿದ್ದೀರಾ ಅವರೆಲ್ಲಾ ತಪಾಸಣೆ ಮಾಡಿಸಿಕೊಳ್ಳಿ ಎಂದರು.

ಇನ್ನು ಕೋವಿಡ್ ಬಂದಿರೋರೆಲ್ಲಾ ಕ್ಷಯ ರೋಗಿಗಳು ಅಂತಲ್ಲಾ.? ಮೊದಲೇ ತಪಾಸಣೆ ಮಾಡಿಸಿಕೊಂಡರೆ, ಅದನ್ನ ಆರಂಭದಲ್ಲೇ  ತಡೆಯಬಹುದು. 3.9 ರಷ್ಟು ಜನರಿಗೆ ಕ್ಷಯ ರೋಗವಿತ್ತು.  2019-20ರಲ್ಲಿ ತಪಾಸಣೆ ಮಾಡಿದಾಗ ಕಡಿಮೆಯಾಗಿದೆ. ಕೋವಿಡ್ ಬಂದ ಹಿನ್ನೆಲೆ ತಪಾಸಣೆ ಕಡಿಮೆ ಮಾಡಲಾಗಿತ್ತು.  ಹೀಗಾಗಿ ಕಡಿಮೆ ಆಗಿದೆ ಅಂತ ಬಾವಿಸಿಲ್ಲ ಎಂದರು. 

1.25ಕೋಟಿ ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. 79,938 ಜನರ ಪೈಕಿ, 2,714 ಜನರಿಗೆ ಪಾಸಿಟಿವ್ ಬಂದಿದೆ. ಇದನ್ನ ಗಂಭೀರವಾಗಿ ಪರಿಗಣಿಸಬೇಕಿದೆ. ಸಾಂಕ್ರಾಮಿಕ ರೋಗ ಅಂತ ಹೇಳಲು ಸಾಧ್ಯವಿಲ್ಲ. ಆದರೆ ವ್ಯಕ್ತಿ ಇಂದ ಮನೆಯವರಿಗೆ ಬರುವ ಸಾಧ್ಯತೆ ಇದೆ. ಕೆಲಸ ಮಾಡುವ ಸ್ಥಳದಿಂದಲೂ ಬರುವ ಸಾಧ್ಯತೆ. ಯಾರಿಗೆ ಎರಡು ವಾರಕ್ಕೂ ಹೆಚ್ಚು ಕೆಮ್ಮುತ್ತಾರೆ ಅವರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಮ್ಮಿದ್ದರೆ ಒಮ್ಮೆ ಪರೀಕ್ಷೆ ಮಾಡಿಸಿ ಕೊಳ್ಳುವುದು ಸೂಕ್ತ. ರಾತ್ರಿ ವೇಳೆ ಜ್ವರ ಬರುವ ಸಾಧ್ಯತೆ ಇದೆ. ತೂಕ ಕೂಡ ಕಡಿಮೆಯಾಗಲಿದೆ. ಈ ರೀತಿ ಲಕ್ಷಣಗಳಿದ್ದರೆ ಪರೀಕ್ಷೆ ಮಾಡಿಸಿಕೊಲ್ಳಿ ಎಮದು ಸಚಿವರು ಹೇಳಿದರು.

ಕೋವಿಡ್‌ ಗುಣಮುಖರಲ್ಲಿ ಕ್ಷಯ ಪತ್ತೆಗೆ ಅಭಿಯಾನ

 ಮೂರುವರೆ ಸಾವಿರ ಕೋಟಿ ರಾಜ್ಯ ಸರ್ಕಾರ ನೀಡಿದೆ. 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತದೆ. ಸಿಎಂ ಈಗಾಗಲೇ ಕೇಂದ್ರದ ಜೊತೆ ಚರ್ಚೆ ಮಾಡಿದ್ದಾರೆ. ನಮ್ಮ ಪಾಲಿಗೆ ಬರುವ ಲಸಿಕೆಗೂ ಹೆಚ್ಚು ಬೇಡಿಕೆ ಇಡಲಾಗುವುದು.  ದೊಡ್ಡ ದೊಡ್ಡ ಕಂಪನಿಗಳ ಮುಖ್ಯಸ್ಥರ ಸಭೆ ಕರೆದಿದ್ದೇನೆ. ಸಿಎಸ್‌ಆರ್ ಫಂಡ್ ಅಡಿಯಲ್ಲಿ ಲಸಿಕೆ ಸರ್ಕಾರಕ್ಕೆ ಕೊಡಿಸುವ ಕೆಲಸ ಮಾಡುತ್ತೇನೆ.  ಐಟಿ, ಬಿಟಿ ಕಂಪನಿಗಳ ಮುಖ್ಯಸ್ಥರ ಜೊತೆ ಕೂಡ ಚರ್ಚೆ ಮಾಡುತ್ತೇವೆ.  ದೊಡ್ಡ ಪ್ರಮಾಣದಲ್ಲಿ ಲಸಿಕೆ ಲಭ್ಯ ಮಾಡಿಕೊಂಡು, ರಾಜ್ಯಕ್ಕೆ ಶೀಘ್ರವೇ ಲಸಿಕೆ ಪೂರೈಸಲಾಗುವುದು ಎಂದು ತಿಳಿಸಿದರು..

 

ಕೋವಿಡ್-19 ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳು ಮತ್ತು ಅವರ ಕುಟುಂಬ ಸದಸ್ಯರಲ್ಲಿ ಸಕ್ರಿಯ ಕ್ಷಯರೋಗ ಪತ್ತೆಗೆ ಆಗಸ್ಟ್ 16ರಿಂದ 31ರವರೆಗೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದ್ದು ರಾಜ್ಯಾದ್ಯಂತ ಸುಮಾರು 28 ಲಕ್ಷ ಕುಟುಂಬಗಳನ್ನು ತಪಾಸಣೆಗೆ ಒಳಪಡಿಸಲಾಗುವುದು. pic.twitter.com/4GMQSXveut

— Dr Sudhakar K (@mla_sudhakar)

ಪ್ರಧಾನಿಗಳು ಮತ್ತೆ ಎಚ್ಚರದಿಂದ ಇರುವಂತೆ ಎಚ್ಚರಿಕೆ ನೀಡಿದ್ದಾರೆ. 2020-25 ವರ್ಷದಷ್ಟರಲ್ಲಿ ಕ್ಷಯ ರೋಗ ಮುಕ್ತ ದೇಶ ಮಾಡಬೇಕು ಅಂತ ಮೋದಿಯವರು ಕನಸು ಇಟ್ಟುಕೊಂಡಿದ್ದಾರೆ. ಅಮೃತ ಮಹೋತ್ಸವದಲ್ಲಿ ಕೂಡ ಹೇಳಿದ್ದಾರೆ. ಆರೋಗ್ಯ ಕೇಂದ್ರ ಸರಿಪಡಿಸಲು ಪ್ರತೀ ಕೇಂದ್ರಕ್ಕೆ 25 ಲಕ್ಷದಂತೆ 150 ಕೋಟಿ ಹಣ ಬಿಡುಗಡೆ ಮಾಡಲು ಘೋಷಣೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು. 

 ಮೂರನೇ ಅಲೆ ಬಂದರೆ ಮಕ್ಕಳ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗಿದೆ. ಹೊಸ ಕಾರ್ಯಕ್ರಮ ಘೋಷಣೆ ಮಾಡಲಾಗುವುದು. ಆರೋಗ್ಯ ನಂದನ ಹೆಸರಲ್ಲಿ ಯೋಜನೆ ತಯಾರಿ ಮಾಡಿ ಎಲ್ಲಾ ಮಕ್ಕಳಿಗೆ ತಪಾಸಣೆ ಮಾಡಲಾಗುವುದು. ಪೌಷ್ಟಿಕ ಆಹಾರ ನೀಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಯುವ ದಂಪತಿಗಳು ಆತ್ಮಹತ್ಯೆ  : ಮಂಗಳೂರಿನಲ್ಲಿ ಕೋವಿಡ್ ಸೋಂಕು ಪತ್ತೆಯಾದ  ಯುವ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಮನಸ್ಸಿಗೆ ಬಹಳ ಆಘಾತಕಾರಿ ಆಗಿದೆ. ಬಹಳ ಜನ ಯುವಕರು ಇದರಿಂದ ಗುಣಮುಖ ರಾಗಿದ್ದಾರೆ. ಈ ರೀತಿಯ ಆತ್ಮಹತ್ಯೆ ರೀತಿಯ ಕ್ರಮಕ್ಕೆ ಯಾರೂ ಮುಂದಾಗಬಾರದು. ಧೈರ್ಯದಿಂದ ಕೋವಿಡ್ ಅನ್ನು ಎದುರಿಸಬೇಕು. ಸರ್ಕಾರ ನಿಮ್ಮ ಜೊತೆ ಇದೆ, ಯಾವುದೇ ರೀತಿಯ ಆತಂಕ ಬೇಡ ಎಂದು ತಿಳಿಸಿದರು. 

click me!