ಹೆಸರಾಂತ ಚಲನಚಿತ್ರ ನಿರ್ದೇಶಕ ನಾಗಾಭರಣ ಹಾಗೂ ಸಮಾಜ ಸೇವಕ ರಮೇಶ್‌ಬಾಬು ತುಮಕೂರು ವಿವಿಯ ಗೌರವ ಡಾಕ್ಟರೇಟ್‌ಗೆ ಭಾಜನರಾಗಲಿದ್ದಾರೆ. ಆಗಸ್ಟ್ 7 ರಂದು ನಡೆಯಲಿರುವ ವಿವಿ ಘಟಿಕೋತ್ಸವದಲ್ಲಿ ಇವರಿಬ್ಬರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.
ತುಮಕೂರು (ಆ.05): ಹೆಸರಾಂತ ಚಲನಚಿತ್ರ ನಿರ್ದೇಶಕ ನಾಗಾಭರಣ ಹಾಗೂ ಸಮಾಜ ಸೇವಕ ರಮೇಶ್‌ಬಾಬು ತುಮಕೂರು ವಿವಿಯ ಗೌರವ ಡಾಕ್ಟರೇಟ್‌ಗೆ ಭಾಜನರಾಗಲಿದ್ದಾರೆ. ಆಗಸ್ಟ್ 7 ರಂದು ನಡೆಯಲಿರುವ ವಿವಿ ಘಟಿಕೋತ್ಸವದಲ್ಲಿ ಇವರಿಬ್ಬರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಕನ್ನಡ ಸಿನೆಮಾ ಹಾಗೂ ರಂಗಭೂಮಿಗೆ ವಿಶಿಷ್ಟಕೊಡುಗೆ ನೀಡುತ್ತಿರುವ ಟಿ. ಎಸ್. ನಾಗಾಭರಣ ಅವರು 35 ಕ್ಕಿಂತ ಹೆಚ್ಚು ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ. ಅವುಗಳಲ್ಲಿ 22 ಚಲನಚಿತ್ರಗಳು ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.
ಸಂತ ಶಿಶುನಾಳ ಶರೀಫ (1989), ಚಿನ್ನಾರಿ ಮುತ್ತ (1993), ನಾಗಮಂಡಲ (1996), ಸಿಂಗಾರೆವ್ವ (2002), ಕಲ್ಲರಳಿ ಹೂವಾಗಿ (2007), ಅಲ್ಲಮ (2017) ಮುಂತಾದ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ನಾಗಾಭರಣರು ನಮ್ಮ ಸಂಸ್ಕೃತಿಯ ಬೌದ್ಧಿಕ ಹೂರಣವನ್ನು ಕನ್ನಡದ ಕಲಾರಸಿಕರಿಗೆ ಉಣಬಡಿಸಿದ್ದಾರೆ. ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿದ ನಂತರವೂ ಅವರು ತಮ್ಮ ರಂಗಭೂಮಿಯ ಸೇವೆಯನ್ನು ಮುಂದುವರೆಸಿದ್ದಾರೆ.
undefined
ರಾಜ್ಯ ಸರ್ಕಾರವನ್ನು ಜನ ಕಿತ್ತೆಸೆಯಲಿದ್ದಾರೆ: ಗೋವಿಂದ ಕಾರಜೋಳ
ಹಾಗೆಯೇ ಗೌರವ ಡಾಕ್ಟರೇಟ್‌ಗೆ ಭಾಜನರಾಗುತ್ತಿರುವ ರಮೇಶ್‌ಬಾಬು ಸಮಾಜ ಸೇವಕರು ಹಾಗೂ ಕೈಗಾರಿಕೋದ್ಯಮಿಗಳು. ತಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಭಗವಾನ್ ರೈಸ್ ಮಿಲ್, ಭಗವತಿ ಭಗವಾನ್ ರೈಸ್ ಮಿಲ್ ಮತ್ತು ರಾಜಲಕ್ಷಿ ಆಗ್ರೋ ಫುಡ್ಸ್‌ನ ಹೆಮ್ಮೆಯ ಮಾಲೀಕರಾದರು. ಈ ಮೂಲಕ 150 ಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗವನ್ನು ಸೃಷ್ಟಿಸಿದರು. ಅದಕ್ಕಿಂತ ಮುಖ್ಯವಾಗಿ ಒಂದು ಗಿರಣಿಯ ಲಾಭವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ಡಾ. ರಮೇಶ್ ಬಾಬು ಅವರ ಉದ್ಯಮಶೀಲತೆಯ ಕಲ್ಪನೆಯು ಅವರ ವ್ಯವಹಾರದ ಗಡಿಗಳನ್ನು ಕರ್ನಾಟಕದಾಚೆಗೆ ವಿಸ್ತರಿಸಿದೆ ಮತ್ತು ಅವರು ವಿದೇಶಕ್ಕೆ ಅಕ್ಕಿ ರಪ್ತು ಮಾಡುವ ಪ್ರಮುಖರಲ್ಲಿ ಒಬ್ಬರು.
ಲೋಕಸಭೆ ಟಿಕೆಟ್‌ಗೆ ನಾನು ಪ್ರಬಲ ಆಕಾಂಕ್ಷಿ: ಪ್ರಮೋದ್ ಮಧ್ವರಾಜ್
ಕಾಮಧೇನು ಶೈಕ್ಷಣಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷರಾಗಿ 8ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆದಿದ್ದು, 1400 ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯಗಳ ಫಲಾನುಭವಿಗಳಾಗಿದ್ದಾರೆ. ಮುಂದೆ, ಜ್ಞಾನಬುತ್ತಿ ಸತ್ಸಂಗದ ಅಧ್ಯಕ್ಷರಾಗಿ, ಅವರು ವಿಜ್ಞಾನ, ಸಾಹಿತ್ಯ ಮತ್ತು ತತ್ವಶಾಸ್ತ್ರದ ವಿಷಯಗಳ ಕುರಿತು 1400 ಸಾಪ್ತಾಹಿಕ ಉಪನ್ಯಾಸಗಳನ್ನು ಆಯೋಜಿಸಿದ್ದಾರೆ ಮತ್ತು ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೆಮ್ಮೆಯ ಸ್ಥಾನವನ್ನು ಪಡೆದುಕೊಂಡಿದೆ. ರೀಡ್ ಬುಕ್ ಸೇವಾ ಪ್ರಶಸ್ತಿ ಮತ್ತು ಯೋಗ ಸಂಸ್ಕೃತ ವಿಶ್ವವಿದ್ಯಾಲಯ, ಫ್ಲೋರಿಡಾ (ಯುಎಸ್) ನಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.