ಮತ್ತೆ ಪ್ರತಿಭಟನೆ ಸಜ್ಜಾದ ಸಾರಿಗೆ ನೌಕರರು: ಬಸ್‌ ಸಂಚಾರ ಇರುತ್ತಾ? ಇಲ್ವಾ?

By Suvarna NewsFirst Published Feb 28, 2021, 7:19 PM IST
Highlights

ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಕರ್ನಾಟಕ ಸಾರಿಗೆ ನೌಕರರು ಸಜ್ಜಾಗಿದ್ದು, ಬಸ್‌ ಸಂಚಾರದ ಗತಿ ಏನು?

ಬೆಂಗಳೂರು, (ಫೆ.28):  ಕರ್ನಾಟಕ ಸಾರಿಗೆ ನೌಕರರು ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಧರಣಿಯ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

ಈ ಹಿಂದೆ ನಾವು ಪ್ರತಿಭಟನೆ ನಡೆಸಿದ್ದಾಗ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಆದರೆ ಈವರೆಗೆ ಒಂದೂ ಬೇಡಿಕೆಯನ್ನು ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್​ 2ರಂದು ಧರಣಿ ಸತ್ಯಾಗ್ರಹಕ್ಕೆ ಕರೆ ಕೊಡಲಾಗಿದೆ.

ಮತ್ತೆ ಸಿಡಿದೆದ್ದ ಸಾರಿಗೆ ನೌಕರರು: ಸರ್ಕಾರಕ್ಕೆ ಮಾ.15ರ ಡೆಡ್‌ಲೈನ್‌..!

ಈ ಹಿಂದೆ ನಡೆಸಿದ ಧರಣಿ ವೇಳೆ ಸರ್ಕಾರ ಕೊಟ್ಟ ಭರವಸೆ ವಿಳಂಬವಾದ ಹಿನ್ನೆಲೆಯಲ್ಲಿ 6ನೇ ವೇತನ ಆಯೋಗ ಸೇರಿ 9 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ ನಡೆಸುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಫ್ರೀಡಂ ಪಾರ್ಕ್​ನಲ್ಲಿ ನಡೆಯುವ ಧರಣಿ ಸತ್ಯಾಗ್ರಹಕ್ಕೆ ವಾರದ ರಜೆ, ಡ್ಯೂಟಿಗೆ ಹಾಜರಾಗುವವರು, ರಾತ್ರಿ ಡ್ಯೂಟಿ ನಡೆಸುವವರು, ತಪ್ಪದೇ ಹಾಜರಾಗಬೇಕು ಎಂದಿದ್ದಾರೆ.

ಸಾರಿಗೆ ನೌಕರರು ಹೇಳಿದಂತೆ ಪ್ರತಿಭಟನೆಗೆ ಕೈಗೊಂಡರೇ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಎಲ್ಲಾ ಸಾಧ್ಯತೆಗಳಿವೆ. ಕರ್ತವ್ಯಕ್ಕೆ ಸಿಬ್ಬಂದಿಗಳು ಹಾಜರುವ, ಗೈರಾಗುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಕೊಟ್ಟಿಲ್ಲ. ಆದರೂ ಪ್ರಯಾಣಿಕರು ಮಾರ್ಚ್ 2ರಂದು ಬೇರೆ ಊರುಗಳಿಗೆ ತೆರಳುವ ಮುನ್ನ ಸ್ವಲ್ಪ ಯೋಚಿಸಬೇಕು.

click me!