60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ

By Kannadaprabha NewsFirst Published Feb 28, 2021, 8:05 AM IST
Highlights

ಕೇಂದ್ರ ಮಾರ್ಗಸೂಚಿ ಅನ್ವಯ ಮಾ.1 ಸೋಮವಾರದಿಂದ 60 ವರ್ಷ ಮೇಲ್ಪಟ್ಟಹಿರಿಯ ನಾಗರಿಕರು ಮತ್ತು 45ರಿಂದ 59 ವರ್ಷದೊಳಗಿನ ದೀರ್ಘಕಾಲೀನ ಅನಾರೋಗ್ಯ ಪೀಡಿತರಿಗೆ ಕೊರೋನಾ ಲಸಿಕೆ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. 

ಬೆಂಗಳೂರು (ಫೆ.28):  ರಾಜ್ಯ ಸರ್ಕಾರ ಮಾ.1ರಿಂದ ಬಿಬಿಎಂಪಿ ವ್ಯಾಪ್ತಿಯ ಮೂರು ಸರ್ಕಾರಿ ಆಸ್ಪತ್ರೆ, 17 ಖಾಸಗಿ ಆಸ್ಪತ್ರೆ, ತಲಾ ಎರಡು ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜು ಸೇರಿದಂತೆ 24 ಕೊರೋನಾ ಲಸಿಕೆ ಕೇಂದ್ರಗಳಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ.

ಕೇಂದ್ರ ಮಾರ್ಗಸೂಚಿ ಅನ್ವಯ ಮಾ.1 ಸೋಮವಾರದಿಂದ 60 ವರ್ಷ ಮೇಲ್ಪಟ್ಟಹಿರಿಯ ನಾಗರಿಕರು ಮತ್ತು 45ರಿಂದ 59 ವರ್ಷದೊಳಗಿನ ದೀರ್ಘಕಾಲೀನ ಅನಾರೋಗ್ಯ ಪೀಡಿತರಿಗೆ ಕೊರೋನಾ ಲಸಿಕೆ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಅದರಂತೆ ಲಸಿಕೆ ನೀಡಲು ಬಿಬಿಎಂಪಿಯ 24 ಆಸ್ಪತ್ರೆಗಳನ್ನು ಗುರುತಿಸಿದ್ದು, ಮೊದಲ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಅವಕಾಶ ನೀಡಲಾಗಿದೆ.

ಮಾ.1 ರಿಂದ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ಲಭ್ಯ; ಬೆಲೆ ಗೊಂದಲಕ್ಕೆ ತೆರೆ ಎಳೆದ ಸರ್ಕಾರ! .

ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಸೇರಿ ವಾರದ ನಾಲ್ಕು ದಿನ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವಾರದ ಏಳೂ ದಿನ ಲಸಿಕೆ ದೊರೆಯಲಿದೆ. ಮಧ್ಯಾಹ್ನ 12ರಿಂದ ಸಂಜೆ 5ರ ವರೆಗೆ ಲಸಿಕೆ ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳು

1.ಕೆ.ಸಿ.ಜನರಲ್‌ ಆಸ್ಪತ್ರೆ

2.ಜಯನಗರ ಜನರಲ್‌ ಆಸ್ಪತ್ರೆ

3.ಸಿ.ವಿ.ರಾಮನ್‌ ಜನರಲ್‌ ಆಸ್ಪತ್ರೆ

ಸರ್ಕಾರಿ ವೈದ್ಯಕೀಯ ಕಾಲೇಜು

1.ಬೆಂಗಳೂರು ವೈದ್ಯಕೀಯ ಕಾಲೇಜು (ಬಿಎಂಸಿಆರ್‌ಐ)

2.ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ವೈದ್ಯಕೀಯ ಕಾಲೇಜು

ಖಾಸಗಿ ಮೆಡಿಕಲ್‌ ಕಾಲೇಜು

1.ಸಪ್ತಗಿರಿ ಇನ್ಸ್‌ಟೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌

2.ಎಂ.ಎಸ್‌.ರಾಮಯ್ಯ ಮೆಡಿಕಲ್‌ ಕಾಲೇಜು

ಖಾಸಗಿ ಆಸ್ಪತ್ರೆಗಳು

1.ವಿಕ್ರಂ ಆಸ್ಪತ್ರೆ

2.ಮಣಿಪಾಲ್‌ ಆಸ್ಪತ್ರೆ, ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆ

3.ರಾಘವೇಂದ್ರ ಪೀಪಲ್‌ ಟ್ರೀ ಆಸ್ಪತ್ರೆ

4.ಕೊಲಂಬಿಯಾ ಏಷ್ಯಾ, ಯಶವಂತಪುರ

5.ಅಪೊಲೋ, ಶೇಷಾದ್ರಿಪುರ

6.ಸರ್ಜಾಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆ

7.ವೈಟ್‌ಫೀಲ್ಡ್‌ನ ಕೊಲಂಬಿಯಾ ಏಷ್ಯಾ ಆಸ್ಪತ್ರೆ

8.ಕೊಲಂಬಿಯಾ ಏಷ್ಯಾ, ಹೆಬ್ಬಾಳ

9.ಅಪೋಲೋ ಆಸ್ಪತ್ರೆ, ಬನ್ನೇರುಘಟ್ಟರಸ್ತೆ

10.ಫೋರ್ಟಿಸ್‌ ಆಸ್ಪತ್ರೆ, ಬನ್ನೇರುಘಟ್ಟರಸ್ತೆ

11.ಬಿಜಿಎಸ್‌ ಜಿಐಎಂಎಸ್‌ ಆಸ್ಪತ್ರೆ

12.ಏಸ್ಟರ್‌ ಸಿಎಂಐ ಆಸ್ಪತ್ರೆ, ಹೆಬ್ಬಾಳ

13.ಅಪೋಲೋ ಆಸ್ಪತ್ರೆ, ಜಯನಗರ

14.ಸ್ಪಶ್‌ರ್‍ ಆಸ್ಪತ್ರೆ, ಆರ್‌.ಆರ್‌.ನಗರ

15.ದಯಾನಂದ ಸಾಗರ್‌ ಆಸ್ಪತ್ರೆ

16.ಮಲ್ಲಿಗೆ ಆಸ್ಪತ್ರೆ

17.ಸುರಕ್ಷಾ ಆಸ್ಪತ್ರೆ

click me!