ಮನೆ ಬಾಗಿಲಿಗೇ ಬರಲಿದೆ ಡಿಎಲ್, ಆರ್‌ಸಿ ಕಾರ್ಡ್: ಗುಡ್‌ನ್ಯೂಸ್‌ ಕೊಟ್ಟ ಸಚಿವ ರಾಮಲಿಂಗಾರೆಡ್ಡಿ

Published : Aug 19, 2023, 07:52 PM ISTUpdated : Aug 19, 2023, 08:00 PM IST
ಮನೆ ಬಾಗಿಲಿಗೇ ಬರಲಿದೆ ಡಿಎಲ್, ಆರ್‌ಸಿ ಕಾರ್ಡ್: ಗುಡ್‌ನ್ಯೂಸ್‌ ಕೊಟ್ಟ ಸಚಿವ ರಾಮಲಿಂಗಾರೆಡ್ಡಿ

ಸಾರಾಂಶ

ಪ್ರತಿದಿನ ಮುದ್ರಣವಾಗುವ ಚಾಲನಾ ಅನುಜ್ಞಾ ಪತ್ರ (DL) ಮತ್ತು ವಾಹನ ನೋಂದಣಿ ಪ್ರಮಾಣಪತ್ರ (RC) ಸ್ಮಾರ್ಟ್ ಕಾರ್ಡ್ ಗಳನ್ನು ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸಲಾಗುವುದು.

ಬೆಂಗಳೂರು (ಆ.19): ಪ್ರತಿದಿನ ಮುದ್ರಣವಾಗುವ ಚಾಲನಾ ಅನುಜ್ಞಾ ಪತ್ರ (DL) ಮತ್ತು ವಾಹನ ನೋಂದಣಿ ಪ್ರಮಾಣಪತ್ರ (RC) ಸ್ಮಾರ್ಟ್ ಕಾರ್ಡ್ ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆಗೆ ನೇರವಾಗಿ ರವಾನಿಸುವ ಕುರಿತು ಸಾರಿಗೆ  ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಅಂಚೆ ಕಚೇರಿಯೊಂದಿಗೆ ಒಪ್ಪಂದವನ್ನು (MoU) ಮಾಡಿಕೊಂಡರು.

ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾಹನ ಸವಾರರಿಗೆ ಸಾರಿಗೆ ಇಲಾಖೆಯಿಂದ ಸಿಹಿ ಸುದ್ದಿ ನೀಡಲಾಗಿದೆ. ಇನ್ನುಂದೆ ಆರ್.ಸಿ. ಕಾರ್ಡ್‌ (registration certificates (RCs) smart card) ಮತ್ತು ಡಿಎಲ್  ಕಾರ್ಡ್‌ಗಳನ್ನು (Driving license) ಅರ್ಹ ಫಲಾನುಭವಿ ಮನೆಗಳಿಗೆ ನೇರವಾಗಿ ತಲುಪಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಇನ್ನುಮುಂದೆ ಡಿ.ಎಲ್‌, ಆರ್.ಸಿ. ಸ್ಮಾರ್ಟ್‌ ಕಾರ್ಟ್‌ಗಳಿಗಾಗಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್.ಟಿ.ಓ) (Regional Transport Office-RTO) ಕಚೇರಿಗೆ ಅಲೆದಾಡಬೇಕಿಲ್ಲ. ಇವುಗಳನ್ನು ಮನೆಗೆ ತಲುಪಿಸಲು ಸಾರಿಗೆ ಇಲಾಖೆ ವ್ಯವಸ್ಥೆ ಮಾಡಿದೆ. ಪೋಸ್ಟಲ್ ಮೂಲಕವೇ ಮನೆಗಳಿಗೆ ರವಾನೆ ಮಾಡಲು ಈಗಾಗಲೇ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ.

ಬೆಂಗಳೂರು ಮೆಟ್ರೋಗೆ ಕಾಲಿಟ್ಟ ಒನ್‌ ನೇಷನ್‌ ಒನ್‌ ಕಾರ್ಡ್‌: ದೇಶದೆಲ್ಲೆಡೆ ಬಳಸಲು ಅನುಕೂಲ

ಇನ್ನು ಒಪ್ಪಂದದಿಂದಾಗಿ ಸ್ವೀಡ್ ಪೋಸ್ಟ್ (Speed Post) ಮೂಲಕ ಸ್ಮಾರ್ಟ್ ಕಾರ್ಡ್ ಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ನಿಗದಿತ ಸಮಯದಲ್ಲಿ ತಲುಪಿಸಬಹುದಾಗಿದ್ದು, ಸಾರ್ವಜನಿಕರು ಆನ್ ಲೈನ್ ಮೂಲಕ ತಮ್ಮ ದಾಖಲಾತಿಗಳನ್ನು (Document status check on online) ವೀಕ್ಷಿಸಬಹುದಾಗಿದೆ. ಸಾರ್ವಜನಿಕರು ಕಛೇರಿಗೆ ಭೇಟಿ ನೀಡದೆ ಸಂಪರ್ಕರಹಿತ ಮಾದರಿಯಲ್ಲಿ ದಾಖಲಾತಿಗಳನ್ನು ಪಡೆಯಬಹುದಾಗಿದ್ದು, ಇದು ಸಾರಿಗೆ ಇಲಾಖೆಯ ಜನಸ್ನೇಹಿ ಕಾರ್ಯಕ್ರಮವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Transport Minister Ramalingareddy) ತಿಳಿಸಿದರು. ಈ ಸಭೆಯಲ್ಲಿ ಸಾರಿಗೆ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಎನ್.ವಿ. ಪ್ರಸಾದ್, ಸಾರಿಗೆ ಇಲಾಖೆಯ ಆಯುಕ್ತರಾದ ಯೋಗಿಶ್ ಎ.ಎಂ.,  ಮತ್ತು ಚೀಫ್ ಪೋಸ್ಟ್  ಮಾಸ್ಟರ್ ಜನರಲ್ ಉಪಸ್ಥಿತರಿದ್ದರು.

ಮೆಟ್ರೋ ನಿಲ್ದಾಣಗಳಲ್ಲಿ ಸಿಗಲಿದೆ ಎನ್‌ಸಿಎಂಸಿ ಕಾರ್ಡ್: ಬೆಂಗಳೂರು (ಆ.19): ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇನ್ನು ಮುಂದೆ ಒನ್‌ ನೇಷನ್‌ ಒನ್‌ ಕಾರ್ಡ್‌ಗೆ ಅನುಗುಣವಾಗಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಅನ್ನು ಬೆಂಗಳೂರು ಮೆಟ್ರೋ ರೇಲ್‌ ಕಾರ್ಪೋರೇಷನ್‌ ಲಿ. (ಬಿಎಂಆರ್‌ಸಿಎಲ್‌) ಜಾರಿಗೆ ತಂದಿದೆ. ಸೋಮವಾರದಿಂದ ಈ ಕಾರ್ಡ್‌ ಬಳಕೆ ಆರಂಭವಾಗಲಿದೆ. ಈ ಕಾರ್ಡ್‌ ಅನ್ನು ದೇಶದ ಯಾವುದೇ ಮೆಟ್ರೋ ರೈಲಿನಲ್ಲಾದರೂ, ಪೆಟ್ರೋಲ್‌ ಬಂಕ್‌ ಮತ್ತು ರಿಟೇಲ್‌ ಅಂಗಡಿಗಳಲ್ಲಾದರೂ ಬಳಕೆ ಮಾಡಬಹುದಾಗಿದೆ. 

ಪುಸ್ತುತ ಬಳಕೆಯಲ್ಲಿರುವ ಕಾಂಟ್ಯಾಕ್ಟಸ್ ಸ್ಮಾರ್ಟ್ ಕಾರ್ಡ್‌ಗಳು (CSC) ಕ್ಲೋಸ್ ಲೂಪ್ ಕಾರ್ಡ್ ಗಳಾಗಿದ್ದು, ನಮ್ಮ ಮೆಟ್ರೋ ಪ್ರಯಾಣದಲ್ಲಿ ಮಾತ್ರ ಬಳಸಬಹುದಾಗಿದೆ. "ಒನ್ ನೇಷನ್ ಒನ್ ಕಾರ್ಡ್" ಗೆ ಅನುಗುಣವಾಗಿ ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ತೆರೆದ ಲೂಪ್ ಕಾರ್ಡ್ ಗಳಾಗಿದ್ದು, ಈ ಕಾರ್ಡನ್ನು ದೇಶದ ಎಲ್ಲಾ ಸಾರಿಗೆ ವ್ಯವಸ್ಥೆಗಳಲ್ಲಿ ಹಾಗೂ ಹೆಚ್ಚುವರಿಯಾಗಿ, ರಿಟೇಲ್ ಅಂಗಡಿ, ಪೆಟ್ರೋಲ್ ಬಂಕ್‌ಗಳು, ಶಾಪಿಂಗ್ ಇತ್ಯಾದಿ ಅಗತ್ಯಗಳಿಗಾಗಿ ಬಳಸಲು ಅನುಕೂಲಕರವಾಗಿರುತ್ತದೆ.

ಮಾಜಿ ರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್‌ರಂತೆ, ಬೆಳ್ಳಿ ಸಾರೋಟಿನಲ್ಲಿ ಶಿಕ್ಷಕಿ ಮೆರವಣಿಗೆ ಮಾಡಿದ ವಿದ್ಯಾರ್ಥಿಗಳು

ಎನ್‌ಸಿಎಂಸಿ ಕಾರ್ಡ್ ಅಂದ್ರೆ ಏನು?
* ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್
* ಒನ್ ನೇಷನ್ ಒನ್ ಕಾರ್ಡ್ ಅನುಗುಣವಾಗಿ ರೆಡಿಯಾಗಿರುವ ತೆರೆದ ಲೂಪ್ ಕಾರ್ಡ್ ಇದಾಗಿದೆ
* ಈ ಕಾರ್ಡ್ ನ್ನ ದೇಶದ ಎಲ್ಲಾ ಸಾರಿಗೆ ವ್ಯವಸ್ಥೆಯಲ್ಲಿ ಬಳಸಬಹುದು
* ಜೊತೆಗೆ ರಿಟೇಲ್  ಅಂಗಡಿ, ಪೆಟ್ರೋಲ್ ಬಂಕ್ , ಶಾಪಿಂಗ್ ಗಾಗಿಯೂ ಬಳಸಬಹುದು

ಎನ್‌ಸಿಎಂಸಿ ಕಾರ್ಡ್ ಪಡೆಯುವುದು ಹೇಗೆ?
* ಪ್ರಯಾಣಿಕರು ಗ್ರಾಹಕರ ವಿವರಗಳನ್ನು (kyc) NAMMAMETROAGSINDI.COM ವೆಬ್ ಸೈಟ್ ಅಥವಾ
* BMRCL RBL Bank NCMC ಮೊಬೈಲ್ ಅಪ್ಲಿಕೇಶನ್ ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬೇಕು
* ನೋಂದಣಿ ಸಂಖ್ಯೆ/ ನೋಂದಾಯಿತ ಸಂಖ್ಯೆಯನ್ನು ಟಿಕೆಟ್ ಕೌಂಟರ್ ನಿರ್ವಾಹಕರಿಗೆ ತಿಳಿಸಬೇಕು
* ಕಾರ್ಡ್ ಗೆ 50 ರೂಪಾಯಿ ಚಾರ್ಜ್ ಮಾಡಲು ನಿರ್ಧಾರ
* ರೂಪೇ ಕಾಮನ್ ಮೊಬಿಲಿಟಿ ಕಾರ್ಡ್ ಗಳು ಎಲ್ಲ RBL ಬ್ಯಾಂಕ್ ಶಾಖೆಗಳಲ್ಲೂ ತೆಗೆದುಕೊಳ್ಳಬಹುದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೇವೆಯಲ್ಲಿಯೇ ಸಾರ್ಥಕತೆ ಪಡೆಯುವ ಗೃಹ ರಕ್ಷಕರು
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್