ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇನ್ನು ಮುಂದೆ ಒನ್ ನೇಷನ್ ಒನ್ ಕಾರ್ಡ್‌ಗೆ ಅನುಗುಣವಾಗಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಅನ್ನು ಬಿಎಂಆರ್‌ಸಿಎಲ್ ಜಾರಿಗೆ ತಂದಿದೆ.
ಬೆಂಗಳೂರು (ಆ.19): ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇನ್ನು ಮುಂದೆ ಒನ್ ನೇಷನ್ ಒನ್ ಕಾರ್ಡ್‌ಗೆ ಅನುಗುಣವಾಗಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಅನ್ನು ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಷನ್ ಲಿ. (ಬಿಎಂಆರ್‌ಸಿಎಲ್) ಜಾರಿಗೆ ತಂದಿದೆ. ಸೋಮವಾರದಿಂದ ಈ ಕಾರ್ಡ್ ಬಳಕೆ ಆರಂಭವಾಗಲಿದೆ. ಈ ಕಾರ್ಡ್ ಅನ್ನು ದೇಶದ ಯಾವುದೇ ಮೆಟ್ರೋ ರೈಲಿನಲ್ಲಾದರೂ, ಪೆಟ್ರೋಲ್ ಬಂಕ್ ಮತ್ತು ರಿಟೇಲ್ ಅಂಗಡಿಗಳಲ್ಲಾದರೂ ಬಳಕೆ ಮಾಡಬಹುದಾಗಿದೆ.
ಪುಸ್ತುತ ಬಳಕೆಯಲ್ಲಿರುವ ಕಾಂಟ್ಯಾಕ್ಟಸ್ ಸ್ಮಾರ್ಟ್ ಕಾರ್ಡ್‌ಗಳು (CSC) ಕ್ಲೋಸ್ ಲೂಪ್ ಕಾರ್ಡ್ ಗಳಾಗಿದ್ದು, ನಮ್ಮ ಮೆಟ್ರೋ ಪ್ರಯಾಣದಲ್ಲಿ ಮಾತ್ರ ಬಳಸಬಹುದಾಗಿದೆ. "ಒನ್ ನೇಷನ್ ಒನ್ ಕಾರ್ಡ್" ಗೆ ಅನುಗುಣವಾಗಿ ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ತೆರೆದ ಲೂಪ್ ಕಾರ್ಡ್ ಗಳಾಗಿದ್ದು, ಈ ಕಾರ್ಡನ್ನು ದೇಶದ ಎಲ್ಲಾ ಸಾರಿಗೆ ವ್ಯವಸ್ಥೆಗಳಲ್ಲಿ ಹಾಗೂ ಹೆಚ್ಚುವರಿಯಾಗಿ, ರಿಟೇಲ್ ಅಂಗಡಿ, ಪೆಟ್ರೋಲ್ ಬಂಕ್‌ಗಳು, ಶಾಪಿಂಗ್ ಇತ್ಯಾದಿ ಅಗತ್ಯಗಳಿಗಾಗಿ ಬಳಸಲು ಅನುಕೂಲಕರವಾಗಿರುತ್ತದೆ.
undefined
ಚಿನ್ನದ ಟ್ರಾಲಿ ಬ್ಯಾಗ್ ತಂದ ದುಬೈ ಪ್ರಯಾಣಿಕ: ನಟ್ಟು, ಬೋಲ್ಟ್, ಸ್ಕ್ರೂ ಎಲ್ಲವೂ ಪ್ಯೂರ್ ಗೋಲ್ಡ್
ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಆ.21ರಿಂದ ಮಾರಾಟಕ್ಕೆ ಲಭ್ಯ: ಬೆಂಗಳೂರಿನ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಆ.21ರಿಂದ ರುಪೇ ಎನ್‌ಸಿಎಂಸಿ ಕಾರ್ಡ್‌ಗಳು ಖರೀದಿಗೆ ಲಭ್ಯವಿರುತ್ತದೆ. ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಮೆಟ್ರೋ ನಿಲ್ದಾಣಗಳಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ ಮತ್ತು ಕಾಂಟ್ಯಾಕ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳು (CSC) ಬೆಳಿಗ್ಗೆ 8.00 ಗಂಟೆಯಿಂದ 11.00 ಗಂಟೆಯವರೆಗೆ ಮತ್ತು ಸಂಜೆ 5.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ಮಾತ್ರ ಮಾರಾಟಕ್ಕೆ ಲಭ್ಯವಿರುತ್ತದೆ.
ಎನ್‌ಸಿಎಂಸಿ ಕಾರ್ಡ್ ಅಂದ್ರೆ ಏನು?
* ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್
* ಒನ್ ನೇಷನ್ ಒನ್ ಕಾರ್ಡ್ ಅನುಗುಣವಾಗಿ ರೆಡಿಯಾಗಿರುವ ತೆರೆದ ಲೂಪ್ ಕಾರ್ಡ್ ಇದಾಗಿದೆ
* ಈ ಕಾರ್ಡ್ ನ್ನ ದೇಶದ ಎಲ್ಲಾ ಸಾರಿಗೆ ವ್ಯವಸ್ಥೆಯಲ್ಲಿ ಬಳಸಬಹುದು
* ಜೊತೆಗೆ ರಿಟೇಲ್ ಅಂಗಡಿ, ಪೆಟ್ರೋಲ್ ಬಂಕ್ , ಶಾಪಿಂಗ್ ಗಾಗಿಯೂ ಬಳಸಬಹುದು
ಅಮೇರಿಕಾದಲ್ಲಿ ಕನ್ನಡದ ಕುಟುಂಬ ದಾರುಣ ಸಾವು: ಗಂಡ, ಹೆಂಡ್ತಿ ಮಗು ಮೃತ
ಎನ್‌ಸಿಎಂಸಿ ಕಾರ್ಡ್ ಪಡೆಯುವುದು ಹೇಗೆ?
* ಪ್ರಯಾಣಿಕರು ಗ್ರಾಹಕರ ವಿವರಗಳನ್ನು (kyc) NAMMAMETROAGSINDI.COM ವೆಬ್ ಸೈಟ್ ಅಥವಾ
* BMRCL RBL Bank NCMC ಮೊಬೈಲ್ ಅಪ್ಲಿಕೇಶನ್ ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬೇಕು
* ನೋಂದಣಿ ಸಂಖ್ಯೆ/ ನೋಂದಾಯಿತ ಸಂಖ್ಯೆಯನ್ನು ಟಿಕೆಟ್ ಕೌಂಟರ್ ನಿರ್ವಾಹಕರಿಗೆ ತಿಳಿಸಬೇಕು
* ಕಾರ್ಡ್ ಗೆ 50 ರೂಪಾಯಿ ಚಾರ್ಜ್ ಮಾಡಲು ನಿರ್ಧಾರ
* ರೂಪೇ ಕಾಮನ್ ಮೊಬಿಲಿಟಿ ಕಾರ್ಡ್ ಗಳು ಎಲ್ಲ RBL ಬ್ಯಾಂಕ್ ಶಾಖೆಗಳಲ್ಲೂ ತೆಗೆದುಕೊಳ್ಳಬಹುದು