ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಸೇರಿದಂತೆ 23 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು (ಜು.06): ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಸೇರಿದಂತೆ 23 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮುಡಾ ಹಗರಣ ಬಹಿರಂಗಗೊಂಡ ಬೆನ್ನಲ್ಲೇ ರಾಜೇಂದ್ರ ಅವರ ವರ್ಗಾವಣೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಜೇಂದ್ರ ಅವರನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಈ ರೀತಿ ಇದೆ.
ಡಾ.ವಿ.ರಾಮ್ ಪ್ರಸಾತ್ ಮನೋಹರ್ - ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮತ್ತು ಹೆಚ್ಚುವರಿಯಾಗಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ. ನಿತೀಶ್ ಪಾಟೀಲ್ - ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿರ್ದೇಶಕ. ಡಾ.ಅರುಂಧತಿ ಚಂದ್ರಶೇಖರ್-ಪಂಚಾಯತ್ ರಾಜ್ ಇಲಾಖೆ ಆಯುಕ್ತೆ. ಕೆ.ಜ್ಯೋತಿ - ಜವಳಿ ಅಭಿವೃದ್ಧಿ ಆಯುಕ್ತೆ ಮತ್ತು ಕೈಮಗ್ಗ ನಿರ್ದೇಶಕಿ. ಸಿ.ಎನ್.ಶ್ರೀಧರ್ - ಸಾಮಾಜಿಕ ಲೆಕ್ಕ ಪರಿಶೋಧನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕ.
undefined
ಡಾ.ಕೆ.ವಿ.ರಾಜೇಂದ್ರ- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ. ಎಲ್.ಚಂದ್ರಶೇಖರ ನಾಯಕ್ - ವಾಣಿಜ್ಯ ತೆರಿಗೆ ಇಲಾಖೆ (ಜಾರಿ ನಿರ್ದೇಶನಾಲಯ) ಹೆಚ್ಚುವರಿ ಆಯುಕ್ತ, ವಿಜಯ ಮಹಾಂತೇಶ ಬಿ. ದಾನಮ್ಮನವರ್- ಹಾವೇರಿ ಜಿಲ್ಲಾಧಿಕಾರಿ. ಗೋವಿಂದ ರೆಡ್ಡಿ-ಗದಗ ಜಿಲ್ಲಾಧಿಕಾರಿ. ರಘುನಂದನ್ ಮೂರ್ತಿ-ಖಜಾನೆ ಆಯುಕ್ತ. ಡಾ.ಜಿ.ಎಂ.ಗಂಗಾಧರಸ್ವಾಮಿ-ದಾವಣಗೆರೆ ಜಿಲ್ಲಾಧಿಕಾರಿ. ಲಕ್ಷೀಕಾಂತ್ ರೆಡ್ಡಿ-ಮೈಸೂರು ಜಿಲ್ಲಾಧಿಕಾರಿ. ಕೆ.ನಿತೀಶ್-ರಾಯಚೂರು ಜಿಲ್ಲಾಧಿಕಾರಿ. ಮೊಹಮದ್ ರೋಷನ್-ಬೆಳಗಾವಿ ಜಿಲ್ಲಾಧಿಕಾರಿ. ಶಿಲ್ಪಾ ಶರ್ಮಾ-ಬೀದರ್ ಜಿಲ್ಲಾಧಿಕಾರಿ. ಡಾ.ದಿಲೀಶ್ ಸಸಿ-ಸಿಇಓ ಇ-ಆಡಳಿತ ಕೇಂದ್ರ, ಲೋಖಂಡೆ ಸ್ನೇಹಲ್ ಸುಧಾಕರ್- ಕರ್ನಾಟಕ ವಿದ್ಯುತ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ.
ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ: ಎಸ್‌ಐಟಿಗೆ ಹೈಕೋರ್ಟ್ ನೋಟಿಸ್
ಶ್ರೀರೂಪಾ-ಪಶುಸಂಗೋಪನಾ ಮತ್ತು ಪಶು ವೈದ್ಯಕೀಯ ಇಲಾಖೆ ಆಯುಕ್ತೆ ಮತ್ತು ಹೆಚ್ಚುವರಿಯಾಗಿ ರೇಷ್ಮೆ ಕೃಷಿ ಸಂಶೋಧನೆ ಅಭಿವೃದ್ಧಿ ಸಂಸ್ಥೆ ನಿರ್ದೇಶಕಿ. ಗಿಟ್ಟೆ ಮಾಧವ್ ವಿಠ್ಠಲ್ ರಾವ್- ಬಾಗಲಕೋಟೆಯ ಪುನರ್ವಸತಿ ಕೇಂದ್ರ ವ್ಯವಸ್ಥಾಪಕ ನಿರ್ದೇಶಕ. ಎನ್.ಹೇಮಂತ್-ಶಿವಮೊಗ್ಗ ಜಿಲ್ಲಾಪಂಚಾಯತ್ ಸಿಇಒ, ನಾಂಗ್ಜಾಲ್ ಮಹ್ಮದ್ ಅಲಿ ಅಕ್ರಮ ಶಾ-ವಿಜಯನಗರ ಜಿ.ಪಂ.ಸಿಇಒ, ಬಿ. ಶರತ್- ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ವ್ಯವಸ್ಥಾಪಕ ನಿರ್ದೇಶಕ, ಸೆಲ್ವಮಣಿ-ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.