
ಕನ್ನಡ ಸಾಹಿತ್ಯವು ಶತಮಾನಗಳಿಂದ ತನ್ನ ವೈವಿಧ್ಯಮಯತೆ ಮತ್ತು ಆಳವಾದ ಚಿಂತನೆಗಳ ಮೂಲಕ ಅಪಾರವಾದ ಗಮನಸೆಳೆದಿದೆ. ಈ ಲೇಖನದಲ್ಲಿ ಕನ್ನಡಾಭಿಮಾನಿಗಳು ಓದಲೇ ಬೇಕಾದ ಪ್ರಮುಖ 10 ಕನ್ನಡ ಪುಸ್ತಕಗಳ ವಿವರವನ್ನು ನೀಡಲಾಗಿದೆ. ಇವು ನಿಮ್ಮ ಜೀವನಕ್ಕೆ ಪ್ರೇರಣೆ ನೀಡುವ, ದೃಷ್ಟಿಕೋನ ಬದಲಾಯಿಸುವ ಹಾಗೂ ಮಾರ್ಗದರ್ಶನ ನೀಡುವ ಕೃತಿಗಳಾಗಿವೆ. ಇದರಲ್ಲಿರುವ ಕೆಲವು ಕೃತಿಗಳು ನಿಮಗಿಷ್ಟವಾಗದೇ ಇರಬಹುದು. ಆದರೆ ಮೆಚ್ಚುಗೆ ಪಡೆದ ಪುಸ್ತಗಳಲ್ಲಿ ಕೆಲವನ್ನು ಆಯ್ದು ನೀಡಲಾಗಿದೆ. ಹಾಗೆಯೇ ಇಷ್ಟೇ ಇಲ್ಲದೆ ಹಲವರ ಬದುಕಿಗೆ ಪ್ರೇರಣೆಯಾಗಿರುವ ಪುಸ್ತಗಳು ಇನ್ನೂ ಹಲವಿದೆ. ಇಲ್ಲಿ ಆಯ್ದ ಪುಸ್ತಕಗಳನ್ನಷ್ಟೇ ನೀಡಲಾಗಿದೆ. ನಿಮಗಿಷ್ಟದ ಪುಸ್ತಕ ಯಾವುದೆಂದು ಕಮೆಂಟ್ ಮಾಡಿ.
ತಾಯಂದಿರ ಪ್ರೀತಿಯ ಎಂಟು ಸುಳ್ಳುಗಳ ಬಗ್ಗೆ ಈ ಕೃತಿ ಕಣ್ಣೀರಬರಿಸಿದಂತೆ ವಿವರಿಸುತ್ತದೆ. ಜೀವನದ ಸವಾಲುಗಳನ್ನು ಎದುರಿಸಲು ಸ್ಪೂರ್ತಿದಾಯಕ ಕಥೆಗಳನ್ನು ಹೊಂದಿದ್ದು, 2009ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದೆ.
ಬದುಕನ್ನು ಹೇಗೆ ಬೆಳೆಸಬೇಕು ಎಂಬುದನ್ನು ಮಾರ್ಗದರ್ಶನ ನೀಡುವ ಈ ಕೃತಿ ಮೈಸೂರಿನ ರಾಮಕೃಷ್ಣಾಶ್ರಮದ ಹಿರಿಯ ಸ್ವಾಮೀಜಿಯವರಿಂದ ಬರೆಯಲಾಗಿದೆ. ಈ ಕೃತಿ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ.
ನಿಜ ಜೀವನದ ಸನ್ನಿವೇಶಗಳಾಧಾರಿತ ಸಣ್ಣ ಕಥೆಗಳ ಮೂಲಕ, ಜೀವನ ಪಾಠಗಳನ್ನು ಕಲಿಸುವ ಕೃತಿ. ಯುವಜನರಿಗೆ ಧೈರ್ಯ, ತಾಳ್ಮೆ ಮತ್ತು ಆತ್ಮವಿಶ್ವಾಸ ನೀಡುತ್ತದೆ.
ಶಿಕ್ಷಕ, ತತ್ವಜ್ಞಾನಿ ಗುರುರಾಜ ಕರಜಗಿಯವರು ಬರೆದ ಈ ಪುಸ್ತಕಗಳ ಸರಣಿ ಶಿಕ್ಷಣ, ಜೀವನದ ಮೌಲ್ಯಗಳು ಮತ್ತು ಆತ್ಮಪರಿಶೀಲನೆ ಕುರಿತ ವಿಷಯಗಳನ್ನು ಒಳಗೊಂಡಿದೆ.
ಬದುಕಿನ ಸೋಲುಗಳು, ನೋವುಗಳು, ನಿರಾಶೆಗಳನ್ನು ಹೇಗೆ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎಂಬುದನ್ನು ಓದುಗರಿಗೆ ಬೋಧಿಸುವ ಲೇಖನ ಸಂಕಲನ.
ಅಪ್ಪಂದಿರ ಪ್ರೀತಿ, ತ್ಯಾಗದ ಬಗ್ಗೆ ಕಥೆಗಳಿರುವ ಈ ಕೃತಿ ಮಕ್ಕಳಿಗೆ ಅಪ್ಪನ ಮಹತ್ವವನ್ನು ಕಲಿಸುತ್ತದೆ. ಈ ಕೃತಿಯು ಜ. 1, 2022ರಂದು ಪ್ರಕಟವಾಗಿದೆ.
ಮೂವರು ತಲೆಮಾರುಗಳ ಕಥನದ ಮೂಲಕ ಜೀವನದ ಅರ್ಥ, ಅಸ್ತಿತ್ವ, ಮತ್ತು ಸತ್ಯವನ್ನು ಹುಡುಕುವ ಈ ಕಾದಂಬರಿ ಪ್ರಬಲ ಸಂದೇಶವನ್ನು ಒಳಗೊಂಡಿದೆ.
ಆತ್ಮಅನ್ವೇಷಣೆ ಮತ್ತು ಅಸ್ತಿತ್ವ ಹುಡುಕುವ ಕಥೆಯೊಂದಿಗೆ ಓದುಗರನ್ನು ಆಂತರಿಕ ಪರಿಶೀಲನೆಯತ್ತ ಕರೆಸುವ ಕಾದಂಬರಿ.
"The Monk Who Sold His Ferrari" ಕನ್ನಡ ಅನುವಾದ ಫೆರಾರಿ ಮಾರಿದ ಫಕೀರ ಈ ಕೃತಿಯಲ್ಲಿ, ಜೀವನದ ಮೌಲ್ಯಗಳು ಮತ್ತು ನೈತಿಕ ಯಶಸ್ಸಿನ ಬಗ್ಗೆ ಸ್ಪೂರ್ತಿದಾಯಕ ಕಥೆ ಇದೆ.
ಮನಸ್ಸಿನ ಸ್ಥಿತಿಯನ್ನು ಸುಧಾರಿಸಿಕೊಳ್ಳುವ ಉಪಾಯಗಳನ್ನೊಳಗೊಂಡಿರುವ ಈ ಕೃತಿ, ಒತ್ತಡದ ಜೀವನದಲ್ಲಿ ಶಾಂತಿಗೆ ಮಾರ್ಗದರ್ಶಿ.
ನಗರದ ಯುವಕನೊಬ್ಬ ಹಳ್ಳಿಯ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳುವ ಕಥೆಯನ್ನು ಹೇಳುವ ಕಾದಂಬರಿ. ಈ ಕಥೆಯಿಂದ ಸಂಬಂಧಗಳ ಮಹತ್ವ ಮತ್ತು ಮೂಲ್ಯಗಳನ್ನು ಓದುಗರಿಗೆ ಮನಪಡುವ ಮಾಡುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ