ಕೋಲಾರದಲ್ಲಿ 1 ಬಾಕ್ಸ್‌ ಟೊಮೆಟೊ 2,700 ದಾಖಲೆ ಬೆಲೆಗೆ ಮಾರಾಟ!

By Kannadaprabha News  |  First Published Aug 1, 2023, 4:00 AM IST

ಕೋಲಾರದ ಎಂಪಿಎಂಸಿಯಲ್ಲಿ ಸೋಮವಾರ 15 ಕೇಜಿಯ ಟೊಮೆಟೊ ಬಾಕ್ಸ್‌ 2,700 ರು. ಸಾರ್ವಕಾಲಿಕ ದಾಖಲೆ ಬೆಲೆಗೆ ಹರಾಜಾಗಿದೆ. 77 ಬಾಕ್ಸ್‌ ಟೊಮೆಟೊವನ್ನು ಸಿಎಂಆರ್‌ ಮಂಡಿ ಮಾಲೀಕ ಶ್ರೀನಾಥ್‌ ಎಂಬುವವರು ಹರಾಜಿನಲ್ಲಿ ಪ್ರತಿಬಾಕ್ಸ್‌ಗೆ 2700 ರು. ನಂತೆ ಖರೀದಿಸಿದ್ದಾರೆ. '


ಕೋಲಾರ (ಆ.01): ಕೋಲಾರದ ಎಂಪಿಎಂಸಿಯಲ್ಲಿ ಸೋಮವಾರ 15 ಕೇಜಿಯ ಟೊಮೆಟೊ ಬಾಕ್ಸ್‌ 2,700 ರು. ಸಾರ್ವಕಾಲಿಕ ದಾಖಲೆ ಬೆಲೆಗೆ ಹರಾಜಾಗಿದೆ. 77 ಬಾಕ್ಸ್‌ ಟೊಮೆಟೊವನ್ನು ಸಿಎಂಆರ್‌ ಮಂಡಿ ಮಾಲೀಕ ಶ್ರೀನಾಥ್‌ ಎಂಬುವವರು ಹರಾಜಿನಲ್ಲಿ ಪ್ರತಿಬಾಕ್ಸ್‌ಗೆ 2700 ರು. ನಂತೆ ಖರೀದಿಸಿದ್ದಾರೆ. 15 ಕೆ.ಜಿ ಟೊಮೆಟೊ ಬಾಕ್ಸ್‌ ಸರಾಸರಿ 1000 ರು.ನಿಂದ 2,500ವರೆಗೆ ಮಾರಾಟವಾಗಿದ್ದು, ಗುಣಮಟ್ಟದಿಂದ ಕೂಡಿದ ಟೊಮೆಟೊ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟವಾಯಿತು. 

ಅದರಲ್ಲಿ ನಮ್ಮ ಮಂಡಿಯಲ್ಲಿ 77 ಬಾಕ್ಸ್‌ ಟೊಮೆಟೊ ತಲಾ 2,700 ರೂ. ರಂತೆ ಹರಾಜಾಗಿದೆ. ಈ ದರ ಸಾರ್ವಕಾಲಿಕ ದಾಖಲೆ ಎಂದು ಸಿಎಂಆರ್‌ ಮಂಡಿ ಮಾಲೀಕ ಸಿಎಂಆರ್‌ ಶ್ರೀನಾಥ್‌ ಹೇಳಿದರು. ಜೆ.ಕೆ.ಮಂಡಿಯಲ್ಲಿ ಇನ್ನು 145 ಬಾಕ್ಸ್‌ ಟೊಮೆಟೊ ತಲಾ 2,400 ರೂ.ನಂತೆ ಹರಾಜಾಗಿದ್ದು, ಕೆಎನ್‌ಎಸ್‌ ಮಂಡಿಯಲ್ಲಿ 120 ಬಾಕ್ಸ್‌ ಹಾಗೂ ಕೆಎನ್‌ಎನ್‌ ಮಂಡಿಯಲ್ಲಿ 74 ಬಾಕ್ಸ್‌ ಟೊಮೆಟೊ ತಲಾ 2,320 ರೂ.ನಂತೆ ಮಾರಾಟವಾಗಿದೆ.

Latest Videos

undefined

ನಗರಸಭೆಯ ಭ್ರಷ್ಟಾಚಾರ ಕ್ಲೀನ್‌ ಮಾಡುವೆ: ಶಾಸಕ ಪ್ರದೀಪ್‌ ಈಶ್ವರ್‌

ಆಸಿಡ್‌ ಸುರಿದು ಟೊಮೆಟೊ ಬೆಳೆ ನಾಶ: ತಾಲೂಕಿನ ಹಂಗ್ರಾಪುರ ಗ್ರಾಮದಲ್ಲಿ ದುಷ್ಕರ್ಮಿಗಳು ಟೊಮೆಟೊ ಗಿಡಗಳಿಗೆ ಆಸಿಡ್‌ ಸುರಿದು ಬೆಳೆ ನಾಶ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಗ್ರಾಮದ ಮಹದೇವಸ್ವಾಮಿ ಅವರು 20 ಗುಂಟೆ ಜಮೀನಿನಲ್ಲಿ ಸುಮಾರು 2000 ಟೊಮೆಟೊ ಗಿಡಗಳನ್ನು ನಾಟಿ ಮಾಡಿದ್ದರು. ಇತ್ತೀಚಿಗೆ 2 ಬಾರಿ ಟೊಮೆಟೊ ಹಣ್ಣುಗಳಿಂದ ಕಟಾವು ಮಾಡಲಾಗಿತ್ತು. ಪ್ರಸ್ತುತ ಕ್ರೇಟ್‌ ಟೊಮೆಟೊಗೆ 1500ರಿಂದ 2000 ಬೆಲೆ ಇದ್ದು, ಒಮ್ಮೆ ಸುಮಾರು 12 ಕ್ರೇಟ್‌ಗಳ ಹಣ್ಣುಗಳನ್ನು ದುಷ್ಕರ್ಮಿಗಳು ಕದ್ದು ಪರಾರಿಯಾಗಿದ್ದರು.

ಇದ್ದರಿಂದ ಎಚ್ಚೆತ್ತ ರೈತ ಮಹದೃವಸ್ವಾಮಿ ರಾತ್ರಿ ವೇಳೆ ಟೊಮೆಟೊ ಕಾವಲಿಗೆ ಮುಂದಾಗಿದರು. ಕೆಲ ದಿನಗಳ ಹಿಂದೆ ಹಣ್ಣು ಕಟಾವು ಮಾಡಿ ತಮಿಳುನಾಡಿನ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದ ವೇಳೆ ರಾತ್ರಿ ವೇಳೆ ತೋಟಕ್ಕೆ ಬಂದ ದುಷ್ಕರ್ಮಿಗಳು ಟೊಮೆಟೊ ಗಿಡಗಳ ಬುಡಕ್ಕೆ ಆ್ಯಸಿಡ್‌ ಮಿಶ್ರಿತ ನೀರು ಸುರಿದು ಗಿಡಗಳ ನಾಶ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ಟೊಮ್ಯಾಟೊಗೆ ಸಿಸಿ ಕ್ಯಾಮೆರ ಕಣ್ಗಾವಲು: ಇತ್ತೀಚೆಗೆ ದೇಶದಲ್ಲಿ ಟೊಮ್ಯಾಟೊ ಬೆಲೆ ಭಾರಿ ಏರಿಕೆಯಾಗಿದ್ದು, ಟೊಮ್ಯಾಟೊ ಬೆಳೆದ ರೈತರಿಗೆ ಹೆಚ್ಚು ಹೆಚ್ಚು ಆದಾಯ ಬರುತ್ತಿದ್ದರೆ ಅತ್ತ ಗ್ರಾಹಕರು ಸಂಕಷ್ಟಕ್ಕೀಡಾಗಿದ್ದಾರೆ. ಈ ಮಧ್ಯೆ ಟೊಮ್ಯಾಟೋ ಬೆಳೆದ ರೈತರಿಗೆ ಕಳ್ಳಕಾಕರ ಕಾಟ ಜಾಸ್ತಿಯಾಗಿದ್ದು ಈ ಹಿನ್ನೆಲೆಯಲ್ಲಿ ಹಲವೆಡೆ ಸಿಸಿ ಕ್ಯಾಮೆರಾ ಗಳನ್ನು ಆಳವಡಿಸಿದ್ದನ್ನ ನೋಡಿದ್ದೇವೆ. ಟೊಮ್ಯಾಟೊಗೆ ಸಿಸಿ ಕ್ಯಾಮೆರ ಕಣ್ಗಾವಲು ಹಾಕಲಾಗಿದೆ. ಹೌದು ಇದೀಗ ತಾಲೂಕಿನ ಕುಪ್ಪೆ ಗ್ರಾಮದಲ್ಲಿ ರೈತ ಸಹೋದರರು ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. 

ಮೈದುಂಬಿದ ಗಗನಚುಕ್ಕಿ, ಭರಚುಕ್ಕಿ ಜಲಪಾತ: ಹರಿದು ಬಂದ ಜನಸಾಗರ

ಟೊಮೆಟೊ ಕಳ್ಳತನ ಹೆಚ್ಚಿದ ಹಿನ್ನೆಲೆ ಗ್ರಾಮದ ನಾಗೇಶ್‌ ಮತ್ತು ಕೃಷ್ಣ ಎಂಬ ಸಹೋದರು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ. ಸಹೋದರರಿಬ್ಬರು ಒಟ್ಟು 10 ಎಕರೆ ಜಮೀನು ಹೊಂದಿದ್ದು, ಮೂರೂವರೆ ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆ ಬೆಳೆದಿದ್ದಾರೆ. ಟೊಮೆಟೊ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಕಳ್ಳತನ ಮಾಡಲು ಬಂದ ಇಬ್ಬರನ್ನು ಹಿಡಿದು ಸಹೋದರರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿನ್ನೆಲೆ ಜಮೀನಿನಲ್ಲಿ ಎರಡು ಸಿಸಿ ಕ್ಯಾಮೆರಾ ಅಳವಡಿಸಿದ್ದು, ಅದನ್ನ ಮೊಬೈಲ್‌ ಫೋನ್‌ ಗೆ ಕನೆಕ್ಟ್ ಮಾಡಿಕೊಂಡಿದ್ದಾರೆ.

click me!