ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ‌ ಕ್ಲೀನ್ ಮಾಡಿಸಿದ ಪ್ರಕರಣ; ಕೇಸ್ ಮುಚ್ಚಿಹಾಕಲು ಯತ್ನ: ಸಂಸದ ನಾರಾಯಣಸ್ವಾಮಿ ಆರೋಪ

Published : Dec 18, 2023, 11:26 AM IST
ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ‌ ಕ್ಲೀನ್ ಮಾಡಿಸಿದ ಪ್ರಕರಣ; ಕೇಸ್ ಮುಚ್ಚಿಹಾಕಲು ಯತ್ನ: ಸಂಸದ ನಾರಾಯಣಸ್ವಾಮಿ ಆರೋಪ

ಸಾರಾಂಶ

ಶಾಲಾ ಮಕ್ಕಳನ್ನು ಮಲದಗುಂಡಿಗೆ ಇಳಿಸಿದ ಪ್ರಕರಣವನ್ನು ರಾಜ್ಯ ಸರ್ಕಾರದಿಂದ ಮುಚ್ಚಿಹಾಕುವ ಪ್ರಯತ್ನ ನಡೆಸಲಾಗ್ತಿದೆ. ಅಧಿವೇಶನದಲ್ಲಿ ಈ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಅವಕಾಶ ನೀಡುತ್ತೆ  ಅನ್ನೋ ಕಾರಣಕ್ಕೆ ಮುಚ್ವಿಹಾಕುವ ಯತ್ನ ನಡೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ನಾರಾಯಣಸ್ವಾಮಿ ಆರೋಪಿಸಿದರು.

 

ಕೋಲಾರ (ಡಿ.18): ಶಾಲಾ ಮಕ್ಕಳನ್ನು ಮಲದಗುಂಡಿಗೆ ಇಳಿಸಿದ ಪ್ರಕರಣವನ್ನು ರಾಜ್ಯ ಸರ್ಕಾರದಿಂದ ಮುಚ್ಚಿಹಾಕುವ ಪ್ರಯತ್ನ ನಡೆಸಲಾಗ್ತಿದೆ. ಅಧಿವೇಶನದಲ್ಲಿ ಈ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಅವಕಾಶ ನೀಡುತ್ತೆ  ಅನ್ನೋ ಕಾರಣಕ್ಕೆ ಮುಚ್ವಿಹಾಕುವ ಯತ್ನ ನಡೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ನಾರಾಯಣಸ್ವಾಮಿ ಆರೋಪಿಸಿದರು.

ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣ ಸಂಬಂಧ ಇಂದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಯಲುವಹಳ್ಳಿ‌ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದರು. ಈ ಪ್ರಕರಣದಲ್ಲಿ ಯಾರಿಗೂ ಬೆದರಿಕೆ ಹಾಕದಂತೆ ಸಿಇಓ ಪದ್ಮ ಬಸಂತಪ್ಪಗೆ ಸೂಚನೆ ನೀಡಿದರು.

ವಸತಿ ಶಾಲೆ ಪರಿಶೀಲನೆ ಬಳಿಕ ಘಟನೆ ಸಂಬಂಧ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಕ್ಕಳು ವಸತಿ ಶಾಲೆಯಲ್ಲಿ ನಡೆದಿರುವ ಪ್ರಕರಣದಿಂದ ಗಾಬರಿಯಲ್ಲಿದ್ದಾರೆ. ಮಕ್ಕಳನ್ನು ಮಲದ ಗುಂಡಿಯಲ್ಲಿ‌ ಇಳಿಸಿರುವುದು ಸಮಾಜಕ್ಕೆ ಮಾಡಿರುವ ಅಪಮಾನ. ಇದೊಂದು ತಲೆತಗ್ಗಿಸುವ ಘಟನೆ. ಈ ಘಟನೆ ನಡೆದು(ಡಿ.1ರಂದು) 15ದಿನ ಕಳೆದರೂ ಇದುವರೆಗೆ ಜಿಲ್ಲಾಡಳಿತ ಇದರ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದು ಅಚ್ಚರಿ, ಬೇಸರ ತಂದಿದೆ. ಇದರ ಜೊತೆಗೆ ಮಕ್ಕಳ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿರುವ ಆರೋಪ ಕೇಳಿಬಂದಿದೆ. ನ್ಯಾಯಾಧೀಶರು ವಸತಿ ಇಲಾಖೆಗೆ ಬೇಟಿ ನೀಡಿದ್ದಾರೆ. ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ಹಿಡಿತವಿಲ್ಲ. ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ. ಇದು ಎಲ್ಲಾ ವಸತಿ‌ಶಾಲೆಗಳಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದರು.

ತಾವು ಓದಿದ್ದ ಕೆರಾಡಿ ಕನ್ನಡ ಶಾಲೆ ದತ್ತು ಪಡೆದ ನಟ ರಿಷಬ್‌ ಶೆಟ್ಟಿ

ಕೇಸು ಹಾಕಿದರೆ ಪ್ರಕರಣ ದಾಖಲು ಮಾಡಿದರೆ ಬದಲಾವಣೆಯಾಗುವುದಿಲ್ಲ. ಸರ್ಕಾರ ಇದರ ಜವ್ದಾಬಾರಿ‌ ಹೊರಬೇಕಾಗಿದೆ. ರಾಜ್ಯದ ಮೊರಾರ್ಜಿ ದೇಸಾಯಿ ವಸತಿ‌ ಶಾಲೆಗಳ‌ ಕೊರತೆ ಬಗ್ಗೆ ಎಸ್ ಐಟಿ ತನಿಖೆಯಾಗಬೇಕು. ವಸತಿ‌ ಶಾಲೆಗಳಲ್ಲಿ ನಡೆಯುತ್ತಿರುವ ಶೋಷಣೆ ಕುರಿತು ತನಿಖೆಯಾಗಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು. ಈ ಪ್ರಕರಣ ಸರ್ಕಾರಕ್ಕೆ ಗೌರವ ತರುವುದಿಲ್ಲ. ಸಚಿವ ಎಸ್.ಸಿ.ಮಹಾದೇವಪ್ಪ ಅವರ ಮೇಲೆ‌ ವಿಶ್ವಾಸವಿದೆ. ಸಮಾಜದ ಮೇಲೆ ಕಮಿಟಮೆಂಟ್ ಇದೆ. ಸಿಎಂ ಗೂ ಇದನ್ನು ಗಂಬೀರವಾಗಿ ಪರಿಗಣಿಸಬೇಕು. ಸ್ಥಳಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಾಜಿ ಪಂಚಾಯಿತಿ ಬಗ್ಗೆ ಗೊತ್ತಿಲ್ಲ. ಯಾರೇ ಆಗಿರಲಿ ಅವರ ಮೇಲೆ ಕ್ರಮ‌ಕೈಗೊಳ್ಳಬೇಕು ಆಗ್ರಹಿಸಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ; ಬಾಲಕಿ ಬಟ್ಟೆ ಬದಲಾಯಿಸುವ ವಿಡಿಯೋ ರೆಕಾರ್ಡ್ ಮಾಡಿದ ದುರುಳರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌