ಅಂತೂ ಇಂತೂ ನಂದಿಬೆಟ್ಟ ರೋಪ್‌ವೇಗೆ ಕಾಲ ಕೂಡಿಬಂತು: ಅಂಜನಾದ್ರಿ ಬೆಟ್ಟಕ್ಕೂ ರೋಪ್‌ ವೇ

By Sathish Kumar KH  |  First Published Feb 28, 2023, 2:26 PM IST

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಜ್ಯದ ಪ್ರಮುಖ ನೈಸರ್ಗಿಕ ಪ್ರವಾಸಿ ತಾಣವಾದ ನಂದಿಬೆಟ್ಟದಲ್ಲಿ ರೋಪ್‌ವೇ ನಿರ್ಮಾಣ ಯೋಜನೆಗೆ ಮಾ.15ಕ್ಕೆ ಅಡಿಗಲ್ಲು ಹಾಕುವುದಾಗಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾಹಿತಿ ನೀಡಿದ್ದಾರೆ.


ಬೆಂಗಳೂರು (ಫೆ.28): ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಜ್ಯದ ಪ್ರಮುಖ ನೈಸರ್ಗಿಕ ಪ್ರವಾಸಿ ತಾಣವಾದ ನಂದಿಬೆಟ್ಟದಲ್ಲಿ ರೋಪ್‌ವೇ ನಿರ್ಮಾಣ ಯೋಜನೆಗೆ ಮಾ.15ಕ್ಕೆ ಅಡಿಗಲ್ಲು ಹಾಕುವುದಾಗಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂದಿಬೆಟ್ಟದಲ್ಲಿ ಮಾರ್ಚ್ 15ರೊಳಗೆ ರೋಪ್ ವೇ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದೇವೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರವೇ ದಿನಾಂಕ ಘೋಷಣೆ ಮಾಡುತ್ತೇವೆ. ಒಟ್ಟು 96 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ, ಶೀಘ್ರದಲ್ಲಿಯೇ ದೇಶದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿಯೂ ರೋಪ್‌ವೇ ನಿರ್ಮಾಣ ಕಾರ್ಯ ಆರಂಭ ಮಾಡಲಾಗುತ್ತದೆ. ಈಗ ಅಲ್ಲಿ ವಸತಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

Tap to resize

Latest Videos

ನಂದಿಬೆಟ್ಟದ ಬಳಿ ಅಪಾಯಕಾರಿ ಟ್ರಕ್ಕಿಂಗ್‌: ಕಾಲು ಜಾರಿ ಪ್ರಪಾತಕ್ಕೆ ಬಿದ್ದ ಯುವಕರು

ಜಂಗಲ್‌ ಲಾಡ್ಜ್‌ಗೆ 1 ಕೋಟಿ ರೂ. ಲಾಭ:  ಜಂಗಲ್ ಲಾಡ್ಜ್ ಸ್ ಮತ್ತು ರೆಸಾರ್ಟ್ (JLR) ಸಂಸ್ಥೆ ಈ ವರ್ಷ ಲಾಭಾದಯಕವಾಗಿದೆ. ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸ್ ಅವರು ಸಂಸ್ಥಾಪನೆ ಮಾಡಿದ್ದರು. ನೇಪಾಳದಿಂದ ಟೈಗರ್ ಟಾಪ್ಸಸ್ ಸಂಸ್ಥೆ ನೋಡಿ ಚರ್ಚೆ ಮಾಡಿದ್ದರು. 1980ಯಲ್ಲಿ ಅವರು ಬಂದು 1994ರಲ್ಲಿ ವಾಪಸ್ ಹೋದರು. ಬಳಿಕ ಜಂಗಲ್ ಲಾಡ್ಜ್ ರೆಸಾರ್ಟ್ಸ್ ಮಾಡಲಾಯಿತು. ಅರಣ್ಯ ಇಲಾಖೆಯಿಂದ ಜಾಗ ಗುರುತಿಸಿ ಪ್ರವಾಸೋದ್ಯಮ ಇಲಾಖೆಯಿಂದ ಜಂಗಲ್ ಲಾಡ್ಜ್ ರೆಸಾರ್ಟ್ಸ್ ಮಾಡಿದ್ದೇವೆ.. ಕೋವಿಡ್ ಸಂದರ್ಭದಲ್ಲಿ ಸಂಸ್ಥೆಯನ್ನ ಲಾಭದಾಯಕವಾಗಿ ಮಾಡಲಾಗಿಲ್ಲ. ಈ ವರ್ಷ ಒಂದು ಕೋಟಿ ಲಾಭ ಬಂದಿದೆ. ಒಂದು ಸಂಸ್ಥೆ ಮೂಲಕ ಆಗಿದ್ದು, ಅದರ ಮೂಲಕ ಮಕ್ಕಳಿಗೆ ಸ್ಕಾಲರ್ ಶಿಪ್, ಇನ್ಶೂರೆನ್ಸ್ ಕೊಡಿಲಾಗಿದೆ. ಇಲ್ಲಿನ ಕಾರ್ಮಿಕರಿಗೆ ಭದ್ರತೆ ದೃಷ್ಟಿಯಿಂದ ಇನ್ಶೂರೆನ್ಸ್ ಮಾಡಲಾಗಿದೆ ಎಂದು ತಿಳಿಸಿದರು.

ಸಸಿ ಹಿತ್ಲು, ಒತ್ತಿನಣಿ, ಮಂಚನಬೆಲೆ ಅಭಿವೃದ್ಧಿ: ಕೊಡಚಾದ್ರಿ, ಯಾಣ ಈ ಎರಡು ಕೇಂದ್ರ ಸರ್ಕಾರದ ಪರ್ವತ ಮಾಲಾ ಯೋಜನೆ ಅಡಿ ಸೇರಿದೆ. ಕೇಂದ್ರ ಸರ್ಕಾರವೇ ಅಭಿವೃದ್ಧಿ ಯೋಜನೆ ಮಾಡಲಿದೆ. ಪ್ರವಾಸೋದ್ಯಮ ಇಲಾಖೆಯಿಂದ ಹೊಸ ಜಾಗ ಗುರುತಿಸಲಾಗಿದೆ. ಸಸಿ ಹಿತ್ಲು ಮಂಗಳೂರು, ಉಡುಪಿಯ ಬೈಂದೂರಿನಲ್ಲಿ ಒತ್ತಿನಣೆ, ರಾಮನಗರದ ಮಂಚನಬೆಲೆ ಗುರ್ತಿಸಿದ್ದೇವೆ. ರಾಜ್ಯದ ಸಚಿವನಾಗಿ ಕಡಿಮೆ ಅವಧಿಯಲ್ಲಿ ಸಾಧ್ಯವಾದಷ್ಟು ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಮೊದಲು ಅರಣ್ಯ ಇಲಾಖೆ ಕೊಟ್ಟರು. ಬಳಿಕ ವಕ್ಫ್ ಬೋರ್ಡ್ ಕೊಟ್ಟರು. ಕೊನೆಯಲ್ಲಿ ಪ್ರವಾಸೋದ್ಯಮ ಇಲಾಖೆ ನೀಡಿದ್ದಾರೆ. ಎಲ್ಲ ಇಲಾಖೆಗಳಲ್ಲಿಯೂ ಸಾಧ್ಯವಾದಷ್ಟು ಕೆಲಸ ಮಾಡಿದ್ದೇನೆ ಎಂದರು.

ಜನಜಂಗುಳಿಯಿಂದ ದೂರ ಉಳಿಯಲು ಬಯಸಿದ್ರೆ… ಈ ಗಿರಿಧಾಮಗಳೇ ಸ್ವರ್ಗ

ಬೆಂಗಳೂರಲ್ಲಿ ಪ್ರವಾಸಿ ಸೌಧ ನಿರ್ಮಾಣ ಗುರಿ: ಬೆಂಗಳೂರಿನಲ್ಲಿ ಹಲಸೂರು ಕೆರೆ ಬಳಿ ಪ್ರವಾಸಿ ಸೌಧ ನಿರ್ಮಾಣ ಮಾಡಲಾಗುವುದು. ಪ್ರವಾಸೋದ್ಯಮ, JLR, KSTDC ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ತರಲು ಯೋಜನೆ ರೂಪಿಸಲಾಗಿದೆ. ಕೆ.ಕೆ ಗೆಸ್ಟ್ ಹೌಸ್‌ನಲ್ಲಿ ರೂಮ್ ನೀಡುವ ವಿಚಾರ ಮುನ್ನೆಲೆಗೆ ಬಂದಿದೆ. ಬೆಳಗಾವಿ ಅಧಿವೇಶನ ನಂತರ ಸ್ಯಾಂಟ್ರೋ ರವಿ ಪ್ರಕರಣ ಬಂದಿದ್ದು, ನನಗೆ ಮಾಹಿತಿ ಬಂದ ತಕ್ಷಣ ದೇವರಾಜ್ ಅನ್ನೋರನ್ನ ತೆಗೆಯುವ ಕೆಲಸ ಮಾಡಿದೆ. ರೂಮ್ ಹಂಚಿಕೆ ಮಾಡುವುದು ಡಿಪಿಆರ್ ಆಗಿದೆ. ಅದರಲ್ಲಿ ಕ್ಯಾಂಟೀನ್ ಮತ್ತೆ 50 ರೂಮ್ ರೆಂಟ್ ನಮಗೆ ಕೊಡ್ತಾರೆ. ಉಳಿದ ಎಲ್ಲಾ ಬಾಡಿಗೆ ಡಿಪಿಆರ್‌ಗೆ ಹೋಗಲಿದೆ ಎಂದು ಸಚಿವ ಆನಂದ್‌ ಸಿಂಗ್‌ ಸ್ಪಷ್ಟನೆ ನಿಡಿದರು.

click me!