ಚಳಿಗಾಲದ ಅಧಿವೇಶನಕ್ಕೆ ಪ್ರತಿಭಟನೆಯ ಬಿಸಿ, ಬಿಗಿ ಬಂದೋಬಸ್ತ್!

By Web DeskFirst Published Dec 9, 2018, 4:22 PM IST
Highlights

ಡಿಸೆಂಬರ್ 10 ರಿಂದ ನಡೆಯುವ ಚಳಿಗಾಲದ ಅಧಿವೇಶನದಿಂದ ಉತ್ತರ ಕರ್ನಾಟಕದ ಜನರು ಹಲವಾರು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಅಧಿವೇಶನಕ್ಕೆ ರೈತರ ಪ್ರತಿಭಟನೆಯ ಬಿಸಿ ತಟ್ಟಿರುವುದರಿಂದ ಸರ್ಕಾರವು ಬಿಗಿ ಭದ್ರತೆಯನ್ನೂ ಏರ್ಪಡಿಸಿದೆ.

ಬೆಳಗಾವಿ[ಡಿ.09]: ಬೆಳಗಾವಿ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 10 ರಿಂದ ನಡೆಯುವ ಚಳಿಗಾಲದ ಅಧಿವೇಶನದಿಂದ ಉತ್ತರ ಕರ್ನಾಟಕದ ಜನರು ಹಲವಾರು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಇವೆಲ್ಲದರ ನಡುವೆ ಬೆಳಗಾವಿ ಅಧಿವೇಶನದ ಭದ್ರತೆಗಾಗಿ ಸರ್ಕಾರವು ಬಿಗಿ ಬಂದೋಬಸ್ತ್ ಏರ್ಪಡಿಸಿದೆ.

ಬೆಳಗಾವಿ ಕಲಾಪ: ಉತ್ತರ ಕರ್ನಾಟಕದ ನಿರೀಕ್ಷೆಯೇನು?

ಅಧಿವೇಶದ ಸಂದರ್ಧದಲ್ಲಿ ಭದ್ರತೆ ಕಾಪಾಡುವ ನಿಟ್ಟಿನಲ್ಲಿ 7 ಮಂದಿ ಎಸ್‌ಪಿ, 11 ಎಎಸ್‌ಪಿ, 34 ಡಿಎಸ್ ಪಿ, 81 ಸಿಪಿಐ, 227 ಪಿಸ್‌ಐ ಸೇರಿದಂತೆ 4,874 ಪೊಲೀಸರನ್ನು ನಿಯೋಜಿಸಲಾಗಿದೆ.

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲ್ಯಾನ್

ನಗರ ಪೊಲೀಸ್ ಆಯಕ್ತ ಡಿ.ಸಿ.ರಾಜಪ್ಪ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದ್ದು, 30 ಕೆಎಸ್‌ಆರ್‌ಪಿ, 15 ಪ್ರಹಾರದಳ, 5ಕ್ಯೂ ಆರ್ಟಿ, ಒಂದು ಬಾಂಬ್ ನಿಷ್ಕ್ರಿಯ ದಳ ಹಾಗೂ ಒಂದು ಗರುಡ ದಳವನ್ನೂ ನಿಯೋಜಿಸಲಾಗಿದೆ. 

ಅಧಿವೇಶನಕ್ಕೂ ಮುನ್ನ ಎಚ್‌ಡಿಕೆ ಟೆಂಪಲ್ ರನ್! ಏನಿದರ ಮರ್ಮ?

ರೈತರು ಪ್ರತಿಭಟನೆ ನಡೆಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚುವರಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಸುವರ್ಣ ಸೌಧದ ಒಳಗೂ ಹೊರಗೂ ಬಿಗಿ ಬಂದೋಬಸ್ತ್ ಕಲ್ಪಿಲಾಗಿದೆ. ಇಡೀ ಬೆಳಗಾವಿ ಪೊಲೀಸ್ ಭದ್ರತಯಲ್ಲಿದ್ದು ಆಯ್ದ ಸ್ಥಳದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಕೂಡಾ ಇಡಲಾಗಿದೆ.

click me!