ಉಡುಪಿ: ದರ್ಪಣ ಸಂಸ್ಥೆಯ ಹೆಣ್ಣು ಮಕ್ಕಳ ಹುಲಿ ವೇಷ ತಂಡ

By Ravi JanekalFirst Published Sep 5, 2023, 1:41 PM IST
Highlights

ಅಷ್ಟಮಿ ಹಾಗೂ ವಿಟ್ಲಪಿಂಡಿಯ  ದಿನದಂದು ಹೆಣ್ಣು  ಮಕ್ಕಳ  ತಂಡದಿಂದ ಹುಲಿವೇಷ ಕುಣಿತ ನಡೆಯಲಿದೆ. ಈ ಮೂಲಕ ಸಾಂಪ್ರದಾಯಿಕ ಕಲೆಯಾದ ಹುಲಿ ವೇಷ ಕುಣಿತವನ್ನು ಉಳಿಸಿ ಬೆಳೆಸುವ ಕಾಯಕ ನಡೆಯಲಿದೆ.

ಉಡುಪಿ: ಅಷ್ಟಮಿ ಹಾಗೂ ವಿಟ್ಲಪಿಂಡಿಯ  ದಿನದಂದು ಹೆಣ್ಣು  ಮಕ್ಕಳ  ತಂಡದಿಂದ ಹುಲಿವೇಷ ಕುಣಿತ ನಡೆಯಲಿದೆ. ಈ ಮೂಲಕ ಸಾಂಪ್ರದಾಯಿಕ ಕಲೆಯಾದ ಹುಲಿ ವೇಷ ಕುಣಿತವನ್ನು ಉಳಿಸಿ ಬೆಳೆಸುವ ಕಾಯಕ ನಡೆಯಲಿದೆ.

ಉಡುಪಿ ಜಿಲ್ಲೆಯ ಹೆಣ್ಣು ಮಕ್ಕಳಿಗೆ ತಮ್ಮ ಹುಲಿ ವೇಷ ಕುಣಿತದ ಪ್ರದರ್ಶನವನ್ನು ಏರ್ಪಡಿಸಲು ಉತ್ತಮ ವೇದಿಕೆ ಕಲ್ಪಿಸಲಾಗಿದೆ. ಈ ಕುರಿತು ದರ್ಪಣ ಸಂಸ್ಥೆಯ ನೃತ್ಯ ನಿರ್ದೇಶಕಿ ಹಾಗೂ ಡ್ಯಾನ್ಸ್ ಟೀಚರ್ ರಮ್ಯಾ  ಅವರು ಮಾತನಾಡಿ ನಮ್ಮ ದರ್ಪಣ ಸಂಸ್ಥೆಯಲ್ಲಿ  ಸುಮಾರು ಏಳು ವರ್ಷಗಳಿಂದ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಡ್ಯಾನ್, ಸಂಗೀತ ನಾಟಕಗಳನ್ನು ಕಲಿಯುತ್ತಿದ್ದಾರೆ.

krishna janmashtami: ಕೃಷ್ಣಮಠದಲ್ಲಿ ಈ ಬಾರಿ ಶೀರೂರು ಹುಲಿವೇಷ ವಿಶೇಷ

ಅಷ್ಟಮಿ ವೇಳೆ ಹುಲಿವೇಷ ಕುಣಿಯುವುದನ್ನು ನೋಡುತ್ತಿದ್ದ ನಮಗೂ ಆಸೆ ಇತ್ತು.ಹುಡುಗರ ಜೊತೆ ಸಮಾನ ಹೆಜ್ಜೆ ಹಾಕಿ ಹುಲಿವೇಷ  ಕುಣಿಯಬೇಕು ಎಂದು ಬಯಸಿದ್ದೆವು. ಸಂಸ್ಥೆಗೆ ಸುಮಾರು 50 ಕ್ಕಿಂತ ಹೆಚ್ಚು ಮಂದಿ ಅರ್ಜಿಯನ್ನು ಹಾಕಿದ್ದು ಈಗ ನಮ್ಮಲ್ಲಿ ಒಟ್ಟಿಗೆ 5-40 ವರ್ಷದೊಳಗಿನ ಪುಟಾಣಿ ಮಕ್ಕಳಿಂದ ಹಿಡಿದು ಮಹಿಳೆಯರ ತನಕ ಒಟ್ಟು 27 ಹುಲಿ ವೇಷಗಳಿವೆ.

ಹುಲಿವೇಷ ತಂಡದ ಪ್ರಾಕ್ಟೀಸ್ ನಡಿತಾ ಇದ್ದಯ,  ನಮಗೆ A1 ಗ್ರೂಪ್ ನ ನಿತಿನ್ ಹಾಗೂ ಸುವಿದ್  ಕಾಸ್ಟ್ಯೂಮ್ ನಿಂದ ಹಿಡಿದು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದಾರೆ.ಈ ಮೂಲಕ ಸಾಂಪ್ರದಾಯಿಕ ಕುಣಿತವಾದ ಹುಲಿ ವೇಷವ ಕುಣಿತವನ್ನು ನಾವು ಕಲಿಯಬೇಕು, ಇದನ್ನು ನಾವು ಮುಂದುವರಿಸಬೇಕು ಮುಂದಿನ ಪೀಳಿಗೆಗೆ ಸಾಗಿಸಬೇಕೆಂಬ ನಿಟ್ಟಿನಲ್ಲಿ ನಮಗೆ ಉತ್ತಮ ಅವಕಾಶ ದೊರೆತಿದೆ ಎಂದರು.


ದರ್ಪಣ ಸಂಸ್ಥೆಯ ಭಾವನ ವಿಷ್ಣುಮೂರ್ತಿ ಕೆರೆಮಠ ಮಾತನಾಡಿ ಸುಮಾರು 40 ದಿನಗಳಿಂದ ಹುಲಿ ವೇಷ ತಂಡದ ಅಭ್ಯಾಸ ನಡಿತಾ ಇದೆ. ಹೆಣ್ಣು ಮಕ್ಕಳಿಗೆ ಮೈಗೆ ಪೈಂಟ್ ಹಾಕಲು ಸಾಧ್ಯವಿಲ್ಲದ ಕಾರಣ ಬಟ್ಟೆಗೆ ಪೈಂಟ್ ಮಾಡುವಂತಹ ಕೆಲಸಗಳು ನಡಿತಾ ಇದೆ. ಹುಲಿ ವೇಷ ಕುಣಿತವನ್ನು ಪ್ರದರ್ಶಿಸಬೇಕಾದರೆ ಅಷ್ಟೇ ಶಕ್ತಿ ಅತ್ಯಗತ್ಯ. ಇದೆ ಬರುವ ಸೆಪ್ಟೆಂಬರ್ 5 & 6 ಅಷ್ಟಮಿ ಹಾಗೂ ವಿಟ್ಲಪಿಂಡಿಯ  ದಿನದಂದು  ಹೆಣ್ಣು  ಮಕ್ಕಳ  ತಂಡದಿಂದ ಹುಲಿವೇಷ ಕುಣಿತ ಉಡುಪಿ ಜಿಲ್ಲೆಯಾದ್ಯಾoತ ಸಂಚರಿಸಲಿದೆ. ನಮ್ಮ ದರ್ಪಣ ಸಂಸ್ಥೆಯ ಹೆಣ್ಣು ಮಕ್ಕಳ ಹುಲಿವೇಷ ತಂಡವನ್ನು ಪ್ರೋತ್ಸಾಹಿಸಿ ಎಂದರು.

 

ಸನಾತನಧರ್ಮ ಎಂಬುದು ಸದಾಕಾಲ ಇರುವಂತದ್ದು; ಪೇಜಾವರಶ್ರೀ

ಅಲೆವೂರು ನಿವಾಸಿಯಾದ  ಸುಷ್ಮಾ ಎಸ್ ಬಂಟ್ವಾಳ  ಮಾತನಾಡಿ ಅದೆಷ್ಟೋ ವರ್ಷದಿಂದ ನಮ್ಮ ಮಕ್ಕಳಿಗೆ ಹುಲಿವೇಷ ಹಾಕಬೇಕೆಂಬ ಆಸೆ ಇತ್ತು  ಇದಕ್ಕೆ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಹುಲಿ ವೇಷ ಕುಣಿತದ  ಅಭ್ಯಾಸಕ್ಕೆ ತಮ್ಮದೇ ಸ್ಥಳವನ್ನು ನೀಡಿ A1 ತಂಡ ಸಹಕರಿಸುತ್ತಿದೆ.
ನಮ್ಮ ಜಿಲ್ಲೆಯ ಜನರಲ್ಲೂ ಕಲೆ ಇದೆ ಪ್ರತಿಭೆಗಳಿವೆ, ಸಮಾಜದಲ್ಲಿ ನಮಗೂ ಸ್ಥಾನಮಾನಗಳಿವೆ. ಪ್ರತಿಭೆಗಳಿವೆ.ನಮ್ನಲ್ಲಿರುವ ಕಲೆಯನ್ನು ಇಡೀ ಸಮಾಜಕ್ಕೆ ತೋರಿಸುವ ಅದ್ಭುತ ವೇದಿಕೆಯನ್ನು ದರ್ಪಣ ಸಂಸ್ಥೆ ಸೃಷ್ಟಿಸಿದೆ ಎಂದರು.

click me!