2023ಕ್ಕೆ ರಾಜ್ಯಕ್ಕೆ ಬರಲಿದ್ದಾರೆ ಟಿಬೆಟ್ ಧರ್ಮ ಗುರು ದಲೈಲಾಮ

Published : Oct 09, 2022, 05:24 PM IST
 2023ಕ್ಕೆ ರಾಜ್ಯಕ್ಕೆ ಬರಲಿದ್ದಾರೆ ಟಿಬೆಟ್ ಧರ್ಮ ಗುರು ದಲೈಲಾಮ

ಸಾರಾಂಶ

ಆಚಾರ್ಯ ಬುದ್ಧರಕ್ಕಿತ ಮಹಾತೇರರ 100 ವರ್ಷದ ದಿನಾಚರಣೆಗೆ ದಲೈ ಲಾಮ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. 2023 ರಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು,  ದಲೈ ಲಾಮ ಅವರನ್ನು ಭೇಟಿಯಾಗಿ ಆಹ್ವಾನ ನೀಡಲಾಗಿದೆ.

ಬೆಂಗಳೂರು (ಅ.9): ಮೈಸೂರು ಮತ್ತು ಬೆಂಗಳೂರಿನ ಮಹಾಬೋಧಿ ಸೊಸೈಟಿಯಲ್ಲಿ 2023ಕ್ಕೆ ನಡೆಯಲಿರುವ ಆಚಾರ್ಯ ಬುದ್ಧರಕ್ಕಿತ ಮಹಾತೇರ ಭಂತೇಜೀಯವರ 100ನೇ ವರ್ಷದ ಹುಟ್ಟು ಹಬ್ಬದ ದಿನಾಚರಣೆಗೆ ಬೌದ್ಧ ಧರ್ಮ ಗುರುಗಳಾದ ದಲೈಲಾಮ ಭಾಗವಹಿಸಲಿದ್ದಾರೆ. ಮಹಾಬೋಧಿ ಸೊಸೈಟಿಯ ಸಂಸ್ಥಾಪಕ ಮತ್ತು ಬೌದ್ಧ ಮಹಾಗುರು ಆಚಾರ್ಯ ಬುದ್ಧರಕ್ಕಿತ ಮಹಾತೇರ ಅವರು ಬೆಂಗಳೂರನ್ನ ಕೇಂದ್ರವಾಗಿಸಿಕೊಂಡು ದೇಶದ ವಿವಿಧ ಭಾಗಗಳಲ್ಲಿ ಮಹಾಬೋಧಿ ಸೊಸೈಟಿಯ ಶಾಖೆಗಳನ್ನು ತೆರೆದು ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ದೇಶಾದ್ಯಂತ ಮತ್ತು ಹೊರದೇಶಗಳಲ್ಲಿಯೂ ಸಾಕಷ್ಟು ಕೆಲಸಗಳನ್ನು ಮಾಡುವ ಮೂಲಕ ಭಾರತೀಯ ಬುದ್ಧನ ಸರಳ ಜೀವನವನ್ನು ಹಾಗೂ ಬೌದ್ಧ ದಮ್ಮದ ಸಾರ ಸತ್ವವನ್ನು ಜಗತ್ತಿನಾದ್ಯಂತ ಪ್ರಚುರಪಡಿಸುವ ಮಹತ್ತರ ಕೆಲಸವನ್ನು ಮಾಡಿದ್ದಾರೆ. ಇದರಿಂದ ದೇಶದ ತುಂಬೆಲ್ಲಾ ಸಾವಿರಾರು ಮಕ್ಕಳು ಗುಣಮಟ್ಟದ ಮತ್ತು ನೈತಿಕ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಇಂತಹ ಮಹಾನ್‌ ಸಾಧಕರಾದ ಆಚಾರ್ಯ ಭಂತೇ ಅವರ ನೂರನೇ ವರ್ಷದ ಹುಟ್ಟು ಹಬ್ಬದ ಆಚರಣೆಯನ್ನು ವಿಭಿನ್ನ ಮತ್ತು ವಿಶಿಷ್ಠವಾಗಿ 2023 ರಲ್ಲಿ ಆಚರಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಬೌದ್ದ ದಮ್ಮದ ಜಗದ್ಗುರು ದಲೈ ಲಾಮ ಅವರನ್ನು ಭೇಟಿಯಾಗಿ ಆಹ್ವಾನಿಸಿದಾಗ ಅವರು ಅತ್ಯಂತ ಸಂತೋಷದಿಂದ ಒಪ್ಪಿ ಕಾರ್ಯಕ್ರಮಕ್ಕೆ ಸಾನ್ನಿಧ್ಯವನ್ನು ವಹಿಸಲಿದ್ದಾರೆ.

ಈ ಆಹ್ವಾನ ಸಂದರ್ಭದಲ್ಲಿ ಮಹಾಬೋಧಿ ಸೊಸೈಟಿಯ ಅಧ್ಯಕ್ಷ ಕಶ್ಯಪ ಮಹಾತೇರ, ಪ್ರಧಾನ ಕಾರ್ಯದರ್ಶಿ ಆನಂದ ಭಂತೇಜಿ, ಪುಣ್ಯರಕ್ಕಿತ ತೇರಾ, ಮೈಸೂರು ಎಂಬಿಎಸ್‌ ಸಿಇಒ ಜಗ್ಮೇಟ್‌ ವ್ಯಾಂಡುಸ್‌ ಜ್ಯೋತಿ, ಪ್ರಧಾನ ವ್ಯವಸ್ಥಾಪಕ ವಾಜೀರ ದೋರ್ಜಯ್‌ ಇದ್ದರು.

ದಲೈ ಲಾಮಾರನ್ನು ಟಿಬೆಟ್‌ನಿಂದ ಸೇಫಾಗಿ ಕರೆತಂದಿದ್ದ ಕೊನೆಯ ಭಾರತೀಯ ಯೋಧ ನಿಧನ!

ಮಹಾಬೋಧಿ ಶಾಲೆಗೆ ದಲೈಲಾಮರ ಪ್ರಧಾನ ಶಿಕ್ಷಕ ಭೇಟಿ: ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಮಹಾಬೋಧಿ ಶಾಲೆಗೆ ದಲೈ ಲಾಮಾ ಅವರ ಪ್ರಧಾನ ಶಿಕ್ಷಕ ಕ್ಯಾಬ್ಜೆ ಲಿಂಗ್‌ ರಿಂಪೋಚೆ ಭೇಟಿ ನೀಡಿದ್ದರು. ಮಹಾಬೋಧಿ ಸಂಸ್ಥೆಯಲ್ಲಿನ ಹಿರಿಯ ಸನ್ಯಾಸಿಗಳನ್ನು ಮತ್ತು ಶಿಕ್ಷಕ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸುತ್ತಾ ಜಗತ್ತಿನಲ್ಲಿ ಬುದ್ಧ ಇಂದು ಪ್ರಸ್ತುವಾಗಿದ್ದಾರೆ. ಪ್ರಪಂಚದಾದ್ಯಂತ ಶಾಂತಿ, ಪ್ರೀತಿ, ಕರುಣೆ ಮತ್ತು ಮಮತೆಯ ಆಧಾರದಲ್ಲಿ ಮನುಷ್ಯತ್ವ ನಿಲ್ಲಬೇಕಿದೆ. ದ್ವೇಷ, ಅಸೂಯೆ, ವೈರಾಗ್ಯಗಳು ದೂರವಾಗಿ ಮಾನವೀಯ ನೆಲಗಟ್ಟಿನಲ್ಲಿ ಜೀವಸಂಕುಲಗಳನ್ನು ಕಟ್ಟಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದರು.

 

ಚೀನಾಕ್ಕಿಂತ, ಭಾರತದಂಥ ಮುಕ್ತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾಯೋಕೆ ಇಷ್ಟ: ದಲೈಲಾಮಾ

ಹಾಗಾಗಿ ಭಗವಾನ್‌ ಬುದ್ಧರ ಸರಳ ತತ್ವಾದರ್ಶಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ನಾವು ಸ್ವಾಸ್ಥ್ಯ ಸಮಾಜ ನಿರ್ಮಿಸಲು ಸಾಧ್ಯ ಎಂದಿದ್ದರು. ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಆನಂದ ಭಂತೆಜಿ ಅವರು ಮಹಾಬೋಧಿ ಸಂಸ್ಥೆ ಮತ್ತು ದಲೈಲಾಮ ಅವರ ಸಂಬಂಧ ಮತ್ತು ಅವರ ಭೇಟಿಯ ಅವಿಸ್ಮರಣೀಯ ಕ್ಷಣಗಳನ್ನು ವಿವರಿಸಿದ್ದರು. ಬೈಲಕುಪ್ಪೆಯಲ್ಲಿ ಟಿಬೆಟಿಯನ್‌ ಅತಿದೊಡ್ಡ ವಸಾಹತು ಹಂಚಿಕೆಗೆ ಸರ್ಕಾರದಿಂದ ಪಡೆದ ಬೆಂಬಲದ ಬಗ್ಗೆಯೂ ವಿವರಿಸಿದ್ದರು. ಈ ವೇಳೆ ಶಾಲೆಯ ಸಿಇಒ ಜಗ್ಮೇಟ್‌ ಜ್ಯೋತಿ, ಶಿಕ್ಷಕ ವೃಂದ, ಆಡಳಿತ ಮಂಡಳಿ ಸದಸ್ಯರು, ವಾರ್ಡನ್‌ಗಳು ಮತ್ತು ಪೋಷಕರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು
ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ