ತಮ್ಮನನ್ನು ಉಳಿಸಲು ಹೋದ ಮೂರು ಅಕ್ಕಂದಿರು ನೀರುಪಾಲು: ವಿಜಯಪುರದಲ್ಲಿ ಮನಕಲಕುವ ಘಟನೆ

By Sharath Sharma Kalagaru  |  First Published Nov 2, 2022, 2:55 PM IST

Vijayapura Local News: ತಮ್ಮನನ್ನು ಉಳಿಸಲು ಹೋದ ಮೂವರು ಅಕ್ಕಂದಿರು ತಮ್ಮನ ಜೊತೆಗೆ ನೀರಿನಲ್ಲಿ ಕೊಚ್ಚಿ ಹೋದ ದಾರುಣ ಘಟನೆ ವಿಜಯಪುರದಲ್ಲಿ ನಡೆದಿದೆ. 


ವಿಜಯಪುರ: ನೀರಿನಲ್ಲಿ ಬಿದ್ದ ತಮ್ಮನನ್ನು ಕಾಪಾಡಲು ಹೋದ ಮೂವರು ಅಕ್ಕಂದಿರು ತಮ್ಮನ ಸಮೇತ ಜಲಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ನಾಲ್ಕೂ ಮಕ್ಕಳು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿತಾಂಡದಲ್ಲಿ ಈ ದುರ್ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡದಲ್ಲಿ ವಾಸಿಸುತ್ತಿದ್ದ ಮಕ್ಕಳು. ಮುಳುಗುತ್ತಿರುವ ತಮ್ಮನ್ನನ್ನ ರಕ್ಷಿಸಲು ಹೋದ ಮೂರು ಜನ ಅಕ್ಕಂದಿರು ನೀರು ಪಾಲಾಗಿದ್ದಾರೆ. ಅಭಿ ವೀರ್ಯಾ ನಾಯ್ಕ (13), ಅಶ್ವಿನಿ (14), ಕಾವೇರಿ (18)  ಅಪೂರ್ವಾ (18)  ಸಾವನ್ನಪ್ಪಿ ಒಂದೇ ಕುಟುಂಬದ ಸದಸ್ಯರು. 

ಮೊದಲು ಅಭಿ‌ನೀರಿನಲ್ಲಿ‌ಮುಳುಗುತ್ತಿದ್ದ. ಈತನ ರಕ್ಷಣೆ ಒಬ್ಬರಾದಂತೆ ಒಬ್ಬರು ಹೋಗಿ ನೀರು ಪಾಲಾಗಿದ್ದಾರೆ. ಮೂರು ಶವ ಪತ್ತೆಯಾಗಿದ್ದು ಅಪೂರ್ವಾ ಶವಕ್ಕಾಗಿ ಹುಡುಕಾಟ ಮಾಡಲಾಗುತ್ತಿದೆ. ಇತ್ತೀಚಿಗೆ ನಿರಂತರ ಮಳೆಯಿಂದಾಗಿ ಕೆರೆ, ಹಳ್ಳ ಹಾಗೂ ಹೊಂಡಗಳು ತುಂಬಿವೆ. ಹೊಂಡದಲ್ಲಿ‌ ಮುಳುಗಿ ಸಾವನಪ್ಪಿರುವ ಘಟನೆ ನಡೆದಿದೆ. ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. 

Tap to resize

Latest Videos

ಇನ್ನಷ್ಟು ಮಾಹಿತಿ ಶೀಘ್ರದಲ್ಲಿ

click me!